ಮಸೂತಿ ಸಂಗನಬಸವೇಶ್ವರ ಶಾಲೆಯ ಶಿಕ್ಷಕನಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಗರಿಮೆ
ಕೊಲ್ಹಾರ:ಸೆ.೧೨:ತಾಲೂಕಿನ ಮಸೂತಿ ಗ್ರಾಮದ ಅನುದಾನಿತ ಶ್ರೀ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಬಹುಮುಖ ಪ್ರತಿಭೆಯ ಕ್ರೀಯಾಶೀಲ,ಉತ್ಸಾಹಿ ಶಿಕ್ಷಕ ಸಾಹಿತಿ ಜಗದೀಶ್ವರ ಗು ಸಾಲಳ್ಳಿ ಯವರಿಗೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ಬೆAಗಳೂರು ಇವರು ಕೊಡಮಾಡುವ “ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ”ಗೆ ಆಯ್ಕೆಯಾಗಿದ್ದು,ದಿನಾಂಕ-೧೪-೦೯-೨೦೨೪ ರಂದು ಶಿಕ್ಷಕರ ಸದನ ಬೆಂಗಳೂರುನಲ್ಲಿ ಜರುಗುವ ಶಿಕ್ಷಕರ ದಿನಾಚರಣೆಯಲ್ಲಿ ಮಾಜಿ ಶಿಕ್ಷಣ ಸಚಿವರು,ಹಾಲಿ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರಾದ ಮಧುಬಂಗಾರಪ್ಪರವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ,ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡುರಾವರವರು,ಸಚಿವರಾದರಾಮಲಿAಗಾರಡ್ಡಿಯವರು,ವಿಧಾನ ಪರಿಷತ್ ಸದಸ್ಯರುಗಳಾದ ಪ್ರಕಾಶ್ ಹುಕ್ಕೇರಿ,ಹಣಮಂತ ನಿರಾಣಿ, ಪುಟ್ಟಣ್ಣನವರು,ಎಸ್ ವಿ ಸಂಕನೂರು,ಸೇರಿದAತೆ ಹಲವು ವಿಧಾನ ಪರಿಷತ್ ಸದಸ್ಯರು ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕ. ರಾ.ಅ.ಪ್ರಾ.ಶಾ.ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎನ್ ರಾಜಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.