ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ನೇಮಕ
ಕಾಳಗಿ :ಸೆ.೧೨: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದಿ ಜಿಲ್ಲಾ ಸಂಚಾಲಕ ಕಾಶಿನಾಥ ಶೆಳ್ಳಗಿ ಹಾಗೂ ತಾಲೂಕು ಸಂಚಾಲಕ ಮಾರುತಿ ಕೆ.ತೆಗಲತಿಪ್ಪಿ ನೇತೃತ್ವದಲ್ಲಿ ಸಭೆ ನಡೆಸಿ ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ತಾಲೂಕು ಸಂಘಟನಾ ಸಂಚಾಲಕರಾಗಿ ಸುಂದರ ರಟಕಲ್, ಬಸವರಾಜ ವಜ್ರಗಾಂವ್ ನೇಮಕ ಮಾಡಲಾಯಿತು. ಮಹಿಳಾ ಘಟಕದ ತಾಲೂಕು ಸಂಚಾಲಕಿಯಾಗಿ ರೈಮನ್ ಬೇಗಮ್, ಶಾಂತಮ್ಮ ಭೂತಪೂರ, ಸಂಘಟನಾ ಸಂಚಾಲಕಿಯಾಗಿ ಅನುಸೂಯಬಾಯಿ ಹಲಚೇರಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಾಶಿನಾಥ ಶೆಳ್ಳಗಿ, ದಲಿತ ಮುಖಂಡ ನಾಗೇಂದ್ರಪ್ಪ ಅಂಕನ, ಬಸವರಾಜ ಮೇಲ್ಕೇರಿ, ತಾಲೂಕು ಸಂಚಾಲಕ ಮಾರುತಿ ತೇಗಲತಿಪ್ಪಿ, ಚಿತ್ತಾಪುರ ತಾಲೂಕು ಮಹಿಳಾ ಸಂಚಾಲಕಿ ಪವಿತ್ರ, ವಿಜಯಕುಮಾರ್ ಕಮಕನೂರ ಇದ್ದರು.