ಏಳೆಂಟು ಜನ ಸಚಿವರಿಂದ ಸಿಎಂ ಕುರ್ಚಿಗೆ ಟವಲ್ ಹಾಕಲಾಗಿದೆ; ವಿಪಕ್ಷ ನಾಯಕ ಆರ್ ಅಶೋಕ್
ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಅ.4: ಏಳೆಂಟು ಜನ ಸಚಿವರಿಂದ ಸಿಎಂ ಕುರ್ಚಿಗೆ ಟವಲು ಹಾಕಲಾಗಿದ್ದು, ಕಾಂಗ್ರೇಸ್ ಸರ್ಕಾರದ ಪಾಪದ ಕೊಡ ತುಂಬಿ ಅದಾಗೇ ಬೀಳಬೇಕು. ಬಿಜೆಪಿಯ ಯಾರೋಬ್ಬರು ಕೂಡ ಕಾಂಗ್ರೇಸ್ ಸರ್ಕಾರವನ್ನು ಬೀಳಿಸಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.ನಗರದಲ್ಲಿ  ಬಿಜೆಪಿ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಿದ್ಧರಾಮಯ್ಯನವರಿಗೆ ಅವರ ಪಕ್ಷದವರೇ ವಿರೋಧಿಗಳಾಗಿದ್ದು, ಕಾಂಗ್ರೆಸ್ ನವರಿಂದಲೇ ವಿಪಕ್ಷಕ್ಕೆ ದಾಖಲೆಗಳು ಸಿಗುತ್ತಿವೆ. ಆದರೆ ಮೆಲ್ನೋಟಕ್ಕೆ ಮಾತ್ರ ಬಿಜೆಪಿಯಿಂದ ಸರ್ಕಾರ ಅತಂತ್ರ ಯತ್ನ ಆರೋಪ ಮಾಡುತ್ತಿದ್ದಾರೆ. ಕೊಟ್ಟವನು ಯಾರು, ತೆಗೆದುಕೊಂಡವನು ಯಾರು ಹೇಳಲಿ ಎಂದು ವಾಗ್ದಾಳಿ‌ ನಡೆಸಿದರು.ಕಾಂಗ್ರೆಸ್ ನವರು ನನ್ನ ರಾಜೀನಾಮೆ ಕೇಳಿದ್ದರು. ಅದರಂತೆ ನಾನು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಈ ಬಗ್ಗೆ ನಿನ್ನೆ 24 ಗಂಟೆ ಗಡುವು ನೀಡಿದ್ದು, ಆದರೆ ಇದುವರೆಗೂ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿಲ್ಲ. 24 ಗಂಟೆಗೆ ಇನ್ನೂ ಸಮಯವಿದೆ ಕಾಂಗ್ರೆಸ್ ಪಕ್ಷದವರು ಧೈರ್ಯ ತೋರಿಸಲಿ ಎಂದು ಸವಾಲು ಹಾಕಿದರು.ಆರ್.ಅಶೋಕ್ , ಹೆಚ್ ಡಿಕೆ ರಿಂದ ಹುಚ್ಚರಂತೆ ಮಾತು ಎಂಬ ಸಚಿವ ಬೋಸರಾಜು ಹೇಳಿಕೆಗೆ ಆರ್ ಅಶೋಕ್ ತಿರುಗೇಟು ನೀಡಿದ್ದು, ಅಧಿಕಾರ ಹಣ ಇದ್ದಾಗ ಆ ರೀತಿ ಮಾತುಗಳನ್ನಾಡುತ್ತಾರೆ. ಆದರೆ ನಾನು ಕೆಳಮಟ್ಟಕ್ಕಿಳಿದು ಪ್ರತಿಕ್ರಿಯಿಸಲು ಹೋಗಲ್ಲ ಎಂದ ಅವರು, 14 ಜನ ಶಾಸಕರಿಗೆ ಆಪರೇಷನ್ ಕಮಲಕ್ಕೆ ಯತ್ನ ಆರೋಪದಲ್ಲಿ ಯಾವುದೇ ಉರುಳಿಲ್ಲ. ಆ 14 ಜನ ಶಾಸಕರು ಯಾರೆಂದು ಹೇಳಲಿ, ದೂರು ದಾಖಲಿಸಲಿ. ನಾವಂತು ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸಲು ಹೋಗಲ್ಲ ಎಂದು ಪುನರುಚ್ಚರಿಸಿದರು.