ಶ್ರೀಕಂಠನ ಸನ್ನಿಧಿಯಲ್ಲಿ ದಸರಾಹೋತ್ಸವ
ಸಂಜೆವಾಣಿ ನ್ಯೂಸ್
ನಂಜನಗೂಡು: ಅ.04:– ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಾಸಕರಾದ ದರ್ಶನ್ ಧ್ರುವ ನಾರಾಯಣ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿ ನಾಡ ಹಬ್ಬ ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದಿದೆ ನಮ್ಮ ದಸರಾ ಗೆ ವಿಶೇಷ ಸ್ಥಾನಮಾನವಿದೆ ದಸರಾ ಆಚರಣೆಯನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಉದ್ದೇಶದಿಂದ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಹೊರ ತರುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಗ್ರಾಮೀಣ ಪ್ರದೇಶದ ಪ್ರತಿಭಾವಂತರು ಯುವಜನತೆ ವಯಸ್ಸಿನ ತಾರತಮ್ಯವಿಲ್ಲದೆ ತಮ್ಮ ಕಲೆ ಪ್ರದರ್ಶಿಸುವಂತೆ ಕಿವಿ ಮಾತು ಹೇಳಿದರು.
ಇನ್ನು ಈ ವೇಳೆ ಮಹಿಳಾ ಸಂಘ ಸಂಸ್ಥೆಗಳು ಸಾಲ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು ಬಳಿಕ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಡಲೆ ಕೇಶವಮೂರ್ತಿ ನಗರಸಭೆ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ಉಪಾಧ್ಯಕ್ಷರಾದ ರಿಯಾ ನ ಬಾನು ನಗರ ಬ್ಲಾಕ್ ಅಧ್ಯಕ್ಷರು ಸಿಎಂ ಶಂಕರ್ ಇ.ಓ ರಾಜೇಶ್ ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ ನಗರಸಭೆ ಸದಸ್ಯರಾದ ಗಾಯತ್ರಿ ಗಂಗಾಧರ ಮಹೇಶ್ ರಮೇಶ್ ದೀಪು ರವಿ ಮುಖಂಡರಾದ ಎನ್‍ಎಂ ಮಂಜುನಾಥ್ ಸಿದ್ದೀಕ್ ಸತೀಶ್ ಗೌಡ ಸೇರಿದಂತೆ ಇತರರು ಇದ್ದರು.