ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಪ್ತಸಾಗರ ಗ್ರಾಮದ ಶಾರದಾ ಶಾಲೆಯ ವಿದ್ಯಾರ್ಥಿ/ನಿಯರ ಸಾಧನೆ
ಅಥಣಿ : ಸೆ.೧೨:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ವೈಯಕ್ತಿಕ ಪಂದ್ಯಾಟಗಳು, ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಜರುಗಿದವು.
ಈ ಕ್ರೀಡಾಕೂಟದಲ್ಲಿ ತಾಲೂಕಿನ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಶಾರದಾ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ/ನಿಯರು ಭಾಗವಹಿಸಿದ್ದರು.
ಶ್ರೇವಂತಿ ಸದಾಶಿವ ಬಡಿಗೇರ ಬಾಲಕಿಯರ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಹಾಗೂ ಗಂಡು ಮಕ್ಕಳ ಚಕ್ರ ಎಸೆತದಲ್ಲಿ ಫಯಾಜ ಪೈಗಂಬರ ಚಿಣಗಿ ಪ್ರಥಮ ಸ್ಥಾನ ಮತ್ತು ಗಂಡು ಮಕ್ಕಳ ಚಕ್ರ ಎಸೆತದಲ್ಲಿ ಮೈಬೂಬ ಇಬ್ರಾಹಿಂ ಹುಕ್ಕೇರಿ ದ್ವಿತೀಯ ಸ್ಥಾನ ಪಡೆದು ಮೂವರು ಅಥಣಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸುರೇಶ ಸವದಿಯವರ ನೇತೃತ್ವದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ ಹಳ್ಳೂರ ಮಕ್ಕಳಿಗೆ ಅತ್ಯುತ್ತಮ ತರಬೇತಿ ನೀಡಿದ್ದರು.
ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ, ಸಮಸ್ತ ಪಾಲಕ ಬಂಧುಗಳು, ಶಾರದಾ ಹಿರಿಯ ವಿದ್ಯಾರ್ಥಿ/ನಿಯರು, ಗ್ರಾಮಸ್ಥರು, ಆಡಳಿತ ಮಂಡಳಿಯವರು ಹಾಗೂ ಸಂಸ್ಥೆಯ ಸಂಸ್ಥಾಪಕ ಡಿ.ಬಿ ನದಾಫ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥ ಮುಕುಂದ ತೀರ್ಥ ಹಾಗೂ ಎಲ್ಲ ಶಿಕ್ಷಕ-ಶಿಕ್ಷಕಿಯರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.