ಹಳ್ಳಿಖೇಡ(ಬಿ): ಪುರಸಭೆ ಅಧ್ಯಕ್ಷೆಯಾಗಿ ಜಗವೇವಿ ಶಂಕೆ, ಉಪಾಧ್ಯಕ್ಷೆಯಾಗಿ ನಸರೀನ ಬೇಗಂ ಅವಿರೋಧ ಆಯ್ಕೆ
ಸಂಜೆವಾಣಿ ವಾರ್ತೆ
ಹುಮನಾಬಾದ್:ಸೆ.೧೨: ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಜಗದೇವಿ ರಾಜು ಶಂಕೆ ಹಾಗೂ ಉಪಾಧ್ಯಕ್ಷೆಯಾಗಿ ನಸರೀನ ಬೇಗಂ ಎಮ್‌ಡಿ ಗೌಸೋದ್ದೀನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ,
ತಹಶೀಲ್ದಾರ್ ಅಂಜುಮ್ ತಬಸುಮ್ ಅವರ ನೇತ್ರತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಗದೇವಿ ರಾಜು ಶಂಕೆ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ನಸರೀನ ಬೇಗಂ ಎಮ್‌ಡಿ, ಗೌಸೋದ್ದೀನ್ ಒಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ನಿಗದಿತ ಅವಧಿಗೆ ಚುನಾವಣಾಧಿಕಾರಿಗಳು ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಿದರು.
ಈ ಸಂಧರ್ಭದಲ್ಲಿ ಪುರಸಭೆ ಸದ್ಯಸರಾದ, ಮಹಾಂತಯ್ಯ ತೀರ್ಥ್, ನಾಗರಾಜ ಹಿಬಾರೆ, ವಿಜಯಕುಮಾರ ಜಗದಾಳೆ, ಯುಸೂಫ್ ಸೌದಾಗರ್, ಮಲ್ಲಿಕಾರ್ಜುನ ಪ್ರಭಾ, ವೀರಶೆಟ್ಟಿ ದೊಡ್ಡಮನಿ, ಎಮ್‌ಡಿ ಆರೀಪ, ಅಬ್ದುಲ್ ರಜಾಕ, ಅಬ್ದುಲ್ ಫಯೂಮ್, ಸಾಜೀದ ಪಟೇಲ್, ಹುರುಮತ್ ಬೇಗಂ, ನುರಬೀ ಮಹೇಬುಬ, ಸರಸ್ವತಿ ಜಾಧವ್, ಉಶಾ ರವೀಂದ್ರ, ಹೀನಾ ಬೇಗಂ, ಪ್ರಿಯಾಂಕಾ ಮುರಳಿ, ಇಂದುಮತಿ ವೀರಣ್ಣಾ, ಜೋಹರಾಬಾನು ಎಮ್‌ಡಿ ಹಸನ್, ಪುರಸಭೆ ಮುಖ್ಯಾಧಿಕಾರಿ ಅಶೋಕ ಚನ್ನಕೋಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರಮಿಯ್ಯಾ, ಕಾಂಗ್ರೆಸ್ ಯುವ ನಾಯಕ ವಿಜಯಕುಮಾರ ಶಾಹಪುರಕರ್, ಇದ್ದರು.