ಅತಿ ವಿಜೃಂಭಣೆಯಿಂದ ವಿಶ್ವಕರ್ಮ ಜಯಂತಿ ಆಚರಣೆ:ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ
ಕಲಬುರಗಿ:ಸೆ.11: ಪ್ರತಿವರ್ಷದಂತೆ ಈ ವರ್ಷವೂ ಕೂಡ ಅತಿ ವಿಜೃಂಭಣೆಯಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಲು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅಧಿಕಾರಿಗಳಿಗೆ ಸೂಚಿಸಿದರು.
ಮಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆಪ್ಟೆಂಬರ್ 17 ರಂದು ಡಾ.ಎಸ್.ಪಂಡಿತ್ ರಂಗಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚಿಸಿದರು.
ಭಾವಚಿತ್ರಕ್ಕೆ ಮಾಲಾರ್ಪಣೆ ಹೂದಾನಿಗಳಿಂದ ಆಲಂಕರಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಕುಡಿಯುವ ನೀರು ಹಾಗೂ sಸ್ವಚ್ಛತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲ ಸರಕಾರಿ, ಅರೆಸರಕಾರಿ, ಕಚೇರಿಗಲ್ಲಿ .ಮತ್ತು ಸರಕಾರಿ ಶಾಲಾ ಕಾಲೇಜಿಗಳಲ್ಲಿ, ತಾಲ್ಲೂಕು ಜಿಲ್ಲಾ ಪಂಚಾಯಿತಿಗಳಲ್ಲಿ ಕಡ್ಡಯವಾಗಿ ಬೆಳಿಗ್ಗೆ 9 ಗಂಟೆಗೆ ಆಚರಿಸಬೇಕು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮಾತನಾಡಿ,ನಾಡಗೀತೆ ಸಂಗೀತ ಕಾರ್ಯಕ್ರಮ ಹಾಗೂ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗುವುದು ಎಂದರು ಸಮಾಜದ ಮುಖಂಡರು ಒಬ್ಬ ನುರಿತ ಉಪನ್ಯಾಸಕರನ್ನು ಹಾಗೂ ಒಬ್ಬ ಅಧ್ಯಕ್ಷರನ್ನು ನೇಮಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು, ಹಾಗೂ ರಾಜ್ಯ ಪ್ರಾಧಾನ ಕಾರ್ಯದರ್ಶಿಗಳಾದ ಲೋಹಿತವಾಯ ಕಲ್ಲೂರ, ಕಲಬುರಗಿ ಮತ್ತು ಬೀದರ ಜಿಲ್ಲೆಗಳ ಉಸ್ತುವಾರಿ ಅಶೋಕ ಪೋತ್ತದಾರ, ಗೌರವ ಅಧ್ಯಕ್ಚ ಸುಧಾಕರ್ ಎನ್ ಯುವಘಟಕ ಸಂಘದ ಅಧ್ಯಕ್ಷರು ದೇವೇಂದ್ರಪ್ಪ ಕೆ ವಿಶ್ವಕರ್ಮ, ಆಳಂದ ಅದ್ಯಕ್ಷರು ಬಸವರಾಜ ಕೆ ಪಂಚಾಳ ಆಳಂದ ಅಧ್ಯಕ್ಷರು,ಕೋಶಧ್ಯಾಕ್ಷರು ಮನೋºಪುತ್ವರ,ಪ್ರಧಾನ ಕಾರ್ಯದರ್ಶಿಗಳು ಆಳಂದ ಸಂಜುಕುಮಾರ ಸಭೆಯಲ್ಲಿ ಇದ್ದರು.