ಯುವಜನೋತ್ಸವ ಮ್ಯಾರಥಾನ ಸ್ಪರ್ಧೆ
ಕಲಬುರಗಿ:ಸೆ.11: ನಗರದಲ್ಲಿ ಬುಧುವಾರದಂದು ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ,ಬೆಂಗಳೂರು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, .ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ನೆಹರು ಯುವ ಕೇಂದ್ರ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಣ್ಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕಲಬುರಗಿ.ರೆಡ್ ರಿಬ್ಬನ್ ಕ್ಲಬ್ ಎನ್.ಎಸ್.ಎಸ್.ಘಟಕ.ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ “ಯುವಜನೋತ್ಸವ 2024-25” ಮ್ಯಾರಥಾನ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿಭಾಗೀಯ ಜಂಟಿ ನಿರ್ದೇಶಕರ ಕಾರ್ಯಾಲಯದ ಉಪನಿರ್ದೇಶಕ ಡಾ.ಶರಣಬಸಪ್ಪಾ ಗಣಜಲಖೇಡ್ ರಿಬ್ಬನ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಒಂದು ಮ್ಯಾರಥಾನ ಸ್ಪರ್ಧೆಯು ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಆರಂಭವಾಗಿ ನಗರದ ಜಗತ್ ವೃತ್ತ, ಗೋವಾ ಹೊಟೇಲ್,ಆನಂದ ಹೊಟೇಲ್ ಮಾರ್ಗವಾಗಿ ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಬಂದು ಸ್ಪರ್ಧೇ ಕೊನೆಕೊಂಡಿತು.
ಇದೇ ಸಂದರ್ಭದಲ್ಲಿ ಮ್ಯಾರಥಾನ ಸ್ಪರ್ಧೇಯಲ್ಲಿ ಭಾಗವಹಿಸಿದ ಪಟುಗಳಿಗೆ ಎಸ್. ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಗರ ತಂದೆ ಕುಪಿಂದ್ರ, ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ್ ವಿದ್ಯಾರ್ಥಿ ಕೈಲಾಶ ತಂದೆ ಪ್ರೇಮ್, ವೆಂಕಟ ರಾವ ತಂದೆ ಬಾಬು ರಾವ, ಮಹಿಳೆಯರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಥಮ ಸ್ಥಾನ ಸಪ್ನ, ದ್ವಿತೀಯ ಸ್ಥಾನ ವಾಡಿಯ ಬಾಗ್ಯಶ್ರೀ, ತೃತೀಯ ಜ್ಯೋತಿ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿದರು.
ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ರಾಜಕುಮಾರ ಕುಲಕರ್ಣಿ,ಎನ್ ಎಸ್ ಎಸ್ ಘಟಕ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಜಿಲ್ಲಾ ಸಂಯೋಜಕ ಡಾ.ನಿಂಗಣ್ಣಾ ಕಣ್ಣೂರ್ .ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಡಾ.ಚಂದ್ರಕಾಂತ ನರಬೋಳಿ, ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.