ಅಂತರರಾಜ್ಯ ಕಳ್ಳನ ಬಂಧನ: ಬೈಕ್ ಜಪ್ತಿ
ಕಲಬುರಗಿ,ಸೆ.11-ಅಂತರರಾಜ್ಯ ಕಳ್ಳನನ್ನು ಬಂಧಿಸಿರುವ ಚಿತ್ತಾಪುರ ಪೊಲೀಸರು ಬೈಕ್ ಜಪ್ತಿ ಮಾಡಿದ್ದಾರೆ.
ತೆಲಂಗಾಣ ರಾಜ್ಯದ ವಿಕರಬಾದ ಜಿಲ್ಲೆಯ ತಾಂಡೂರಿನ ಅಹಮ್ಮದ್ ತಂದೆ ಸೈಯದ್ ಇಸ್ಮಾಯಿಲ್ ಶೇಖ್ (24) ಎಂಬಾತನನ್ನು ಬಂಧಿಸಿ ಬೈಕ್ ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಿತ್ತಾಪುರ ಪಟ್ಟಣದ ನಾಗಾವಿ ಚೌಕ್ ಹತ್ತಿರದಲ್ಲಿರುವ ಪರಶುರಾಮ ಅವರ ಮನೆಯ ಮುಂದೆ ನಿಲ್ಲಿಸಲಾಗಿದ್ದ ಬೈಕ್‍ನ್ನು ಕಳವು ಮಾಡಲಾಗಿತ್ತು. ಅವರು ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‍ಪಿ ಶ್ರೀನಿಧಿ, ಶಹಾಬಾದ ವಿಭಾಗದ ಡಿಎಸ್‍ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐಗಳಾದ ಚಂದ್ರಾಮಪ್ಪ, ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳಾದ ನಾಗೇಂದ್ರ, ಬಸವರಾಜ, ಸವಿಕುಮಾರ, ದತ್ತಾತ್ರೇಯ, ಶಿವಯ್ಯ ಸ್ವಾಮಿ, ಬಸವರಾಜ, ಮಂಜುನಾಥ, ಈರೇಶ, ಸಿದ್ದರಾಮೇಶ ಅವರನ್ನೊಳಗೊಂಡ ತಂಡ ತನಿಖೆ ನಡೆಸಿ ಅಂತರರಾಜ್ಯ ಕಳ್ಳ ತೆಲಂಗಾಣದ ವಿಕರಬಾದ ಜಿಲ್ಲೆಯ ತಾಂಡೂರಿನ ಅಹಮ್ಮದ್ ತಂದೆ ಸೈಯ್ಯದ್ ಇಸ್ಮಾಯಿಲ್ ಶೇಖ್‍ನನ್ನು ಬಂಧಿಸಿ ಬೈಕ್ ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಕೆ ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.