ಪಾಲಿಕೆಯ ಹಳೆಯ ಬಿಲ್ಡಿಂಗ್‍ಗೆ ಸಚಿನ ಶಿರವಾಳ ಭೇಟಿ
ಕಲಬುರಗಿ,ಸೆ 11: ಮಹಾನಗರ ಪಾಲಿಕೆಯ ಹಳೆಯ ಬಿಲ್ಡಿಂಗ್‍ಗೆ ಪಾಲಿಕೆಯ ಸಾರ್ವಜನಿಕ ಆರೋಗ್ಯ,ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಚಿನ ಶಿರವಾಳ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕಟ್ಟಡದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿ ಮೀಸಲಿಟ್ಟಿದ್ದ ಕ್ರಿಕೆಟ್ ಸೆಟ್, ಬ್ಯಾಂಡ್ ಸೆಟ್, ಟೇಬಲ್ ಟೆನಿಸ್ ,ಟಿನ್ ಶೆಡ್ ,ನೈರ್ಮಲೀಕರಣ ಸಾಮಗ್ರಿಗಳನ್ನು ವಿತರಣೆ ಮಾಡದೇ ಇರುವುದು ಕಂಡು ಬಂತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡದ ಅಧಿಕಾರಿಗಳ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು ಬೇರೆ ಇಲಾಖೆಗೆ ವರ್ಗಾವಣೆ ಮಾಡಬೇಕೆಂದು ಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.