ಇಂಗ್ಲೀಷ್ ವ್ಯಾಕರಣ ಸಪ್ತಾಹ ಸಮಾರೋಪ
ಕಲಬುರಗಿ,ಸೆ 11: ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವ್ಯಾಕರಣ ಸಪ್ತಾಹದ ಸಮಾರೋಪ ಸಮಾರಂಭ ಜರುಗಿತು.
ಪ್ರಾಚಾರ್ಯ ಶಂಶುದ್ದೀನ್ ಪಟೇಲ್ ಅಧ್ಯಕ್ಷತೆ ವಹಿಸಿದ್ದರು.ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.ಹಿರಿಯ ಉಪನ್ಯಾಸಕರಾದ ಯಶವಂತ,ದೇವಿದಾಸ ಪವಾರ,ಸುಭಾಷ ಮೇತ್ರೆ, ದತ್ತಾತ್ರೇಯ,ಶಿವಕುಮಾರ, ಎಚ್.ಎಸ್ ಬೇನಾಳ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕ ಅಶೋಕ ತಳಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಗೀತಾ ಕಪೂರ ನಿರೂಪಿಸಿದರು.ಡಾ.ರಾಜೇಂದ್ರ ದೊಡ್ಡಮನಿ ವಂದಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಸೆಲ್ವಿ ದೇಶಮಾನೆ,ಶಾಮಸುಂದರ ಕುಲಕರ್ಣಿ,ವಿಶ್ವರಾಧ್ಯ ಕರದಳ್ಳಿ,ಗಿರಿಧರ ವಿಕೆ,ಸಿದ್ಧರಾಮ ಸುಭಾಷ ಸೂರ್ಯವಂಶಿ, ಶೋಭಾ ಸುರೇಶ, ಶಶಿಕಾಂತ ಮೇತ್ರೆ ಉಪಸ್ಥಿತರಿದ್ದರು.