ತಾಳಿಕೋಟೆಯ ಕೀರ್ತಿ ರಾಜ್ಯಮಟ್ಟಕ್ಕೇರಿಸಿ:ಬಿಇಓ ಸಾವಳಗಿ
ತಾಳಿಕೋಟೆ:ಸೆ.11: ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸುತ್ತಾ ಸಾಗಿದ ಶಿಕ್ಷಣ ಇಲಾಖೆ ನೀಡುತ್ತಿರುವ ಶಿಕ್ಷಣದ ಉದ್ದೇಶವಾಗಿದೆ ಸಾಮಾನ್ಯ ಜ್ಞಾನವನ್ನೂ ಸಹ ಮಕ್ಕಳಿಗೆ ಮುಟ್ಟುವದು ಅಗತ್ಯವಾಗಿದೆ ಈ ಕಾರಣದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಸಾಗಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಎಸ್.ಸಾವಳಗಿ ಅವರು ನುಡಿದರು.
ಮಂಗಳವಾರರಂದು ಸ್ಥಳೀಯ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕುಮಾರೇಶ್ವರ ಪಬ್ಲಿಕ್ ಸ್ಕೂಲ್ ತಾಳಿಕೋಟೆ ಇವರ ಸಹಯೋಗದಲ್ಲಿ ಏರ್ಪಡಿಸಲಾದ 2024-25ನೇ ಸಾಲಿನ ತಾಳಿಕೋಟೆ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಎಲ್ಲ ಮಕ್ಕಳಲ್ಲಿ ಇರುವಂತಹ ಪ್ರತಿಭೆಗಳನ್ನು ಹೊರತೆಗೆಯುವ ವೇದಿಕೆ ಇದಾಗಿದೆ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಕಲೆಗಳನ್ನು ಜ್ಞಾನ ಮೂಡಿಸಿಕೊಂಡು ಸಾಗಿದರೆ ಆದಾಯವೆಂಬ ಫಲಿತಾಂಶ ನಿಮ್ಮ ಮನೆಗೆ ಹುಡುಕಿಕೊಂಡು ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಾಳಿಕೋಟೆ ಪಟ್ಟಣದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ ನಾಟಕ, ಚಲನಚಿತ್ರ ಇರಬಹುದು, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಇವುಗಳನ್ನು ವಲುಮೆ ಪಡೆದುಕೊಂಡರೆ ಸ್ವಾವಲಂಬನೆ ಜೀವನ ಸಾಗಿಸಬಹುದಾಗಿದೆ ಕಾರಣ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲ ವಿದ್ಯಾರ್ಥಿಗಳು ತಾಳಿಕೋಟೆ ಪಟ್ಟಣದ ಇತಿಹಾಸವನ್ನು ಮರು ಜ್ಞಾಪಿಸುವಂತೆ ಮಾಡಿ ಇದರ ಇತಿಹಾಸದ ಕೀರ್ತಿ ರಾಜ್ಯಮಟ್ಟದಲ್ಲಿ ಪಸರಿಸಿ ಪತಾಕೆಯನ್ನು ಹಾರಿಸುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅಧಿಕಾರಿ ಸಾವಳಗಿ ಅವರು ಇಂತಹ ಕಾರ್ಯಕ್ರಮಗಳಿಗೆ ಸಂಘಟಿಕರು, ಸಂಘಟನೆಯನ್ನು ಉಪಯೋಗಿಸಿ ಯಶಸ್ವಿ ಗೊಳಿಸಿದ ಎಲ್ಲ ಸಂಘಟಿಕರಿಗೆ ಎಲ್ಲ ಶಿಕ್ಷಕ ವೃಂದದವರಿಗೆ ದನ್ಯವಾದ ತಿಳಿಸಿದ ಅವರು ವಿದ್ಯಾರ್ಥಿ ಜೀವನವೆಂಬುದು ಯಶಸ್ವಿ ಮಾಡಿಕೊಂಡು ವಿದ್ಯಾರ್ಥಿಗಳು ಸ್ವಾವಲಂಬಿ ಜೀವನದತ್ತ ದಾಪುಗಾಲು ಹಾಕಿರಿ ಎಂದರು.
ಇನ್ನೋರ್ವ ಕ್ಷೇತ್ರ ಸಮನ್ವಯ ಅಧಿಕಾರಿಯಾದ ಯು.ಬಿ.ಧರಿಕಾರ ಅವರು ಮಾತನಾಡಿ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಹೆಚ್ಚಿಸುವಂತಹ ಕಾರ್ಯ ಮಾಡುವ ಈ ಕಾರ್ಯಕ್ರಮ ಪ್ರತಿಭಾ ಕಾರಂಜಿಯದ್ದಾಗಿದೆ ಜಿಲ್ಲಾ, ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಪ್ರತಿಭೆಯನ್ನು ಹೊರ ಹಾಕಲು ಮಕ್ಕಳಿಗೆ ಸ್ಪೂರ್ತಿ ನೀಡುವದೇ ಇದರ ಉದ್ದೇಶವಾಗಿದೆ ಎಂದರು. ಇಂತಹ ವ್ಯಕ್ತಿತ್ವದ ವೇದಿಕೆಯನ್ನು ಇಲಾಖೆಯ ವತಿಯಿಂದ ನಡೆಸಲಾಗುತ್ತದೆ ಪ್ರತಿಭೆಯ ನಿರ್ಣಯವನ್ನು ಮಕ್ಕಳಿಗೆ ನೀಡಿ ಮೇಲ್ಮಟ್ಟದ ವೇದಿಕೆಗೆ ಕಳುಹಿಸಿಕೊಡಲಾಗುತ್ತದೆ ಈ ಪ್ರತಿಭಾ ಕಾರಂಜಿಯಲ್ಲಿ ಗುರುತಿಸಿ ನಿರ್ಣಾಯಕರು ಸರಿಯಾಗಿ ನಿರ್ಣಯವನ್ನು ನೀಡಿ ಎಲ್ಲರಿಗೂ ಅವಕಾಶ ಕಲ್ಪಿಸುವ ಕಾರ್ಯವಾಗಲಿ ಎಂದರು.
ಇನ್ನೋರ್ವ ಸಿಆರ್‍ಪಿ ರಾಜು ವಿಜಾಪೂರ ಅವರು ಮಾತನಾಡಿ ಪ್ರತಿಭಾ ಕಾರಂಜಿಯಲ್ಲಿ 26 ಶಾಲೆಗಳು ಬರುತ್ತವೆ ಇದು ಅತೀದೊಡ್ಡ ಕಾರ್ಯಕ್ರಮ ಇದಾಗಿದ್ದು ಕಳೆದ 3 ವರ್ಷಗಳಿಂದಲೂ ನಡೆಯುತ್ತಾ ಸಾಗಿಬಂದಿದೆ ಎಂದರು. ಕುಮಾರೇಶ್ವರ ಶಾಲೆಗೆ ಈ ಕಾರ್ಯಕ್ರಮ ನಡೆಸಲು ಕೇಳಿದಾಗ ಅಗತ್ಯವಾಗಿ ಕಾರ್ಯಕ್ರಮ ನಡೆಸಿಕೊಡಲು ಸಿದ್ದರಾಗಿದ್ದೇವೆ ಎಂಬ ಅವರನ್ನು ಮಾತನ್ನು ಕೇಳಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ ಕಾರಣ ಅವರಿಗೆ ನಮ್ಮ ಇಲಾಖೆಯ ವತಿಯಿಂದ ಅಭಿನಂದಿಸುತ್ತೇನೆಂದರು. ಈ ಕಾರ್ಯಕ್ರಮದಲ್ಲಿ ಭಾಗ ವಹಿಸಬೇಕಾದ ವಿದ್ಯಾರ್ಥಿಗಳ ಕುರಿತು ಕೆಲವು ನಿಯಮಗಳ ಕುರಿತು ತಿಳಿ ಹೇಳಿದ ಅವರು ಮಕ್ಕಳ ಪ್ರತಿಭೆ ಎಂಬುದು ಗುರುತಿಸುವದು ಅಗತ್ಯವಾಗಿದೆ ಕಾರಣ ಎಲ್ಲ ಶಿಕ್ಷಕ ವೃಂದ ಲಕ್ಷ ವಹಿಸಿ ಆದರ್ಶ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗೋಣವೆಂದರು.
ಕುಮಾರೇಶ್ವರ ಶಾಲಾ ಅಧ್ಯಕ್ಷ ಸಿದ್ದನಗೌಡ ಚೌದ್ರಿ ಅವರು ಈ ಕಾರ್ಯಕ್ರಮದ ಉದ್ದೇಶ ಹಿರಿ ಕಿರಿ ಅಧಿಕಾರಿಗಳು ನೀಡಿದ ಮಾರ್ಗದರ್ಶನ ಕುರಿತು ಹಾಗೂ ಶಿಕ್ಷಕರು ನೀಡಿದ ಸಹಕಾರ ಕುರಿತು ಗುಣಗಾನ ಮಾಡಿದರಲ್ಲದೇ ಉಪಸ್ಥಿತ ಶಿಕ್ಷಣ ಇಲಾಖಾ ವರ್ಗದವರಿಗೂ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಜಿಎಚ್‍ಎಸ್ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಡಾ.ಎ.ಬಿ.ಸಜ್ಜನ, ಇಸಿಓ ಎಸ್.ಎಚ್.ಹಿರೇಮಠ, ಬಿಆರ್‍ಪಿ ಕೆ.ಎಸ್.ಸಜ್ಜನ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ, ಉಪಾಧ್ಯಕ್ಷ ಟಿ.ಎಸ್.ಲಮಾಣೆ, ಗೌರವಾಧ್ಯಕ್ಷ ಎಸ್.ಎಸ್.ತೀರ್ಥ, ಖಜಾಂಚಿ ಎ.ಡಿ.ಗೋನಾಳ, ಸದಸ್ಯರಾದ ಎಂ.ಎಲ್.ಚೌದ್ರಿ, ಶಿವು ಅಲ್ಲಾಪೂರ, ಅನುದಾನಿತ ಪ್ರಾಥಮಿಕ ಶಾಲಾ ಅಧ್ಯಕ್ಷ ವೆಂಕೋಭಾ ನಾಯ್ಕೋಡಿ, ಶ್ರೀಮತಿ ಎಸ್.ವ್ಹಿ.ಹೂಗಾರ, ಶಿಕ್ಷಕ ಯು.ಬಿ.ಸಜ್ಜನ, ಬಿ.ಟಿ.ಸಜ್ಜನ, ಕೊಡೇಕಲ್ಲಮಠ, ನಿಂಗರಾಜ ನೀರಲಗಿ, ಎಸ್.ಎಚ್.ಯಾಳವಾರ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಸುವಾಸಿನಿ ಕತ್ತಿ ಸ್ವಾಗತಿಸಿದರು. ಶಿಕ್ಷಕ ಸುರೇಶ ವಾಲಿಕಾರ ನಿರೂಪಿಸಿದರು. ಶಾಲಾ ಮುಖ್ಯಗುರುಗಳಾದ ಕಾಶಿನಾಥ ಸಜ್ಜನ ವಂದಿಸಿದರು.