ಐತಿಹಾಸಿಕ ಕಲೆಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ: ದೋಂಡೆದ್ರ ಮಹಾಸ್ವಾಮಿಗಳು
ಹುಮನಾಬಾದ್:ಸೆ.11: ದೇಶದ ಶಿಲ್ಪಕಲಾ ವೈಭವಕ್ಕೆ ಮತ್ತು ವಿವಿಧ ಸಾಂಸ್ಕ್ರತಿಕ ಐತಿಹಾಸಕ ಕಲೆಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜದ ಕೂಡುಗೆ ಅಪಾರವಾಗಿದೆ ಎಂದು ಸುಲೇಪೇಟ್ ಮತ್ತು ಬೀದರ್‍ನ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ದೋಂಡೆದ್ರ ಮಹಾಸ್ವಾಮಿಗಳು ನುಡಿದರು.
ತಾಲ್ಲೂಕಿನ ಹಳ್ಳಿಖೇಡ(ಬಿ)ನ್ ಹೋರವಲಯದಲ್ಲಿರುವ ಜಗದ್ಗುರು ಆದಿಲಿಂಗ ಮೌನೇಶ್ವರ ದೇವಾಲಯದಲ್ಲಿ ಸೋಮವಾರ ನಡೆದ ಶ್ರಾವಣ ಮಾಸದ ಸಮಾಪ್ತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ವಿಶ್ವಕರ್ಮ ದೇವರು ದೇವಶಿಲ್ಪಿ ಕಲೆಗಳ ಚಕ್ರವರ್ತಿಯಾಗಿದ್ದಾರೆ. ವಿಶ್ವಕರ್ಮ ಸಮಾಜದ ಜನ ವಿಶ್ವಕರ್ಮ ಅವರ ಸೃಜನಶೀಲತೆ, ಕಲೆ, ಕೌಶಲ್ಯವನ್ನು ಕರಗತ ಮಾಡಿಕೂಂಡು ಸ್ವಲಂಬಿ ಜೀವನ ನಡೆಸಬೇಕು ಎಂದು ತಿಳಿಸಿದರು.
ಆದಿಲಿಂಗ ಮೌನೇಶ್ವರ ದೇವಸ್ಥಾನದ ಕಮಿಟಿಯ ಅಧ್ಯಕ್ಷ ಸೋಮನಾಥ ಪಂಚಾಳ ಮಾತನಾಡಿ, ವಿಶ್ವಕರ್ಮ ಸಮುದಾಯವು ಸಮಾಜ ಮತ್ತು ಸಂಸ್ಕøತಿಗೆ ತಮ್ಮದೇ ಆದ ಸುಂದರ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ, ವಿಶ್ವಕರ್ಮ ಸಮುದಾಯದ ಜನರು ಸಂಘಟಿತರಾಗಬೇಕು. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಶೈಕ್ಷಣ ಕವಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಲ್ಲೂರು, ಮಹಾಸಭಾದ ಜಿಲ್ಲಾಧ್ಯಕ್ಷ ದತ್ತಾತ್ರಿ ವಿಶ್ವಕರ್ಮ, ಯುವ ಘಟಕ ಜಿಲ್ಲಾಧ್ಯಕ್ಷ ಪ್ರಶಾಂತ ವಿಶ್ವಕರ್ಮ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುದರ್ಶನ ಪಂಚಾಳ, ಪ್ರಭಾಕರ ಪಂಚಾಳ, ಶಾಮರಾವ ಪಂಚಾಳ, ವಿನಯ ಪಂಚಾಳ, ಸೇರಿದಂತೆ ಆದಿಲಿಂಗ ಮೌನೇಶ್ವರ ದೇವಸ್ಥಾನದ ಕಮಿಟಿಯ ಸದಸ್ಯರು, ಇದ್ದರು.