ಗುಣತೀರ್ಥ ವಾಡಿ ಸಂತ್ರಸ್ತೆ ಕುಟುಂಬಕ್ಕೆ ಸಾಂತ್ವನ 51 ಸಾ.ವೈಯಕ್ತಿಕ ಧನಸಹಾಯ
ಬಸವಕಲ್ಯಾಣ:ಸೆ.11: ಬಸವಕಲ್ಯಾಣ ತಾಲ್ಲೂಕಿನ ಗುಣತೀರ್ಥ ವಾಡಿ ಗ್ರಾಮದಲ್ಲಿ ಇತ್ತಿಚ್ಚೆಗೆ ಅತ್ಯಾಚರ ವ್ಯಸಗಿ ಬರ್ಬರ ಕೊಲೆಗಿಡಾದ ಯುವತಿಯ ಮನೆಗೆ ಕಾಂಗ್ರೆಸ ಮುಖಂಡರಾದ ಧನರಾಜ ಎಸ್. ತಾಳಂಪಳ್ಳಿಯವರು ಭೇಟಿ ನೀಡಿ ಯುವತಿಯ ತಂದೆ ತಾಯಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಪಾಲಕರೊಂದಿಗೆ ಚರ್ಚಿಸಿದ ಅವರು ಇಂತಹ ಅಮಾನವಿಯ ಕೃತ ನಡೆಸಿರುವಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಿಸಲಾಗುವುದು ಮತ್ತು ತಮಗೆ ಎಲ್ಲಾ ರೀತಿಯ ಕಾನೂನಾತ್ಮಕ ಸಹಾಯ ಸಹಕಾರ ನೀಡಲಾಗುವು ಎಂದು ಹೇಳಿದರು
ಅಲ್ಲದೆ ತಮ್ಮ ಇಬ್ಬರು ಗಂಡು ಮಕ್ಕಳನ್ನು ಉತ್ತಮ ಶಿಕ್ಷಣ ನೀಡಿ ಒಳ್ಳೆಯ ನಾಗರಿಕರನ್ನಾಗಿ ಮಾಡಲು ಉನ್ನತ ಶಿಕ್ಷಣ ಪಡೆಯಲು ನಮ್ಮ ಕಾಲೇಜಿನಲ್ಲಿ ಉಚಿತ ಇಂಜಿನಿರಿಂಗ್ ಪ್ರವೇಶ ನೀಡತ್ತೇನೆ ಎಂದು ತಿಳಿಸಿದರು. ಹಾಗೂ ವಯಕ್ತಿಕವಾಗಿ ಐವತ್ತೊಂದು ಸಾವಿರ ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ ಜಿಲ್ಲಾ ಉಪಾಧ್ಯಕ್ಷ ಅರ್ಜುನ ಕನಕ, ಮುಖಂಡರಾದ ಬಂಡೆಪ್ಪಾ ಮೇತ್ರೆ, ಚನ್ನವೀರ ಜಮಾದಾರ, ರಾಜನ ಚೌಧರಿ, ಕಾಂಗ್ರೆಸ ಸೇವಾ ದಳದ ಜಿಲ್ಲಾಧ್ಯಕ್ಷ ಸದಾನಂದ ಹಳ್ಳಿ, ಪ್ರಮುಖರಾದ ನಾಸಿರೊದ್ದಿನ, ತುಕಾರಾಮ ರೊಡ್ಡೆ, ವೀರಣ್ಣ ಪಾಟೀಲ, ನಾಗರಾಜ, ಅರುಣ ಮಸ್ಕಲ್ಲೆ ಸೇರಿದಂತ್ತೆ ಅನೇಕರು ಉಪಸ್ಥಿತರಿದ್ದರು.