ಮಂಡಕನಲ್ಲಿ ಗ್ರಾಮದಲ್ಲಿ ನರೇಗಾ ವಯಕ್ತಿಕ ಕಾಮಗಾರಿ ಆದೇಶ ಪ್ರತಿ ವಿತರಣೆ
ಬೀದರ್: ಸೆ.11:ಯೋಜನೆಯಡಿ ವ್ಯಕ್ತಿಕ ಕಾಮಗಾರಿ ಆದೇಶ ವಿತರಣಾ ಮೇಳ ನಿಮಿತ್ಯ ವಯಕ್ತಿಕ ಕಾಮಗಾರಿಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮುಕ್ಕಣ್ಣ ಕಾರಿಗರ ಅವರು ಆದೇಶ ಪತ್ರ ವಿತರಿಸಿದರು.
ಆದೇಶ ಪ್ರತಿ ವಿತರಣೆ ಮಾಡಿ ಮಾತನಾಡಿದ ಉಪ ಕಾರ್ಯದರ್ಶಿಗಳು ನರೇಗ ಯೋಜನೆಯಡಿ ವಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ತೆಗೆದುಕೊಳ್ಳ ಬಹುದು ಇದ್ದರಿಂದ ಹಳ್ಳಿ ಜನರ ಆರ್ಥಿಕ ಹಾಗೂ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ದೇವಪ್ಪ ಅವರು ಮಾತನಾಡಿ ಎಲ್ಲರು ನರೇಗಾ ಯೋಜನೆಯ ಲಾಭ ಪಡೆದು ಸ್ವಾಹಲಂಭಿಗಲಾಗಬೇಕು. ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ಈ ಸಂದರ್ಭದಲ್ಲಿ… ಸದಸ್ಯರಾದ ಸಲೀಂ ಸಾಹಿಬ,
ಸಿಕಿಂದರ್ ಖಾನ್, ಜೀತ ನೀಡೋದಿಕರ, ಮತ್ತು ಪಂಚಾಯಿತಿ ಸಿಬ್ಬಂದಿಗಳು ಇದ್ದರು.