ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸೇವಾ ಯೋಜನೆಗಳ ಕುರಿತು ಅರಿವು ಮೂಡಿಸಿ : ಸದಾಶಿವ ಸ್ವಾಮಿಜಿ
ಔರಾದ್ :ಸೆ.11: ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ? ಸಾಂಸ್ಕøತಿಕ, ಕ್ರಿ?ಡೆ ಹಾಗೂ ರಾಷ್ಟ್ರೀಯ ಸೇವಾಯೋಜನೆಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಸದಾಶಿವ ಸ್ವಾಮಿಜಿಗಳು ಹೇಳಿದರು.
ಸೇಡಂನಲ್ಲಿ 2025ರ ಜನವರಿಯಲ್ಲಿ ನಡೆಯಲಿರುವ ಏಳನೇ ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡಿರುವ ‘ಕಲ್ಯಾಣ ಕರ್ನಾಟಕ ವಿಕಾಸ ಪಥ ಯಾತ್ರೆಯಲ್ಲಿ ಮಾತನಾಡಿದರು. ಶಿಕ್ಷಣ ಎನ್ನುವುದು ನೌಕರಿಗಾಗಿ ಅಲ್ಲ. ಅದು ಕೇವಲ ನಮ್ಮ ಬದುಕಿನ ಮಾರ್ಗ. ನೌಕರಿಗಾಗಿ ಶಿಕ್ಷಣ ಎನ್ನುವ ಪ್ರವೃತ್ತಿಯನ್ನು ಶಿಕ್ಷಕರು, ವಿದ್ಯಾರ್ಥಿಗಳು ಕೈಬಿಟ್ಟು, ಬದುಕಿನ ಜ್ಞಾನಕ್ಕಾಗಿ ಶಿಕ್ಷಣ ಎನ್ನುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಳನೇ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಸುಮಾರು 30 ಲಕ್ಷ ಜನ ಭಾಗವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 48 ತಾಲೂಕುಗಳಲ್ಲಿ ಐದು ಸಾವಿರ ಕಿ.ಮೀ. ರಥಯಾತ್ರೆ ಹಮ್ಮಿಕೊಂಡಿದ್ದೇವೆ. ಈಗಾಗಲೇ ಬಹುತೇಕ ತಾಲೂಕುಗಳಲ್ಲಿ ಯಾತ್ರೆ ಪೂರ್ಣಗೊಳಿಸಿದ್ದು, ಸೆ 10 ರ ವರೆಗೆ ಬೀದರ ಜಿಲ್ಲೆಯಲ್ಲಿ ಯಾತ್ರೆ ಕೈಗೊಳ್ಳಲಾಗಿದೆ ಎಂದರು.
ಇದೊಂದು ಅರ್ಥಪೂರ್ಣ ಉತ್ಸವವಿದ್ದು ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಭಾಗವಹಿಸುವಂತಹ ಉತ್ಸವ ಇದಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಡಾ. ಬಸವರಾಜ ಪಾಟೀಲ್ ಸೇಡಮ್ ಅವರ ಸೇವೆ ಮಾದರಿಯಾಗಿದೆ. 70 ಶಾಲೆಗಳ ಸ್ಥಾಪಿಸಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಅಲ್ಲದೇ ಸಿದ್ದೇಶ್ವರ ಸ್ವಾಮಿಜಿ ಅವರ ಮರ್ಗದರ್ಶದಲ್ಲಿ ಅನೇಕ ಜನಪರ ಕೆಲಸ ತಮ್ಮ ವಿಕಾಸ ಅಕಾಡೆಮಿ ಸಂಸ್ಥೆಯ ಮೂಲಕ ಮಾಡಿದ್ದಾರೆ. ಇದಕ್ಕೆ ಡಾ. ಸುಧಾಮೂರ್ತಿ ಅವರು ಕುಡಾ ನೆರವು ನೀಡಿದ್ದಾರೆ. ಅವರ ನೆರವಿನಿಂದ ಸರಕಾರದ ಯೋಜನೆ ಜಾರಿಯಾಗುವ ಮುನ್ನವೇ 12 ಸಾವಿರ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದರು.
ದತ್ತ, ಸಾಯಿ ಶನೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಶಂಕರಲಿಂಗ ಶಿವಾಚಾರ್ಯರು ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ದೇಶದ ಸಂಸ್ಕೃತಿ ಮುಂದಿನ ಪೀಳಿಗೆಗೆ ???ಂಡೆuಟಿಜeಜಿiಟಿeಜಯ್ಯುವ ಹಾಗೂ ಪರಿಚಯಿಸುವ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರಮಟ್ಟದ ವಿಕಾಸ ಸಂಗಮ ನಡೆಸುವ ಮೂಲಕ ರಾಷ್ಟ್ರದ ಗಮನ ಸೆಳೆದಿರುವ ಭಾರತೀಯ ಸಂಸ್ಕೃತಿ ಉತ್ಸವ ಸೇಡಮ್ ನಲ್ಲಿ ನಡೆಯಲಿದೆ. ಆದ್ದರಿಂದ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸದಾಶಿವ ಸ್ವಾಮಿಜಿಗಳು ಆಹ್ವಾನಿಸಲು ಬಂದಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಯ ಜನರು ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು. ದೇಶದ ಸಂತರು, ಸಾಧುಗಳು, ಪುಣ್ಯ ಪುರುಷರು, ಸಾಧಕರು, ಕೃಷಿ ಪಂಡಿತರು, ಚಿಂತಕರು, ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ ಇದರ ಸದುಪಯೋಗ ಪಡದುಕೊಳ್ಳಬೇಕು ಎಂದರು.
ಮುಧೋಳ ಶ್ರೀಗಳಾದ ವೈಜಿನಾಥ ಶಿವಲಿಂಗ ಶಿವಾಚಾರ್ಯರು ಮಾತನಾಡಿದರು. ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಾಲಾದೆ ಪ್ರಾಸ್ತಾವಿಕ ಮಾತನಾಡಿದರು. ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ, ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಬಸವರಾಜ ದೇಶಮುಖ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಕಸಾಪ ತಾಲೂಕು ಅಧ್ಯಕ್ಷ ಡಾ.ಶಾಲಿವಾನ ಉದಗೀರೆ, ಕಲ್ಲಪ್ಪ ದೇಶಮುಖ, ವಿರೇಶ ಅಲಮಾಜೆ, ಸೂರ್ಯಕಾಂತ ವಲ್ಲೇಪೂರೆ, ಗಜಾನಂದ ವಟಿಗೆ, ಶಿವರಾಜ ಶೆಟಕಾರ್, ಅಡೆಪ್ಪ ಪಟ್ನೆ, ರಾಜಕುಮಾರ ಹೊಸಖಂಡೆ, ನಾಗನಾಥರಾವ ಸಾಡಂಗಲೆ, ಹವಗಿರಾವ ವಟಿಗೆ, ಪ್ರಶಾಂತ ಸೇರಿದಂತೆ ಅನೇಕರಿದ್ದರು.
ಔರಾದ ವಿಕಾಸ ಅಕಾಡೆಮಿಯ ತಾಲೂಕು ಸಂಚಾಲಕ ಗುರುನಾಥ ವಟಿಗೆ ಸ್ವಾಗತಿಸಿದರು. ಪೂಜಾ ಬಿರಾದಾರ ನಿರೂಪಿಸಿದರು. ಕಮಲನಗರ ವಿಕಾಸ ಅಕಾಡೆಮಿಯ ತಾಲೂಕು ಸಂಚಾಲಕ ಯಶವಂತರಾವ ಬಿರಾದಾರ್ ವಂದಿಸಿದರು.
ಮಾಹಿತಿ ಪತ್ರ ಬಿಡುಗಡೆ
ಈ ವೇಳೆ ಕಾರ್ಯಕ್ರಮ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. 2025ರ ಜನವರಿ 28 ರಂದು ಭವ್ಯ ಶೋಭಾ ಯಾತ್ರೆ, ಪ್ರದರ್ಶನ ಉದ್ಘಾಟನೆ, 29ರಂದು ಮಾತೃ ಸಮಾವೇಶ, 30ರಂದು ಶೈಕ್ಷಣಿಕ ಸಮಾವೇಶ, 31ರಂದು ಯುವ ಸಮಾವೇಶ, ಫೆ. 1ರಂದು ಗ್ರಾಮ ಕೃಷಿ ಸಮಾವೇಶ, 2ರಂದು ಆಹಾರ, ಆರೋಗ್ಯ ಸಮಾವೇಶ, 3ರಂದು ಸ್ವಯಂ ಉದ್ಯೋಗ ಸಮಾವೇಶ, 4ರಂದು ಪ್ರಕೃತಿ ಮತ್ತು ನಾವು, 5ರಂದು ಸೇವಾ ಶಕ್ತಿ ಸಮಾವೇಶ, 6ರಂದು ದೇಶ, ಧರ್ಮ, ಸಂಸ್ಕೃತಿ ಸಮಾವೇಶ ನಡೆಯಲಿದೆ. ಈ ವೇಳೆ ರಾಷ್ಟ್ರ ಮಟ್ಟದ ಕಲಾವಿದರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸದಾಶಿವ ಸ್ವಾಮಿಜಿಗಳು ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು.