ಸಂಗೀತ-ಹಾಸ್ಯ ರಸಮಂಜರಿ ಕಾರ್ಯಕ್ರಮ
ಔರಾದ್ : ಸೆ.11:ಹತ್ತು-ಹಲವಾರು ವರ್ಷಗಳಿಂದ ತಾಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ಸಹಾರಾ ಯೂಥ್ ಗಣೇಶ ಮಂಡಳಿ ವತಿಯಿಂದ ಅನೇಕ ರೀತಿಯ ಜನೋಪಕಾರಿ ಕೆಲಸಗಳು ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರ ನೇತೃತ್ವದಲ್ಲಿ ಜರುಗುತ್ತಿರುವುದು ನಮ್ಮೂರಿನ ಹಮ್ಮೆಯ ಸಂಕೇತವಾಗಿದೆ ಎಂದು ವಡಗಾಂವ ಗ್ರಾಮದ ಮುಖಂಡ ಮಲ್ಲಪ್ಪ ನೇಳಗೆ ಹೆಮ್ಮೆವ್ಯಕ್ತಪಡಿಸಿದರು.
ತಾಲೂಕಿನ ವಡಗಾಂವ(ದೇ) ಸಹಾರಾ ಯೂಥ್ ಗಣೇಶ ಮಂಡಳಿ ವತಿಯಿಂದ ಸೋಮವಾರ ಸಂಜೆ ಏರ್ಪಡಿಸಿದ ಸಂಗೀತ-ಹಾಸ್ಯ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮ್ಮೂರಿನಲ್ಲಿ ಪ್ರತಿವರ್ಷ ಗಣೇಶ ಉತ್ಸವ ಅಧ್ದೂರಿಯಾಗಿ ನೇರವೇರುವುದಲ್ಲದೇ ಅನೇಕ ಜನಪರ ಕಾರ್ಯಕ್ರಮಗಳು ಜರುಗುತ್ತಿರುವುದು ಎಲ್ಲರು ಕಲಿಯಬೇಕಾಗಿದೆ. ಇಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡುವ ಕೆಲಸ ಮಾಡಲು ಎಲ್ಲರು ಕೈಜೋಡಿಸಬೇಕಾಗಿದೆ ಎಂದರು.
ಗಣೇಶ ಉತ್ಸವದ ಮೂರನೇ ದಿನವಾದ ಸೋಮವಾರ ಸಂಜೆ ದೇಶಮುಖ ಗಡಿ ಆವರಣದಲ್ಲಿ ಜರುಗಿದ ಭವ್ಯವಾದ ವಿಶಾಲ ವೇದಿಕೆಯಲ್ಲಿ ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಬೇರೆಡೆ ವರ್ಗವಣೆಯಾಗಿ ಹೋದ ಶಿಕ್ಷಕರಿಗೆ ಬೀಳ್ಕೋಡುಗೆ ಮತ್ತು ಹೋಸದಾಗಿ ಆಗಮಿಸಿದ ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮ ಜರುಗಿತು.
ಮೇಡಪಳ್ಳಿ ಗ್ರಾಮದ ಬಾಲೆ ಪ್ರತಿಕ್ಷಾ ಪಾಟೀಲ್ ಅವರಿಂದ ಗಾಂಧಾರಿ ಕಲೆ ಪ್ರದರ್ಶನ ಮತ್ತು ಎಕ್ಕಂಬಾದ ಬಾಲಕಿ ಎಸ್.ವಿ ಜೂನಿಯರ್ ಮಿಸ್ ಇಂಡಿಯಾ ಖ್ಯಾತಿಯ ಶ್ರಾವಣಿ ಪಾಟೀಲ ಅವರಿಂದ ಜರುಗಿದ ರ್ಯಾಂಪ್ ಶೋ ಎಲ್ಲರ ಗಮನಸೆಳೆಯಿತು.
ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಕಾರ್ಯಕ್ರಮದ ನೇತ್ರತ್ವ ವಹಿಸಿದರರು. ರತಿಕಾಂತ ನೇಳಗೆ ಪ್ರಸ್ತಾವಿಕವಾಗಿ ಮಾತನಾಡಿದರು. ನಾಗೇಶ ಸ್ವಾಗತಿಸಿದರು. ಹಾವಗಿರಾವ್ ನೇಳಗೆ ನಿರೂಪಣೆ ಮಾಡಿದರು. ವಿಜಯಪುರ ಮುದ್ದೆಬಿಹಾಳ ಅದ್ವಿಕಾ ಮೆಲೋಡಿಸ್ ಅವರಿಂದ ಅದ್ಭುತ ಸಂಗೀತ ಹಾಸ್ಯ ರಸ ಮಂಜರಿ ಕಾರ್ಯಕ್ರಮ ಜರುಗಿತು.
