ಗ್ರಾಮೀಣ ಭಾಗದ ಏಳಿಗೆಗೆ ಆರ್ಬಿಟ್ ಸಂಸ್ಥೆಯಿಂದ ಕೌಶಲ್ಯ ತರಬೇತಿ
ಔರಾದ :ಸೆ.11: ಕಲಿತ ವಿದ್ಯೆ ಎಂದಿಗೂ ವ್ಯರ್ಥವಾಗಬಾರದು. ಎರಡು ತಿಂಗಳುಗಳ ಕಾಲ ಆರ್ಬಿಟ್ ಸಂಸ್ಥೆ ಎಲ್ಲ ಶಿಬಿರಾರ್ಥಿಗಳಿಗೆ ಗ್ರಾಮೀಣ ಭಾಗದಲ್ಲಿ ಅವರ ಏಳಿಗೆಗೆಗಾಗಿ ಉತ್ತಮ ಕೌಶಲ್ಯ ಉಪಾಯ ಕಲಿಸಿಕೊಟ್ಟಿದೆ. ಎಲ್ಲರು ಅದರ ಸದುಪಯೋಗ ಮಾಡಿಕೊಂಡು ಮುಂದೆ ಬರಬೇಕು ಎಂದು ಉಜನಿ ಕ್ರೀಸ್ತ ರಾಜ ದೇವಾಲಯ ನಿರ್ದೇಶಕ ಫಾದರ್ ಸುನೀಲ್ ಆಂಡ್ರೋದೆ ಹೇಳಿದರು.
ತಾಲೂಕಿನ ಉಜನಿ ಕ್ರೀಸ್ತ ರಾಜ ದೇವಾಲಯ ಕಾರ್ಯಸೌಧದಲ್ಲಿ ಮಂಗಳವಾರ ಆರ್ಬಿಟ್ ಸಂಸ್ಥೆ ಸಹಯೋಗದಲ್ಲಿ ಟೇಲರಿಂಗ್ ಮತ್ತು ಕಂಪ್ಯೂಟರ್ ತರಬೇತಿ ಸಮಾರೋಪ ಮತ್ತು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮಹಿಳೆಯರು ಮತ್ತು ಯುವತಿಯರು ತಮ್ಮ ಕೌಶಲ್ಯವನ್ನು ಜಗತ್ತಿಗೆ ಪ್ರದರ್ಶೀಸಬೇಕು. ಉತ್ತಮ ಕಲೆಯಿಂದ ತಮ್ಮ ಜೀವನದ ಧಾರಿ ಕಂಡುಕೊಳ್ಳಬೇಕು ಎಂದರು.
ಸಂತಪುರ ದೀಪಾಲಯ ಸಮಾಜ ಸೇವಾ ಸಂಸ್ಥೆ ಮುಖ್ಯಸ್ಥೆ ಸಿಸ್ಟರ್ ಲಿನೇಟ್ ಮಾತನಾಡಿ, ಸುಮಾರು 30 ವರ್ಷಗಳಿಗಿಂತ ಹೆಚ್ಚಿನ ವರ್ಷಗಳಿಂದ ಆರ್ಬಿಟ್ ಸಂಸ್ಥೆ ಗ್ರಾಮೀಣ ಭಾಗದ ಅನೇಕ ಮಹಿಳೆಯರ ಜೀವನೋಪಾಯ ಆರ್ಥೀಕವಾಗಿ ಸದೃಢಗೊಳಿಸಲು ಶ್ರಮಿಸುತ್ತಿದೆ. ಎಲ್ಲರು ಇದರ ಸದುಪಯೋಗ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಇದೇ ವೇಳೆ ಟೇಲರಿಂಗ್ ಮತ್ತು ಕಂಪ್ಯೂಟರ್ ಕಲಿತ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಫಾದರ್ ವಿಜಯ,ಹುಮನಬಾದ್ ಆರ್ಬಿಟ್ ಸಂಸ್ಥೆ ಸಹಾಯಕ ನಿರ್ದೇಶಕ ಫಾದರ್ ಕ್ರಿಸ್ಟೋಫರ್, ಸಿಸ್ಟರ್ ರೀಮಾ, , ಸಿಸ್ಟರ್ ಕವಿತಾ ಇತರರಿದ್ದರು. ಹುಮನಾಬಾದ್ ಕೌಶಲ್ಯ ಅಭಿವೃದ್ಧಿ ತರಬೇತಿ ಸಂಸ್ಥೆ ಸಂಯೋಜಕ ಸುಭಾಷ ಮಾನಕಾರೆ ನಿರೂಪಣೆ ಮಾಡಿ ವಂದಿಸಿದರು.