ಆಳಂದ ನಿವಾಸಿಗಳಿಗೆ ಗ್ಯಾಸ್ ಡಿಲಿವರಿ ಸಮಸ್ಯೆ: ಪರದಾಟ
ಆಳಂದ: ಸೆ.11:ಪಟ್ಟಣದ ನಿವಾಸಿಗಳಿಗೆ ಗ್ಯಾಸ್ ಡಿಲಿವರಿ (ಅಡುಗೆ ಅನಿಲ) ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು ಈ ಕುರಿತು ಅನೇಕ ಗ್ರಾಹಕರು ತಮ್ಮ ಯಾತನ ಹೇಳಿಕೊಂಡಿದ್ದಾರೆ.
ಗ್ಯಾಸ್ ಸಿಲಿಂಡರ್‍ಗಳನ್ನು ಬುಕ್ ಮಾಡಿದ ನಂತರ ಡಿಲಿವರಿ ಮೆಸೇಜ್ ಬಂದರೂ, ಗ್ಯಾಸ್ ತಲುಪದ ಸಮಸ್ಯೆ ಹೆಚ್ಚಾಗಿದೆ. ಜನರು ಗ್ಯಾಸ್ ಸಿಲಿಂಡರ್ ಪಡೆಯಲು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು, ಏಜ್‍ನ್ಸಿ ಕೇಂದ್ರಗಳಿಗೆ ತೆರಳಿ ನೇರವಾಗಿ ಕ್ಯೂನಲ್ಲಿ ನಿಂತು, ನಂಬರ್ ಬಂದ ನಂತರ ಸಂಪೂರ್ಣ ಹಣ ಪಾವತಿಸಿ ಗ್ಯಾಸ್ ತೆಗೆದುಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ಪರಸ್ಥಿತಿಯನ್ನು ಪಟ್ಟಣದಲ್ಲಿನ ಗ್ರಾಹಕರ ಏಕೈಕ ವಿತಕ ಕೇಂದ್ರದ ಮುಂದೆ ನೂರಾರು ಸಂಖ್ಯೆಯಲ್ಲಿ ಮಂಗಳವಾರ ಜನ ಗ್ಯಾಸ್ ಪಡೆಯಲು ಗ್ಯಾಸ್‍ನೊಂದಿಗೆ ಗಂಟೆಗಟ್ಟಲೆ ಸರಣಿಗೆ ನಿಂತು ಪರದಾಡಿದ ಪ್ರಸಂಗ ಎಂದಿನಂತೆ ಮರುಕಳಿಸಿದೆ.
ನಿವಾಸಿಗಳು ತಮ್ಮ ಈ ಸಮಸ್ಯೆಯನ್ನು ಅನೇಕ ಬಾರಿ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದರೂ, ಸಹ ಸುಧಾರಣೆ ಕಾಣಿಸುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಇದರಿಂದಾಗಿ ದಿನನಿತ್ಯದ ಕೆಲಸಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಗ್ರಾಹಕರ ಅಸಮಾಧಾನ ವ್ಯಕ್ತವಾಗುತ್ತಿದೆ.
ಪ್ರತಿದಿನದ ಅಗತ್ಯಗಳಲ್ಲಿ ಒಂದಾದ ಗ್ಯಾಸ್ ಅಗತ್ಯವಾಗಿರುವುದರಿಂದ, ಅಧಿಕಾರಿಗಳು ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಒದಗಿಸಬೇಕು ಎಂದು ಜನತೆ ಬೇಡಿಕೆ ಇಟ್ಟಿದ್ದಾರೆ.
ಆಗಾಗ ಸಮಸ್ಯೆ ಸೃಷ್ಟಿ:
ಕೆಲವು ದಿನಗಳಿಂದ ಪಟ್ಟಣದಲ್ಲಿ ಅಡುಗೆ ಅನಿಲದ ತೀವ್ರ ಕೊರತೆ ಉಂಟಾಗಿ, ಸಿಲೆಂಡರ್‍ಗಾಗಿ ಸಾಲಿನಲ್ಲಿ ನಿಂತರೂ ಯಾವುದೇ ಸ್ಪಂದನೆ ಇಲ್ಲದೆ ಅಧಿಕಾರಿಗಳು ಮೌನ ವಹಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಏಜೆನ್ಸಿಯ ನಿರ್ಲಕ್ಷ್ಯದಿಂದ ಸಮಯಕ್ಕೆ ಸಿಲೆಂಡರ್ ಸಿಗದಿರುವುದು, ಕುಟುಂಬದ ದಿನನಿತ್ಯದ ಅಡುಗೆ ಕೆಲಸದಲ್ಲಿ ಅಡಚಣೆಯುಂಟುಮಾಡಿದ್ದು, ಈ ಸಮಸ್ಯೆಗೆ ಸಂಬಂಧಿಸಿದಂತೆ ಅನೇಕ ನಾಗರಿಕರು ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಸಮಸ್ಯೆ ಹೇಗೆ ಉಂಟಾಯ್ತು?: ಅಡುಗೆ ಅನಿಲದ ಕೊರತೆ ಮಾತ್ರವಲ್ಲ, ಈ ಸಮಸ್ಯೆಯಾದ ನಂತರ ಇನ್ನಷ್ಟು ತೊಂದರೆಗಳು ನಾಗರಿಕರನ್ನು ಕಾಡುತ್ತಿವೆ. ಸಿಲೆಂಡರ್ ಪಡೆಯಲು ನೂರಾರು ಗ್ರಾಹಕರು ದಿನಗಟ್ಟಲೆ ಸಾಲಿನಲ್ಲಿ ನಿಂತರೂ, ಸಿಲೆಂಡರ್ ಒದಗಿಸುವ ದರದಲ್ಲಿ ಏರಿಕೆ, ವಿತರಣೆಯಲ್ಲಿ ವ್ಯವಸ್ಥೆಯ ತೊಂದರೆ, ಹಾಗೂ ಸರಬರಾಜಿನಲ್ಲಿ ವ್ಯತ್ಯಯಗಳೂ ಈ ಸಮಸ್ಯೆಗೆ ಕಾರಣವಾಗಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಗ್ಯಾಸ್ ನಂಬರ ಬುಕ್ ಆದರು ಸಿಗುತ್ತಿಲ್ಲ.
ಆಳಂದ್ ನಿವಾಸಿಗಳ ಪರಿಸ್ಥಿತಿಯನ್ನು ಕೇಳೋರಿಲ್ಲ ಹೇಳೋರಿಲ್ಲ ಗ್ಯಾಸ್ ನಂಬರ್ ಬುಕ್ ಮಾಡಿದರೂ ಡಿಲೆವರಿ ಮೆಸೇಜು ಬರುತ್ತೆ ಅವರಿಗೆ ಗ್ಯಾಸ್ ಬರುವುದಿಲ್ಲ ನಾವು ಕೆಲಸ ಕಾರ್ಯಗಳು ಬಿಟ್ಟು ಕ್ಯೂ ಹಚ್ಚಿ ನಂಬರ್ ನಂಬರ್ ಬಂದ ನಂತರ ಪೂರ್ತಿ ಹಣವನ್ನು ಪ್ಲೇ ಮಾಡಿ ಗ್ಯಾಸ್ ತರಬೇಕಾಗುತ್ತದೆ ಈ ಪರಿಸ್ಥಿತಿ ಬಂದಿದೆ.
ಮೇಲ್ಮಟ್ಟದಲ್ಲೇ ವಿಳಂಬ: ಕಳೆದ ನಾಲ್ಕು ದಿನಗಳಿಂದ ಸಿಲಿಂಡರ್ ಸರಬರಾಜಿಗೆ ವಿಳಂಬವಾಗಿದೆ. ಮೊದಲು ಬೆಳಗಾಂವನಿಂದ ಪೂರೈಕೆಯಾಗುತ್ತಿದ್ದ ಸಿಲಿಂಡರ್ ಈಗ ಆಂದ್ರಪ್ರದೇಶÀದಿಂದ ಪೂರೈಕೆ ಮಾಡುತ್ತಿದ್ದು, ಆಂದ್ರದವರು ಯೂನಿಯನ್ ಮಾಡಿದ್ದಾರಂತೆ, ಮೊದಲು ಅವರ ವಾಹನ ತುಂಬಿ ನಂತರ ನಮ್ಮ ಕರ್ನಾಟಕ ಗಾಡಿ ತುಂಬಿಕಳುಹಿಸುತ್ತಿದ್ದಾರೆ. ಇದರಿಂದ ತೊಂದರೆ ಆಗುತ್ತಿದೆ.. ನಮಗೆ ಮೊದಲಿನಿಂತೆ ಬೆಳಗಾಂವನಿಂದಲೇ ಪೂರೈಕೆಯಾಗಬೇಕು. ಆಂದ್ರಪ್ರದೇಶದಿಂದ ಪೂರೈಕೆ ಬೇಡವೆಂದು ನಾವು ವಿಭಾಗೀಯ ಮಾರುಕಟ್ಟೆ ಅಧಿಕಾರಿಗಳಿಗೆ ಇಂದು ವಿತರಕರು ಸೇರಿ ಸಭೆನಡೆಸಿ ಮನವಿ ಕೊಡುತ್ತೇವೆ. ಸ್ಥಳೀಯ ಮಟ್ಟದಲ್ಲಿ ವಿತಕರಿಂದ ಯಾವುದೇ ಸಮಸ್ಯೆ ಇಲ್ಲ.
ಸಚೀನ ರಾಠೋಡ ಆಳಂದ ಸೋನಾ ಗ್ಯಾಸ್ ಏಜ್‍ನ್ಸಿ ಮಾಲೀಕ, ಗ್ಯಾಸ್ ವಿತರಕ ಸಂಘದ ಜಿಲ್ಲಾ ಮುಖಂಡ ಮುಖಂಡ.