ಮೂರು ಕ್ರೀಡೆಗಳಲ್ಲಿಯೂ ವಿದ್ಯಾರ್ಥೀನಿಯರೆ ಮೆಲುಗೈ
ತಾಳಿಕೋಟೆ:ಸೆ.11: ತಾಳಿಕೋಟೆ ಪಟ್ಟಣದಲ್ಲಿ ಇತ್ತೀಚಿಗೆ ಪ.ಪೂ.ಶಿಕ್ಷಣ ಇಲಾಖೆ ವಿಜಯಪುರ ಹಾಗೂ ಎಸ್.ಕೆ.ಪ.ಪೂ ಶಿಕ್ಷಣ ಮಹಾವಿದ್ಯಾಲಯ ತಾಳಿಕೋಟೆ ಇವರ ಸಂಯುಕ್ತಾಶ್ರರಯದಲ್ಲಿ ಜರುಗಿದ ತಾಲೂಕಾ ಮಟ್ಟದ ಕ್ರೀಡಾ ಕೂಟದಲ್ಲಿ ವಿ.ವಿ.ಎಸ್. ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥೀನಿಯರು ಗುಂಪು ಆಟಗಳಾದ ವಾಲಿಬಾಲ್, ಕಬಡ್ಡಿ, ಟೆನಿಕ್ವಾಯಿಟ್ ಈ ಮೂರು ಆಟಗಳಲ್ಲಿ ಪ್ರಥಮ ಸ್ಥಾನಗಳಿಸುವುದರೊಂದಿಗೆ ಜಿಲ್ಲಾ ಮಟ್ಟದ ಕ್ರೀಡೆಗೆ ಆಯ್ಕೆಆಗಿದ್ದಾರಲ್ಲದೆ ವೈಯಕ್ತಿಕ ಕ್ರೀಡೆಗಳಲ್ಲಿಯೂ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದುಕೊಂಡು ವಿದ್ಯಾರ್ಥೀನಿಯರು ಸಾಧನೆಗೈದಿದ್ದಾರೆ.
ವಿದ್ಯಾರ್ಥೀನಿಯರ ಸಾಧನೆಗೆ ವಿ.ವಿ.ಎಸ್. ಮಹಿಳಾ ಪದವಿಪೂರ್ವ ಕಾಲೇಜಿನ ವಿ.ವಿ.ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ( ಹಂಪಿ ಮುತ್ಯಾ),ಉಪಾಧ್ಯಕ್ಷ ಬಿ.ಎನ್. ಹಿಪ್ಪರಗಿ, ಕಾರ್ಯದರ್ಶಿ ಎಮ್.ಎಸ್.ಸರಶೆಟ್ಟಿ, ಸಹಕಾರ್ಯದರ್ಶಿ ಕಾಶೀನಾಥ ಮುರಾಳ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ವಿ.ವಿ.ಎಸ್.ಮಹಿಳಾ ಪ.ಪೂ. ಕಾಲೇಜಿನ ಚೆರಮೆನ್ ಕೆ.ಸಿ.ಸಜ್ಜನ ಹಾಗೂ ಪ್ರಾಚಾರ್ಯರಾದ ಶ್ರೀಮತಿ ಜೆ.ಸಿ.ಹಿರೇಮಠ, ದೈಹಿಕ ನಿರ್ದೇಶಕರಾದ ಶ್ರೀಮತಿ ಕೆ.ಎಸ್.ಅಂಗಡಿ ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.