ಯುವ ರೆಡ್‍ಕ್ರಾಸ್ ಕಾರ್ಯಗಾರ
ಬೀದರ : ಸೆ.11: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ
ಮಹಾವಿದ್ಯಾಲಯದಿಂದ ಮೂರು ದಿವಸದ ಕಾರ್ಯಗಾರಕ್ಕೆ ಮಹಾವಿದ್ಯಾಲಯದÀ 05 ವಿದ್ಯಾರ್ಥಿಗಳು ಅಮರ, ವೆಂಕಟೇಶ, ಆಕಾಶ, ಮಾಣಿಕಪ್ರಭು ಈ ಶಿಬಿರಾರ್ಥಿಗಳ ಜೊತೆಗೆ ಮಹಾವಿದ್ಯಾಲಯ ಗಣಿತ ಪ್ರಾಧ್ಯಾಪಕರಾದ ಶ್ರೀ ನೀಲಕಂಠ ಶೆಟಕಾರ ಇವರು ಮಹಾವೀರ ಮಂಗಳ ಭವನ ಕಾರಟಗಿ ರಸ್ತೆ ಗೋಶಾಲೆ ಸಮೀಪ ಕೊಪ್ಪಳ ಜಿಲ್ಲೆಯಲ್ಲಿ ಜರುಗಿದ ಕಾರ್ಯಗಾರದಲ್ಲಿ ಭಾಗವಹಿಸಿ ರಕ್ತದ ಗುಂಪುಗಳು ರಕ್ತದಾನದ ಮಹತ್ವ ರಕ್ತದಾನದಿಂದ ಪ್ರಾಣಾಪಾಯದಲ್ಲಿರುವ ರೋಗಿಗಳನ್ನು ಹೇಗೆ ಜೀವ ಉಳಿಸಬಹುದು ಹಾಗೂ ರಕ್ತದಾನದಿಂದ ಆರೋಗ್ಯ ಹದಗೆಡದೆ ರಕ್ತ ಶುದ್ಧವಾಗಿ ಹೊಸರಕ್ತಬಂದು ಚೈತನ್ಯ ಶಕ್ತಿ ಹೆಚ್ಚಾಗುತ್ತದೆ ಎಂಬುವುದರ ಬಗ್ಗೆ ಕಲಿತರು ಅದಲ್ಲದೇ ಅನ್ನದಾನ, ನೇತ್ರದಾನ, ಜ್ಞಾನದಾನ, ಹಾಗೂ ಮಣ್ಣಿನ ಸಂರಕ್ಷಣೆ ಕುರಿತು ಹೆಚ್ಚಿನ ಜ್ಞಾನ ಪರಿಣತರಿಂದ ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳು ಮಾಹಿತಿ ಪಡೆದರು.
ಭಾಗವಹಿಸಿರುವ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕರನ್ನು ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ. ರಜನೀಶ ಎಸ್. ವಾಲಿಯವರು, ಪ್ರಾಚಾರ್ಯರಾದ ಡಾ. ಪಿ. ವಿಠ್ಠಲ ರೆಡ್ಡಿಯವರು ಹಾಗೂ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ ಹಾಗೂ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.