ಅಲಿಯಂಬರದಲ್ಲಿ ಶಿಕ್ಷಕರ ದಿನಾಚರಣೆ: ಸಾಧಕರಿಗೆ ಸನ್ಮಾನ
ಬೀದರ್:ಸೆ.11: ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಬೀದರ್ ಜಿಲ್ಲಾ ಘಟಕ ವತಿಯಿಂದ ಬೀದರ್ ತಾಲೂಕಿನ ಅಲಿಯಂಬರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಅಲಿಯಂಬರ್ ನಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತ ಉತ್ತಮ ಸೇವೆ ಸಲ್ಲಿಸಿದ ಅಲಿಯಂಬರ್ ಗ್ರಾಮದ ಎಲ್ಲಾ ಶಾಲೆಯ ಶಿಕ್ಷಕರಿಗೆ ಗುರುಮಾತೆರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಧನರಾಜ ಮುಸ್ತಾಪುರೇ ವಹಿಸಿದ್ದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಧನರಾಜ ಮುಸ್ತಪುರೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಅವರು ಶಿಕ್ಷಣದಲ್ಲಿ ಗುರುಗಳ ಪಾತ್ರ ಬಹಳ ಮಹತ್ವವಾಗಿದೆ ಗೌರವದಿಂದ ಸಮಾಜ ಅವರನ್ನು ಕಾಣಬೇಕಾಗಿದೆ ಎಂದು ತಿಳಿಸಿದರು,
ಕಾರ್ಯಕ್ರಮ ಉದ್ದೇಶಿಸಿ ದಲಿತ ವಿದ್ಯಾರ್ಥಿ ಪರಿಷತ್ ಬೀದರ್ ಜಿಲ್ಲಾಧ್ಯಕ್ಷರಾದ ಸಂದೀಪ್ ಕಾಂಟೆ ಮಾತನಾಡಿ, ಮಹಾತ್ಮ ಜ್ಯೋತಿಬಾಪುಲೆ ಸಾವಿತ್ರಿಬಾಯಿ ಫುಲೆ ಅವರ ತ್ಯಾಗವನ್ನು ನಾವು ಇಂದು ತಿಳಿದುಕೊಳ್ಳಬೇಕಾಗಿದೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪುಸ್ತಕ ಪೆನ್ನು ನಮ್ಮ ಅಸ್ತ್ರ ಬಳಸಿಕೊಂಡರೆ ನಾವು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾಜಿ ತಾಲೂಕು ಪಂಚಾಯತ ಸದಸ್ಯ ದೀಪಕ್ ಗಾದಗೆ ಮಾತನಾಡಿ, ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ ಅವರು ಶಿಕ್ಷಕರ ದಿನಾಚರಣೆಯಾ ಬಗ್ಗೆ ಆಚರಿಸಲು ಶಿಕ್ಷಕರ ಬಗ್ಗೆ ಅಪಾರ ಗೌರವ ಕಾಳಜಿ ಹೊಂದಿರಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ಸಂಗಮೇಶ್ ಭಾವಿದೊಡ್ಡಿ ಆಯೋಜಿಸಿದರು. ಸಂಘಟನೆಯ ಪದಾಧಿಕಾರಿಗಳು ಊರಿನ ಶಿಕ್ಷಕರು ಹಾಗೂ ಯುವಕರು ಉಪಸ್ಥಿತರಿದ್ದರು
ಪ್ರೌಢ ಶಾಲೆಯ ಶಿಕ್ಷಕರು ಶಿವಕಾಂತ ಕಾರ್ಯಕ್ರಮ ನಿರೂಪಿಸಿದರು. ವಿಠಲರಾವ ಸ್ವಾಗತ ಕೋರಿದರು. ಶಿವನಂದ ಮೇತ್ರೆ ವಂದಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜು ಕುಮಾರ ಸಿರ್ಸಿಗೆ, ಮುಖಂಡರಾದ ಸಂಗಮೇಶ ಪಾಟೀಲ್, ದೀಪಕ ಗಾದಗೆ, ಸಾಯಿ ಸಿಂಧೆ, ಮಂಗಲಾ ಮರಖಲೆ, ರಿತೇಶ್ ಬಿರ್ನಳೆ, ಹಾಜಿಸಾಬ್, ಸರ್ಕಾರಿ ಪ್ರೌಢಶಾಲೆಯ sಜms ಅಧ್ಯಕ್ಷ ರಾಜಪ್ಪ ಮೈಲೂರೆ, ಸರ್ಕಾರಿ ಪ್ರಾಥಮಿಕ ಶಾಲೆಯ sಜms ಅಧ್ಯಕ್ಷ ಸಂತೋಷ ಪಡಸಲೆ, ಉಮೇಶ ಮುಗನೂರೆ, ಹುಲ್ಲೇಪ್ಪ ಘೋಡಪಳಿ, ವಿಶಾಲ ದೊಡ್ಡಿ, ಅನಿಲಕುಮಾರ ಮಡ್ಡೆ, ಬಸವರಾಜ ಭಾವಿದೊಡ್ಡಿ, ವಿನೋದ ದೋಡಮನಿ, ರೇವಣಸಿದ್ಧ ಹಡಪದ, ಕೈಲಾಸ ಮನೋಜ್ ಮೆತ್ರೆ ಜೇಮ್ಸ್ ಮಮದಾಪುರೆ ಓಂಕಾರ್ ಭಾವಿದೊಡ್ಡಿ ಬೀರಗುಂಡ ಘೋಡಂಪಳೆ ರವಿ ಕುಂಬಾರ ಸತೀಶ್ ಮುದಾಳೆ ಮಹೇಂದ್ರ ಕುಮಾರ್ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು