ನಾಮಕರಣಕ್ಕೆ ಮನವಿ
ಲಕ್ಷ್ಮೇಶ್ವರ, ಸೆ11: ಪಟ್ಟಣದ ಪುರಸಭೆಯ ಹಿರೇ ಬಣದ ಶ್ರೀ ಲಕ್ಷ್ಮಿ ಲಿಂಗ ದೇವಾಲಯದ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರಿ ವೃತ್ತ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಲಕ್ಷ್ಮೇಶ್ವರ್ ತಾಲೂಕ ವಿಶ್ವಕರ್ಮ ಘಟಕದ ಪದಾಧಿಕಾರಿಗಳು ಪುರಸಭೆಯ ಅಧ್ಯಕ್ಷೆ ಎಲ್ಲವ್ವ ದುರ್ಗಣ್ಣವರ ಮತ್ತು ಮುಖ್ಯಾಧಿಕಾರಿ ಮಹೇಶ್ ಹಡ್ಪದವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಪ್ರಪಂಚದಲ್ಲಿಯೇ ಶಿಲ್ಪ ಕಲಾ ಕೃತಿಗೆ ಜಕಣಾಚಾರ್ಯ ಅವರ ಕೊಡುಗೆ ಅಪಾರವಾದದ್ದು ಇಡೀ ದೇಶದಲ್ಲಿ ಅದರಲ್ಲೂ ಕರ್ನಾಟಕದ ಮೂಲೆ ಮೂಲೆಯಲ್ಲಿ ಅಮರ್ ಶಿಲ್ಪಿ ಜಕಣಾಚಾರಿ ಅವರ ಕಲಾ ಕೃತಿಯನ್ನು ನಾವು ಕಾಣಬಹುದಾಗಿದೆ ಆದ್ದರಿಂದ ಅವರ ಹೆಸರು ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿರುತ್ತದೆ ಅಂತಹ ಮಹಾನ ಶಿಲ್ಪಿಗೆ ಗೌರವ ಕೊಡುವ ಮೂಲಕ ಅವರ ಹೆಸರಿನ ಒಂದು ವೃತ್ತವನ್ನು ಮಾಡಿ ನಾವೆಲ್ಲರೂ ಅವರಿಗೆ ಅಂತ ಕರಣದ ಗೌರವವನ್ನು ಸಲ್ಲಿಸೋಣ ಆದ್ದರಿಂದ ಪುರಸಭೆಯಲ್ಲಿ ಸರ್ವ ಸದಸ್ಯರು ಈ ಕುರಿತು ಒಮ್ಮತದ ನಿರ್ಣಯ ಕೈಗೊಂಡು ಅಮರಶಿಲ್ಪಿ ಜಕಣಾಚಾರಿ ವೃತ್ತ ಎಂದು ನಾಮಕರಣ ಮಾಡುವಂತೆ ಪುರಸಭೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷ ಈರಪ್ಪ ಬಡಿಗೇರ ರಾಮಚಂದ್ರ ಬಡಿಗೇರ ಭಾಸ್ಕರ್ ಸೊರಟೂರ ರಾಘವೇಂದ್ರ ಬಡಿಗೇರ ನಿವೃತ್ತ ಪಿಎಸ್‍ಐ ಶ್ರೀಮತಿ ಪಿಎಂ ಬಡಿಗೇರ ಮೋಹನ್ ಸುತಾರ ಶಿವಾನಂದ್ ಬಡಿಗೇರ ಜಿಎಸ್ ಬಾಲೆಹೊಸೂರ ದೇವೇಂದ್ರಪ್ಪ ಬಡಿಗೇರ ಮೌನೇಶ ಇಟಗಿ ಎಸ್ ಡಿ ಪತ್ತಾರ ಸರಸ್ವತಿ ಬಾಲೆಹೊಸೂರ ಶಶಿಕಲಾ ವಿ ಬಡಿಗೇರ ಪಿ.ಬಿ. ಸೊರಟೂರ ಚಿದಾನಂದ ಸುತಾರ ನಾರಾಯಣ ಸುತಾರ ಸೇರಿದಂತೆ ಅನೇಕರಿದ್ದರು.