ಪೂರ್ವಭಾವಿ ಸಭೆ
ಲಕ್ಷ್ಮೇಶ್ವರ, ಸೆ11: ತಾಲೂಕಿನ ಸುರಣಿಗೆ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿಯವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ಕೈಗೊಳ್ಳಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಪ್ಟಂಬರ್ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಈಗಾಗಲೇ ಸರ್ಕಾರ ಚಾಮರಾಜನಗರದಿಂದ ಬೀದರ್ ವರೆಗೆ ಮಾನವ ಸರಪಳಿ ರಚಿಸಲು ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಗದಗ ಜಿಲ್ಲೆಯಲ್ಲಿ 61 ಕಿಲೋಮೀಟರ್ ಮಾನವ ಸರಪಳಿ ರಚಿಸುವ ಗುರಿಯನ್ನು ಹೊಂದಲಾಗಿದೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹಸೂರಿನಿಂದ ಸುರಣಗಿ ನೆಲುಗಲ್ಲು ಬೆಳ್ಳಟ್ಟಿ ಅದೇ ರೀತಿಯಾಗಿ ಶಿರಹಟ್ಟಿ ತಾಲೂಕಿನಿಂದ ಒಟ್ಟು 35 ಕೀ.ಮಿ. ಮಾನವ ಸರಪಳಿ ರಚಿಸಲಾಗುತ್ತಿದ್ದು ಎಲ್ಲರೂ ಕಡ್ಡಾಯವಾಗಿ ಪಾಲ್ಗೊಂಡು ಇದನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಅವರು ಪ್ರತಿ 100 ಮೀಟರ್ ಗೆ ಓರ್ವ ಶಿಕ್ಷಕ ಒಂದು ಕಿಲೋಮೀಟರ್ ಗೆ ಓರ್ವ ತಾಲೂಕ ಮಟ್ಟದನೂಡಲ್ ಅಧಿಕಾರಿ ಹಾಗೂ ಪ್ರತಿ ಮೂರು ಕಿಲೋಮೀಟರ್ ಗೆ ಓರ್ವ ಜಿಲ್ಲಾಮಟ್ಟದ ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು ಆದ್ದರಿಂದ ಎಲ್ಲರೂ ಇದನ್ನು ಯಶಸ್ವಿಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿ ಅದನ್ನು ಜಗತ್ತಿಗೆ ಭಾರತ ಅತ್ಯಂತ ಪ್ರಬಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವುದು ಎಂಬುದನ್ನು ಸಾಬೀತುಪಡಿಸಿ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಭರತ್ ತಹಸಿಲ್ದಾರ್ ವಾಸುದೇವ್ ವಿ ಸ್ವಾಮಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷೆ ಚೆನ್ನವ್ವ ಕಳ್ಳಿಹಾಳ ಉಪಾಧ್ಯಕ್ಷೆ ಎಲ್ಲವ್ವ ಚಕ್ರಸಾಲಿ ಸದಸ್ಯರಾದ ಶಂಕ್ರಣ್ಣ ಶೀರನಹಳ್ಳಿ ಪೀರ್ ಸಾಬ್ ರಿತ್ತಿ ಪ್ರವೀಣ್ ಸುರಣಗಿ ಮುಖಂಡರಾದ ಕೋಟೆಪ್ಪ ವರ್ದಿ ಮತ್ತು ಶಿಕ್ಷಣ ಸಂಯೋಜಕ ಈಶ್ವರ್ ಮೆಡ್ಲೇರಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.