ಜಾತ್ರಾ ಕಾರ್ಯಕ್ರಮ
ಚನ್ನಮ್ಮನ ಕಿತ್ತೂರು, ಸೆ11: ಗ್ರಾಮಗಳಲ್ಲಿ ಜಾತ್ರೆಯ ಸಮಯದಲ್ಲಿ ಸಾರ್ವಜನಿಕರೆಲ್ಲರೂ ಸೇರಿ ಒಗ್ಗಟ್ಟನಿಂದ ಸೇವಾ ಮನೋಭಾವನೆಯಿಂದ ಸೇವೆ ಮಾಡಿದರೆ ಯಾವೆಲ್ಲಾ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ ಹೇಳಿದರು.
ಸಮೀಪದ ಖಾನಾಪೂರ ತಾಲೂಕಿನ ಮಂಗೇನಕೊಪ್ಪ ಗ್ರಾಪಂ ವ್ಯಾಪ್ತಿಯ ಕಸಮಳಗಿ ದುರ್ಗಾದೇವಿ ದೇವಸ್ಥಾನದಲ್ಲಿ ದುರ್ಗಾಪರಮೇಶ್ವರಿ ಹೋಮ ಹಾಗೂ ಜಾತ್ರಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಈ ಹೋಮದಿಂದ ಚೈತನ್ಯ ವೃದ್ಧಿಸುತ್ತದೆ. ಹೋಮದ ಬೆಂಕಿ ಮತ್ತು ಹೊಗೆಯು ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿ ಕಡಿಮೆ ಮಾಡಿ ಜೀವನದಲ್ಲಿ ಸಂತೋಷವನ್ನುಂಟು ಮಾಡಿ ಕಷ್ಟ ಮಾಯಮಾಡುತ್ತದೆ ಎಂಬುವ ನಂಬಿಕೆ ಹಿರಿಯರ ಕಾಲದಿಂದಲೂ ವಾಡಿಕೆಯಿದೆ. ಈ ದೇವಸ್ಥಾನಕ್ಕೆ ಹೋಗುವ ದಾರಿ ಎನ್‍ಆರ್‍ಜಿ ಹಾಗೂ ಸಂಸದರ ನಿಧಿಯಿಂದ ಕಾಂಕ್ರಿಟ್ ರಸ್ತೆ ಮಾಡಿಸಲಾಗಿದ್ದು ಇನ್ನೂ ವಿಠ್ಠಲ-ರುಕ್ಮಿಣಿ ಗುಡಿ ನಿರ್ಮಾಣಕ್ಕಾಗಿ ಜಾಗೆ ಗುರುತಿಸಲಾಗಿದ್ದು ಶಾಸಕರ ನಿಧಿ ಅನುದಾನಡಿಯಲ್ಲಿ ಗುಡಿ ನಿರ್ಮಿಸಲಾಗುವುದೆಂದರು.
ಸಾನಿಧ್ಯವಹಿಸಿ ಆರ್ಶೀವಚನ ನೀಡಿ ಮಾತನಾಡಿದ ಬೀಳಕಿ ಚನ್ನಬಸವೇಶ್ವರ ದೇವರು ಹಣವಿದ್ದಾಗ ಭಕ್ತಿ ಮಾಡಿ ಶಕ್ತಿ ಇದ್ದಾಗ ಸೇವೆ ಮಾಡಿ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದಾಗ ಮಾತ್ರ ದೇವರು ನಮಗೆ ಒಲಿಯುತ್ತಾನೆಂಬುವುದು ಪೂರ್ವಜರಿಂದ ಬಂದ ನಂಬಿಕೆಯಾಗಿದೆ. ತಂದೆ-ತಾಯಿಯನ್ನು ಹೊರಹಾಕಿ ದೇವರ ಮುಂದೆ ಗಂಟೆ ಬಾರಿಸಿದರೆ ಅದು ಸಾರ್ಥಕವಾಗುವುದಿಲ್ಲ. ಅದಕ್ಕಾಗಿ ನೀವು ನಿಮ್ಮ ಪೋಷಕರನ್ನು ಪೂಜಿಸಿ ಎಂದು ಸೇರಿದ ಭಕ್ತಾದಿಗಳಿಗೆ ಹೇಳಿದರು.
ಜಾತ್ರಾ ಕಮೀಟಿ ಹಾಗೂ ಮಾಜಿ ಗ್ರಾಪಂ ಅಧ್ಯಕ್ಷ ಭೀಮಪ್ಪಾ ಬೋಕಡೆಕರ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಉದಯ ಬಡಸ್ಕರ, ಬೆಳಗಾವಿ ಹಾಲು ಒಕ್ಕೂಟದ ಸದಸ್ಯ ಪ್ರಕಾಶ ಅಂಬೋಜಿ, ಮಾಜಿ ತಾಪಂ ಉಪಾಧ್ಯಕ್ಷ ಬಸವರಾಜ ಬೇಕನಿ, ಸುರೇಂದ್ರ ಬಡಸ್ಕರ, ಶಂಕರ ಮಡ್ಡಿಮನಿ, ಬಾಬು ಮಡಾಕರ, ರವಿ ಬೇಕನಿ, ಮಹಾವೀರಗೌಡ್ರ, ಪಿಡಿಓ ರವಿ ತಳವಾರ, ಕೃಷಿ ಅಧಿಕಾರಿ ಮಂಜುನಾಥ ಕೆಂಚಣ್ಣವರ, ಎಸ್‍ಡಿಎಂಸಿ ಚೇರಮನ್ ಮಹಾಂತೇಶ ಮಡಾಕರ, ಕರವೇತಾಲೂಕಸಂಚಾಲಕ ಉದಯ ತೇಗೂರ, ಗಿರೀಶ ಪೂಜಾರ, ಸೇರಿದಂತೆ ಗೋವಾ-ಮಹಾರಾಷ್ಟ್ರದಿಂದ ಭಕ್ತಾಧಿಗಳು ಆಗಮಿಸಿದ್ದರು.