ವಾಲ್ಮಿಗೆ ಅಂತರ್ರಾಷ್ಟ್ರೀಯ ಮಂಡಳಿಯಿಂದ ವಾಟ್ಸೇವ್ ಪ್ರಶಸ್ತಿ
ಧಾರವಾಡ, ಸೆ 11: ಅಂತರರಾಷ್ಟ್ರೀಯ ನೀರಾವರಿ ಮತ್ತು ಒಳಚರಂಡಿ ಮಂಡಳಿ (ಐಸಿಐಡಿ) ನೀರಾವರಿ ನಿರ್ವಹಣೆ, ಪ್ರವಾಹ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ಉತ್ತೇಜಿಸಲು ವೈಜ್ಞಾನಿಕ ಹಾಗೂ ತಾಂತ್ರಿಕ ಜಾಗೃತಿ ಮೂಡಿಸುವ ಜಾಗತಿಕ ಮಟ್ಟದ ಸಂಸ್ಥೆಯಾಗಿದೆ ಎಂದು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಅವರು ಹೇಳಿದರು.
ಅವರು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ವಿವಿಧ ವಿಭಾಗಗಳ ತಜ್ಞರನ್ನು ಐಸಿಐಡಿ ಒಗ್ಗೂಡಿಸುತ್ತದೆ. ಪ್ರಸ್ತುತ, ಐಸಿಐಡಿ ಸದಸ್ಯತ್ವ ಜಾಲವು ಪ್ರಪಂಚದ ನೀರಾವರಿ ಪ್ರದೇಶದ ಶೇ. 90 ಕ್ಕಿಂತ ಹೆಚ್ಚು ಆವರಿಸಿದೆ. ಆಫ್ರಿಕಾ, ಏμÁ್ಯ, ಅಮೇರಿಕಾ ಮತ್ತು ಯುರೋಪ್ ಪ್ರತಿನಿಧಿಸುವ ಪ್ರಾದೇಶಿಕ ಗುಂಪುಗಳು ನಿರ್ದಿಷ್ಟ ಪ್ರದೇಶಗಳಿಗೆ ಸಂಬಂಧಿಸಿದ ಚಟುವಟಿಕೆಯನ್ನು ಕೈಗೊಳ್ಳಲು ಟಾಸ್ಕ್ ಪೆÇೀರ್ಸ್ ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು.
ವಿಶ್ವ ನೀರಾವರಿ ವೇದಿಕೆಯಲ್ಲಿ ಜಾಗತಿಕ, ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಚರ್ಚಿಸಲು ಪ್ರಾದೇಶಿಕ ಸಮ್ಮೇಳನಗಳು, ಮಹಾ ಅಧಿವೇಶನ, ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಅಂತರರಾಷ್ಟ್ರೀಯ ಸಹಕಾರಕ್ಕಾಗಿ ತ್ರೈವಾರ್ಷಿಕ ಕಾಂಗ್ರೆಸ್‍ನಲ್ಲಿ ಜಾಗತಿಕ ತಜ್ಞರ ಉಪನ್ಯಾಸ, ಕೃಷಿ ನೀರಿನ ನಿರ್ವಹಣೆಯಲ್ಲಿ ಯುವ ವೃತ್ತಿಪರರನ್ನು ಪೆÇ್ರೀತ್ಸಾಹಿಸುವುದು. ತಜ್ಞರು ತಮ್ಮ ಸೇವೆಗಳು ಮತ್ತು ಪರಿಣತಿಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯದ ಜಲ ಸಂಪನ್ಮೂಲ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯು ಅಂತರರಾಷ್ಟ್ರೀಯ ಮಂಡಳಿ ಇವರಿಂದ ವಾಟ್ಸೇವ್ ಕರ್ನಾಟಕದ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ (ಪಿಐಎಮ್)ನ್ನು ಯಶಸ್ವಿಯಾಗಿ ಅನುμÁ್ಠನಗೊಳಿಸಲು ಕೈಕೊಂಡ ಕ್ರಮಗಳನ್ನು ಗುರುತಿಸಿ 2024 ರ ಪ್ರಶಸ್ತಿಗೆ ಉನ್ನತ ಮಟ್ಟದ ತೀರ್ಪುಗಾರರ ಸಮಿತಿಯಿಂದ ಆಯ್ಕೆಯಾಗಿದೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಪ್ಟೆಂಬರ್ 3, 2024 ರಂದು ನಡೆದ 75ನೇ ಆಡಳಿತ ಕಾರ್ಯಕಾರಿಣಿ ಸಮಿತಿ (ಐ.ಇ.ಸಿ) ಅಧಿವೇಶನ ಮತ್ತು 9ನೇ ಏಷಿಯನ್ ಪ್ರಾದೇಶಿಕ ಸಮ್ಮೇಳನ ಸಮಾರಂಭದಲ್ಲಿ ಐಸಿಐಡಿ ಅಧ್ಯಕ್ಷರಾದ ಡಾ. ಮಾರ್ಕೊ ಆರ್ಸಿಯೆರಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ವಾಲ್ಮಿ ಸಂಸ್ಥೆಯ ನಿರ್ದೇಶಕರಾದ ಡಾ. ರಾಜೇಂದ್ರ ಪೆÇೀದ್ದಾರ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಆಯೋಗದ ಸದಸ್ಯತ್ವವು ತಮ್ಮ ದೇಶಗಳನ್ನು ಪ್ರತಿನಿಧಿಸುವ ರಾಷ್ಟ್ರೀಯ ಸಮಿತಿಯ (ಓಅ) ಪ್ರತಿನಿಧಿಗಳು ಮತ್ತು ಅಂತರಾಷ್ಟ್ರೀಯ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.