ಬೆಂಗಳೂರು ವಿವಿಯ ನಾಟಕ ವಿಭಾಗದಲ್ಲಿದರೂರು ದೇವರಾಜಗೆ ನಾಲ್ಕು ಚಿನ್ನದ ಪದಕ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.11: ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಬಳಿಯ ಬೀರಣ್ಣ ಕ್ಯಾಂಪಿನ ಈರಣ್ಣ ಕುರಿ ಸಾಕಾಣಿಕೆ ಮಾಡಿದರೆ ಆತನ ಪತ್ನಿ ರೇಣುಕಮ್ಮ‌ಸಿರಿಗೇರಿ ಕ್ರಾಸ್ ನಲ್ಲಿ ಹಣ್ಣು ಮಾರುತ್ತಾರೆ. ಇವರ ಮಗ  ದೇವರಾಜ.ಹೆಚ್ ಬೆಂಗಳೂರು ವಿಶ್ವವಿದ್ಯಾಲಯದ 59 ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರದರ್ಶನ ಮತ್ತು  ನಾಟಕಕಲೆ ವಿಭಾಗದಲ್ಲಿ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಈರಣ್ಣ  ತಮ್ಮ ಕಷ್ಟದ ಜೀವನದಲ್ಲಿಯೂ ತಮ್ಮ ಎಲ್ಲ ಐದು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ,
ವಿದ್ಯಾಭ್ಯಾಸದ ಶುಲ್ಕ ಕ್ಕಾಗಿ ಬೆಂಗಳೂರಿಗೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಹುಡುಗ ಅಭಿನಯದಲ್ಲಿನ ಆಸಕ್ತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ (ನಾಟಕ ವಿಭಾಗಕ್ಕೆ) ಸೇರಿ ಚಿನ್ನದ ಸಾಧನೆ ಗೈದಿದ್ದಾರೆ
ಪ್ರೊ ಕೆ. ರಾಮಕೃಷ್ಣಯ್ಯ ನವರ ಗರಡಿಯಲ್ಲಿ ಪಳಗಿ ಎಲ್ಲ ಆಯಾಮಗಳಲ್ಲಿ ಕಲಿತು ಪ್ರಸ್ತುತ  ಖಾಸಗಿ ಶಾಲೆಯಲ್ಲಿ ರಂಗ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.