“ರೈತರು ಯಂತ್ರದಿಂದ ಧಾನ್ಯ ಒಕ್ಕಣೆ ಮಾಡುವದನ್ನು ತಡೆಯಲು ಮನವಿ ಪತ್ರ”
ಸಂಜೆವಾಣಿ ವಾರ್ತೆ
ಸಿರಿಗೇರಿ:ಸೆ.11. ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ರೈತರು ಯಂತ್ರದಿಂದ ಧಾನ್ಯ ಒಕ್ಕಣೆ ಮಾಡುವದನ್ನು ತಡೆಯುವಂತೆ ಸ್ಥಳೀಯ ಗ್ರಾಮಾಡಳಿತಕ್ಕೆ ಮನವಿ ಪತ್ರ ನೀಡಲಾಗಿದೆ. ಗೋಡೆ ಅಡಿವೆಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಿವೇಕಾನಂದ ಪ್ರೌಢಶಾಲೆಯ ಶಿಕ್ಷಕ ವೃಂದದವರು ಪಿಡಿಓ ರವರಿಗೆ ಮನವಿ ಪತ್ರ ನೀಡಿದ್ದು, ಗ್ರಾಮದ ಎಪಿಎಂಸಿ ಆವರಣದಲ್ಲಿ ಪ್ರತಿನಿತ್ಯ ರೈತರು ಯಂತ್ರಗಳಿಂದ ಧಾನ್ಯಗಳ ಒಕ್ಕಣೆ ಮಾಡುತ್ತಿದ್ದಾರೆ.
ನಂತರ ಧಾನ್ಯಗಳನ್ನು ಗಾಳಿಗೆ ತೂರುತ್ತಾರೆ ಇದರಿಂದ ತ್ಯಾಜ್ಯಗಳ ಧೂಳು ಶಾಲೆಯ ಕೊಠಡಿಗಳಲ್ಲಿ ತೂರಿ ಬರುತ್ತಿದೆ. ಯಂತ್ರಗಳ ಶಬ್ದದಿಂದ ವಿದ್ಯಾರ್ಥಿಗಳ ಪಾಠಗಳಿಗೆ ತೊಂದರೆಯಾಗುತ್ತಿದೆ. ತ್ಯಾಜ್ಯದ ಧೂಳೂ ಸುಂಕದಿಂದ ಮಕ್ಕಳಿಗೆ ತುರಿಕೆ, ಚರ್ಮರೋಗ ಸಮಸ್ಯೆ, ಕಣ್ಣಿನ ತೊಂದರೆ ಇತರೆ ಅನಾರೋಗ್ಯ ಉಂಟಾಗುತ್ತಿದೆ. ಎಲ್‍ಕೆಜಿ ಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಸಮಸ್ಯೆಯಾಗಿದೆ.
ಕೂಡಲೇ ಈ ಸಮಸ್ಯೆಯನ್ನು ಖದ್ದಾಗಿ ಬಂದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಶಾಲೆಯ ಮಕ್ಕಳೊಂದಿಗೆ ಪಂಚಾಯಿತಿ ಮುಂದೆ ಧರಣಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಒತ್ತಾಯಿಸಲಾಗಿದೆ. ಮನವಿ ಸ್ವೀಕರಿಸಿದ ಪಿಡಿಓ ಯು.ರಾಮಪ್ಪ ಮಾತನಾಡಿ ಈ ಸಮಸ್ಯೆಯ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಪ್ರೌಢ ಶಾಲೆಯ ಮುಖ್ಯಗುರುಗಳಾದ, ಎನ್.ಪಂಪಾಪತಿ, ಪ್ರಾ.ಶಾಲೆ ಮುಖ್ಯಗುರು ಕಾರೆಶಾಂತಮ್ಮ, ಸಂಸ್ಥೇಯ ಕಾರ್ಯದರ್ಶಿ ಗೋಡೆವೀರೇಶಗೌಡ, ಸಹ ಶಿಕ್ಷಕರಾದ ಶಿವಕುಮಾರ್, ವಿ.ಪರಶುರಾಮ, ಮಹಾಬಳೇಶ್ವರ, ಅಧ್ಯಕ್ಷರ ಪರವಾಗಿ ಎಚ್.ದ್ಯಾವಣ್ಣ, ಗ್ರಾ.ಪಂ.ಸದಸ್ಯರಾದ ಗುಡಟ್ಟಿಈರಣ್ಣ, ಎನ್.ಹನುಮಂತಪ್ಪ, ಡಿವಿಪಿ ಜಿಲ್ಲಾ ಸಂಚಾಲಕ ಎಚ್.ಲಕ್ಷ್ಮಣ, ಎಸ್‍ಡಿಎಂಸಿ ಅಧ್ಯಕ್ಷ ಬಿ.ನಾಗರಾಜ ಇದ್ದರು.