ಕಟ್ಟಡದ ಹೊಸ ಬಗೆಯ ಸಾಮಾಗ್ರಿಗಳ ತಂತ್ರಜ್ಞಾನದ ನಿರ್ಮಾಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.11:  ಸರ್.ಎಂ.ವಿಶೇಶ್ವರಯ್ಯನವರ 164 ನೇ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಬಳ್ಳಾರಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್‌ ನಿಂದ ನಾಡಿದ್ದು ಸೆ. 13 ರಿಂದ 15 ರವರೆಗೆ ಕಮ್ಮ ಭವನದಲ್ಲಿ ಹಮ್ಮಿಕೊಂಡಿರುವ  ನಿರ್ಮಾಣ ೨೦೨೪ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಜನತೆ ಕಟ್ಟಡಗಳ ಹೊಸ ಬಗೆಯ ಸಾಮಾಗ್ರಿ ಮತ್ತು ತಂತ್ರಜ್ಞಾನವನ್ನು ಅರಿಯಬಹುದಾಗಿದೆ.
ಈ ಬಗ್ಗೆ ಇಂದು ಅಸೋಸಿಯೇಷನ್ ಅಧ್ಯಕ್ಷ ಹೊಸೂರು ಈಶ್ವರಗೌಡ ನಗರದಲ್ಲಿ ಮಾಧ್ಯಮಗೊಷ್ಟಿ‌ ನಡೆಸಿ ಈ ವಿಷಯ ತಿಳಿಸಿದರು.
ನಗರದ  ಕಮ್ಮಾಭವನದಲ್ಲಿ ಇದನ್ನು  ಏರ್ಪಡಿಸಿದ್ದು.  55 ಸ್ಟಾಲ್ ಗಳಲ್ಲಿ  ವಿನೂತನ ಬಗೆಯ ಕಟ್ಟಡ ಸಾಮಗ್ರಿಗಳು, ಕಟ್ಟಡ ನಿರ್ಮಿಸಲು ಬೇಕಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ನಗರದಲ್ಲಿ ಮನೆ ಕಟ್ಟುವ ಜನರಿಗೆ ಇದು ಅನುಕೂಲಕಾರಿಯಾಗಿದೆ. ಗ್ರಾಹಕರಿಗೆ ಮತ್ತು ಕಂಪನಿಗಳಿಗೆ, ಮಾರಾಟಗಾರರಿಗೆ ಕೊಂಡಿಯಾಗಿ ಅಸೋಸಿಯೇಷನ್ ಈ ಕೆಲಸ ಮಾಡುತ್ತಿದೆಂದರು.
ಒಂದೇ ಸೂರಿನಡಿ ಕಟ್ಟಡ ಸಾಮಗ್ರಿಗಳ ಪರಿಚಯ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕಟ್ಟಡ ಸಾಮಗ್ರಿ ಕಂಪನಿಗಳು ಮತ್ತು ಮಾರಾಟಗಾರರು ಇರಲಿದ್ದಾರೆ.
ಮನೆ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಪರಿಚಯಿಸುವ ಕೆಲಸವನ್ನು ನಿರ್ಮಾಣ್ -೨೦೨೪ ಮೂಲಕ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್‌ ಮಾಡುತ್ತಿದೆಂದರು.
ಈ ವೇಳೆ ಹಿರಿಯ ಸಿವಿಲ್ ಇಂಜಿನಿಯರ್ಸ್ ಮತ್ತು ತಾಂತ್ರಿಕ ಕಾಲೇಜುಗಳ ಮುಖ್ಯಸ್ಥರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಹೊಸ ತಂತ್ರಜ್ಞಾನದ ಬಗ್ಗೆ ಉಪನ್ಯಾಸವನ್ನು ಸಹ ನೀಡಲಿದೆ. ಸೆ.22 ರಂದು ಮ್ಯಾರಥಾನ್ ಹಮ್ಮಿಕೊಂಡಿದೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್  ಕಾರ್ಯದರ್ಶಿ ಪಿ.ಪ್ರಕಾಶ್, ಜಂಟಿ ಕಾರ್ಯದರ್ಶಿ ರಾಜೀವ್ ಮತ್ತು ಟಿ.ಆರ್.ರಾಕೇಶ್ ಭಾಗಿಯಾಗಿದ್ದರು.