ನೇಕಾರರ ಸಂಘಕ್ಕೆ ನಿರ್ದೇಶಕ ಆಯ್ಕೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.11: ನಗರದ ಡಾಕ್ಟರ್ ರಾಜ ಕುಮಾ‌ರ್ ರಸ್ತೆಯ ಬಳ್ಳಾರಿ ಜಿಲ್ಲಾ ಕೈಮಗ್ಗ ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘಕ್ಕೆ ಇತ್ತೀಚೆಗೆ  ಆಡಳಿತ ಮಂಡಳಿಯ ನಿರ್ದೇಶಕರ  ಚುನಾವಣೆ ನಡೆಯಿತು.
ಈ ಚುನಾವಣೆಯಲ್ಲಿ ಸಾಮಾನ್ಯ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡ/ ಮಹಿಳಾ ಮೀಸಲು ಹಾಗೂ ಹಿಂದುಳಿದ ವರ್ಗ-ಎ ಸ್ಥಾನಗಳಿಂದ ರಾಮಕೃಷ್ಣಯ್ಯ.ಎ (86), ಮುರಳಿ.ಜಿ (58), ಕೊನಯ್ಯ.ಸಿ(57), ಕಿರೀಟಪ್ಪ,
ಆರ್ (56), ಶೀಲಾ ಚಿನ್ನ ಬ್ರಹ್ಮಯ್ಯ (56), ವದ್ದಿಲ್ಲ ಲಕ್ಷ್ಮಿ ದೇವಿ (52), ಲಕ್ಷ್ಮಿ ಪ್ರೇಮಿಳ(79), ಪದ್ಮಾವತಿ.ಬಿ (104), ಲಕ್ಷ್ಮೀದೇವಿ.ಎಸ್ (57), ಜಿಂಕಾ ಲಕ್ಷ್ಮಿ ದೇವಿ (56), ರಾಜ ಕೆ.ಎನ್ (101) ಈ ಹನ್ನೊಂದು ಅಭ್ಯರ್ಥಿಗಳು ಆಯ್ಕೆಗಿದ್ದಾರೆಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.