ಕಾವೇರಿ ಕಣಿವೆಯ 3 ನದಿಗಳು ಕಲುಷಿತ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.11:– ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಕಾವೇರಿ, ಕಪಿಲಾ ಹಾಗೂ ಲಕ್ಷ್ಮಣ ತೀರ್ಥ ನದಿ ಕಲುಷಿತಗೊಂಡಿರುವ ಬಗ್ಗೆ ತಾಂತ್ರಿಕ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಕರ್ನಾಟಕ ಸೇರಿದಂತೆ ದೇಶದ ಎ¯್ಲÁ ನದಿಗಳ ನೀರಿನ ಗುಣಮಟ್ಟದ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವೈಜ್ಞಾನಿಕ ಸಂಶೋಧನೆ ಮೂಲಕ ಸಮೀಕ್ಷೆ ನಡೆಸಿತ್ತು. ಮಂಡಳಿಯ ಪ್ರಕಾರ ಕರ್ನಾಟಕ ರಾಜ್ಯದ 17 ನದಿಗಳು ಸೇರಿದಂತೆ ದೇಶದ 311 ನದಿಗಳು ಕಲುಷಿತಗೊಂಡಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2022ರಲ್ಲಿ ವರದಿ ಪ್ರಕಟಿಸಿತ್ತು.
ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಪ್ರತಿ ಲೀಟರ್ ಶುದ್ಧ ನೀರಿನಲ್ಲಿ 1ಎಂಜಿ ಬಯೋ ಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಇರಬೇಕು. ಆದರೆ ಕಾವೇರಿ ನದಿ ನೀರಿನಲ್ಲಿ 6 ಬಿಒಡಿ ಪ್ರಮಾಣವಿದ್ದರೆ, ಕಪಿಲಾ ನೀರಿನಲ್ಲಿ 3.8 ಇದ್ದರೆ, ಲಕ್ಷ್ಮಣ ತೀರ್ಥದಲ್ಲಿ 5.6ರಷ್ಟು ಬಿಒಡಿ ಪ್ರಮಾಣವಿದೆ.
ಬೆಂಗಳೂರಿನ ನಂದಿ ಬೆಟ್ಟದಲ್ಲಿ ಹುಟ್ಟುವ ಪಿನಾಕಿನಿ ನದಿ ನೀರಿನಲ್ಲಿ 111, ಅಘನಾಶಿನಿಯಲ್ಲಿ 3.3, ಅರ್ಕಾವತಿಯಲ್ಲಿ 39, ಭÀದ್ರಾದಲ್ಲಿ 7, ಭೀಮಾದಲ್ಲಿ 4, ಗಂಗಾವಳಿಯಲ್ಲಿ 3.4, ಕಾಗಿಣದಲ್ಲಿ 3.1, ಕೃಷ್ಣದಲ್ಲಿ 4.7, ನೇತ್ರಾವತಿಯಲ್ಲಿ 6, ಶರಾವತಿಯಲ್ಲಿ 3.3, ಶಿಂಶಾದಲ್ಲಿ 9.5, ತುಂಗಾದಲ್ಲಿ 6.2 ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಕಾವೇರಿ, ಕಪಿಲಾ, ಲಕ್ಷ್ಮಣ ತೀರ್ಥ ಸೇರಿದಂತೆ ಕರ್ನಾಟಕದ 17 ನದಿಗಳ ಕಲುಷಿತತೆ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ನ್ಯಾಯ ಮಂಡಳಿಗೆ ಪ್ರಮಾಣ ಪತ್ರ ಕೂಡ ಸಲ್ಲಿಸಿತ್ತು. ಈ ಹಿನ್ನೆಲೆ ಕರ್ನಾಟಕದ ಕಾವೇರಿ, ಕಪಿಲಾ, ಲಕ್ಷ್ಮಣ ತೀರ್ಥ ಸೇರಿದಂತೆ 17 ನದಿಗಳ ಬಗ್ಗೆ ವೈಜ್ಞಾನಿಕ ಸಂಶೋಧÀನೆ ನಡೆಸಿ ವರದಿ ನೀಡುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿತ್ತು.
ಇದರ ಮಧ್ಯೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕೂಡ ಸರ್ಕಾರಕ್ಕೆ ಪತ್ರ ಬರೆದು ನಗರ ಪ್ರದೇಶದ ಕಲುಷಿತ ನೀರು ನೇರವಾಗಿ ಕಾವೇರಿ ನದಿ ನೀರು ಸೇರುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು.
ಈ ಹಿನ್ನೆಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದ ಮೇರೆಗೆ ಮಂಡಳಿಯ ಮೈಸೂರು ವಿಭಾಗ ತಾಂತ್ರಿಕ ತಜ್ಞರ ಸಮತಿಯೊಂದನ್ನು ರಚಿಸಿತ್ತು.
ಪ್ರಧಾನ ಪರಿಸರ ಅಧಿಕಾರಿ ಡಾ.ಪಿ.ನಿರಂಜನ್, ನಿವೃತ್ತ ಪರಿಸರ ಅಧಿಕಾರಿ ಡಾ.ಬಿ.ಎಂ.ಪ್ರಕಾಶ್, ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಎಕ್ಸಿಕ್ಯೂಟಿವ್ ಎಂಜಿನಿಯರ್, ಕಾವೇರಿ ನೀರಾವರಿ ನಿಗಮದ ಸೂಪರಿಡೆಂಟೆಂಟ್ ಎಂಜಿನಿಯರ್, ಮೈಸೂರು ವಿಶ್ವವಿದ್ಯಾನಿಲಯದ ಒಬ್ಬ ಪ್ರಾ`Á್ಯಪಕರು ಹಾಗೂ ಎಸ್ ಜೆಸಿಇ ಒಬ್ಬ ಪ್ರಾಧ್ಯಾಪಕ ಸೇರಿದಂತೆ ತಾಂತ್ರಕ ತಜ್ಞರ ಸಮಿತಿ ರಚನೆ ಮಾಡಿತ್ತು.
ಕೊಡಗು ಜಿ¯್ಲÉಯಲ್ಲಿ ಉಗಮಿಸುವ ಕಾವೇರಿ ನದಿ ಕುಶಾಲನಗರ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ, ಮೈಸೂರು, ಶ್ರೀರಂಗಪಟ್ಟಣ, ತಿ.ನರಸೀಪುರ, ಕೊಳ್ಳೆಗಾಲ ಮರ್ಗದಲ್ಲಿ ಹರಿಯುವಾಗ ಕಲುಷಿತಗೊಳ್ಳುತ್ತಿದೆ. ಅದರಲ್ಲೂ ಮೈಸೂರು ನಗರದ ಒಳ ಚರಂಡಿ ನೀರು ನೇರವಾಗಿ ಕಾವೇರಿ ನದಿ ಸೇರುತ್ತಿದೆ.
ಇದಲ್ಲದೆ ಕಬಿನಿ ಜಲಾಶಯದಿಂದ ಬರುವ ಕಪಿಲಾ ನದಿಗೆ ಕೂಡ ಕಲುಷಿತ ನೀರು ಸೇರುತ್ತಿದೆ. ನಂಜಗೂಡು ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಹಾಗೂ ನಂಜನಗೂಡು ಪಟ್ಟಣದ ಒಳ ಚರಂಡಿ ನೀರು ಕಪಿಲಾ ನದಿ ನೀರು ಸೇರುತ್ತಿದೆ. ಲಕ್ಷ್ಮಣ ತೀರ್ಥ ನದಿಯ ಪರಿಸ್ಥಿತಿ ಇದಕ್ಕಿಂತ ಭಿನ್ನಾವಾಗಿಲ್ಲ. ಹುಣಸೂರು, ಕೆ.ಆರ್.ನಗರ ಸೇರಿದಂತೆ ಇತರೆಡೆಯ ಕಲುಷಿತ ನೀರು ಲಕ್ಷ್ಮಣ ತೀರ್ಥ ನದಿ ಸೇರುತ್ತಿದೆ.
ಈ ಹಿನ್ನೆಲೆ ತಾಂತ್ರಿಕ ತಜ್ಞರ ಸಮಿತಿ ಸುಮಾರು ಒಂದೂವರೆ ತಿಂಗಳ ಕಾಲ ಮೂರು ನದಿಗಳ ಕಲುಷಿತತೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅಧÀ್ಯಯನ ಮಾಡಿ, ಮೂರು ನದಿಗಳ ನೀರು ಕಲುಷಿತವಾಗಿದೆ ಎಂದು 15 ದಿನಗಳ ಹಿಂದೆಯೇ ಸಮಗ್ರ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ.