ಸೆ.೧೪ ರಂದು‌ ನಮ್ಮೂರ ಮಸೀದಿ ನೋಡ ಬನ್ನಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೧೧; ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಮರ್ಕಜಿ ಮಸ್ಜಿದ್ ಎ ಮುಹಮ್ಮದಿಯ ಮಸೀದಿಯಲ್ಲಿ ಸೆ.೧೪ ರಂದು ಬೆಳಗ್ಗೆ ೧೦ ರಿಂದ ಸಂಜೆ ೭ ರವರೆಗೆ ನಮ್ಮೂರ ಮಸೀದಿ ನೋಡ ಬನ್ನಿ ಮಸೀದಿ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಸೀದಿ ಸದಸ್ಯರು ಹಾಗೂ ಕನ್ನಡ ಶಿಕ್ಷಕರಾದ ಮಹಮ್ಮದ್ ಉಮರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಸೀದಿಯಲ್ಲಿ ನಡೆಯುವ ಪ್ರಾರ್ಥನೆಗಳು,ಸಭಾ ವಿಧಾನ,ನಮಾಜ್ ಮಾಡುವ ವಿಧಿವಿಧಾನಗಳ ಪರಿಚಯ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಮಾನವೀಯ ಮನೋಭಾವ ಎತ್ತಿ ಹಿಡಿಯುವ,ಪರಸ್ಪರ ಪ್ರೀತಿ ಮತ್ತು ಸಹೋದರತೆಯ ಸಂದೇಶವನ್ನು ಸಾರುವ ಉದ್ದೇಶ ಇದಾಗಿದೆ.ಏಕತೆಯ ವಾತಾವರಣ ನಿರ್ಮಾಣ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಸೀದಿ ಅಧ್ಯಕ್ಷಸೈಯದ್ ಅಹಮದ್, ಮೌಲ್ವಿ ಉಮರ್ ಫಾರುಕ್ ಮೊಹಮ್ಮದಿ,ಶೇಖ್ ನೂರೂಲ್ಲಾ ,ಎಂ.ಎ ಅತಾವುಲ್ಲಾ,ಬಿ.ಕೆ ಶಕೀಲ್ ಅಹಮದ್, ಡಿ.ವಿ ನೇಹಮತ್ ವುಲ್ಲಾ ಉಪಸ್ಥಿತರಿದ್ದರು.
