77ನೇ ವಧುವರರ ಸಮಾವೇಶ ಯಶಸ್ವಿ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.11:- ಜೆಎಸ್‍ಎಸ್ ವಿವಾಹ ವೇದಿಕೆಯಿಂದ ನಗರದ ಶ್ರೀ ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಇತ್ತೀಚೆಗೆ ವಧುವರರ ಸಮಾವೇಶ ಏರ್ಪಡಿಸಲಾಗಿತ್ತು.
ವಧು ವರರು ಹಾಗೂ ಅವರ ಪೋಷಕರು ಈ ಸಮಾವೇಶÀದಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಮಾವೇಶದಲ್ಲಿ ಭಾಗವಹಿಸಿದ್ದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಡಾ.ಎನ್.ಮಲ್ಲಿಕಾ, ಪಿ. ಆಶಾಭವಾನಿ ಮತ್ತು ಮಮತ ಸುರೇಶ್ ಅವರುಗಳು ವಧುವರರನ್ನು ವೇದಿಕೆಗೆ ಆಹ್ವಾನಿಸಿದರು. ಪ್ರೊಜೆಕ್ಟರ್ ಮೂಲಕ ವಧುವರರ ಮಾಹಿತಿ ಮತ್ತು ಅವರ ಭಾವಚಿತ್ರಗಳನ್ನು ಪರಿಚಯ ಮಾಡಿಕೊಟ್ಟರು.
ಜೆಎಸ್‍ಎಸ್ ವಿವಾಹ ವೇದಿಕೆ ಕಳೆದ ಹತ್ತಾರು ವರ್ಷಗಳಿಂದ ವಿವಾಹಾಪೇಕ್ಷಿಗಳಾದ ವಧುವರರ ಮಾಹಿತಿ ಕೇಂದ್ರವನ್ನು ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿದೆ. ಮೈಸೂರಿನಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ವಧುವರರ ಸಮಾವೇಶ ನಡೆಸಲಾಗುತ್ತಿದೆ. ವಧುವರರ ಕುಟುಂಬಗಳ ಪರಸ್ಪರ ಒಪ್ಪಿಗೆಯ ಮೇಲೆ ವಿವಾಹಗಳು ನಡೆಯುತ್ತಿವೆ.
ಮುಂದಿನ ಸಮಾವೇಶಗಳಲ್ಲಿ ವಧುವರರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸದವಕಾಶವನ್ನು ಉಪಯೋಗಿಸಿಕೊಳ್ಳಬಹುದಾಗಿದೆ ಎಂದು ವೇದಿಕೆಯ ಮುಖ್ಯಸ್ಥರು ತಿಳಿಸಿದ್ದಾರೆ.