2 ಅರೋಪಿಗಳ ಬಂಧನ- 36 ಸಾವಿರ ರೂ ಮೌಲ್ಯದ ಗಾಂಜಾ ವಶ
ಕೋಲಾರ,ಸೆ,೧೧-ಕಾನೂನು ಬಾಹಿರವಾಗಿ ಗಾಂಜಾವನ್ನು ಮಾರಾಟ ಮಾಡಲು ತಂದಿದ್ದ ಸುಮಾರು ೩೬ ಸಾವಿರ ರೂ ಮೌಲ್ಯದ ೮೫೭ ಗಾಂಜಾವನ್ನು ಮಾಲೂರಿನ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ವಶ ಪಡೆಸಿ ಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಅರೋಪಿಗಳು ಬಿಹಾರ ಮೂಲ ನಿವಾಸಿಗಳಾದ ರಂಜನ್ ಕುಮಾರ್ (೨೨) ಹಾಗೂ ಬಾಮ್ ಬಾಮ್ ಕುಮಾರ ಭಾರತಿ (೨೩) ಎಂದು ಗುರುತಿಸಲಾಗಿದೆ.
ಮಾಲೂರು ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದ ಗಂಗಾಧರ್ ಅವರಿಗೆ ಸೇರಿದ ರೊಮ್‌ನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು,
ಆರೋಪಿಗಳು ಗಾಂಜಾ ವನ್ನು ಕೆ.ಜಿ.ಗಳಲ್ಲಿ ಪಡೆದು ಅದನ್ನು ಪಾಕೇಟ್‌ಗಳಾಗಿ ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದಿಸುವ ಧಂದೆಯನ್ನು ನಡೆಸುತ್ತಿದ್ದರು, ಈ ಕುರಿತು ಮಾಲೂರಿನ ಪೊಲೀಸ್ ಇನ್ಸಪೆಕ್ಟರ್ ಯಶಸ್ವಂತ್ ಹಾಗೂ ಪಿ.ಎಸ್.ಐ. ಗೀತಮ್ಮ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳಾದ ನಾಗಭೋಷನ್ ರೆಡ್ಡಿ, ಮೂರ್ತಿ, ಮಹೆಂತೇ, ಮತ್ತು ಸೆಲ್ವಿಕುಮಾರಿ ಅವರೊಂದಿಗೆ ರೂಮಿನ ಮೇಲೆ ದಾಳಿ ಮಾಡಿದಾಗ ಸುಮಾರು ೮೫೭ ಗ್ರಾಂ ಗಾಂಜಾ ಪತ್ತೆಯಾಗಿದ್ದು ಇದರ ಮೌಲ್ಯ ೩೬ ಸಾವಿರ ರೂ ಮೌಲ್ಯವೆಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಹಾಜರುಪಡೆಸಲಾಗಿದೆ.