ತಮಿಳುನಾಡಿನ ಕಸಾಯಿಖಾನೆಗೆ ಕರುಗಳನ್ನು ಸಾಗಿಸುತ್ತಿದ್ದ ವ್ಯಕ್ತಿ ಬಂಧನ
ಸಂಜೆವಾಣಿ ವಾರ್ತೆ
ಹನೂರು ಸೆ 11 :- ತಮಿಳುನಾಡಿನ ಕಸಾಯಿಖಾನೆಗೆ ಕಡೆಗೆ ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು ವಾಹನ ಮತ್ತು ಕರುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಸಂಭಂದ ರಾಮಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹನೂರು ತಾಲೂಕಿನ ಕೆ.ವಿ.ಎನ್ ದೊಡ್ಡಿ ಗ್ರಾಮದ ನಾಗೇಶ್ ಎಂಬ ವ್ಯಕ್ತಿ ಬಂಧಿತ ಆರೋಪಿಯಾಗಿದ್ದಾನೆ. ಈತನು ಹನೂರಿನಿಂದ ತಮಿಳುನಾಡಿನ ಕಸಾಯಿಖಾನೆಗೆ ಕಡೆಗೆ ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ತಿಳಿದುಬಂದಿದೆ.
ರಾಮಾಪುರ ಪೆÇಲೀಸ್ ಠಾಣೆ ಅಪರಾಧ ವಿಭಾಗ ಎ.ಎಸ್.ಐ. ಲೊಕೇಶ್, ಎ.ಎಸ್.ಐ. ಗುರುಸ್ವಾಮಿ ಅವರ ನೇತೃತ್ವದಲ್ಲಿ ಹನೂರು ಅಜ್ಜಿಪುರ ರಸ್ತೆ ಮಾರ್ಗದ ಕಣಿವೆ ಆಂಜನೇಯ ಸ್ವಾಮಿಯ ದೇವಸ್ಥಾನದ ಹತ್ತಿರ ಅಶೋಕ್ ಲೈ ಲ್ಯಾಂಡ್ ವಾಹನವನ್ನು ತಪಾಸಣೆ ನಡೆಸಿದಾಗ ಸುಮಾರು 13 ಕರುಗಳನ್ನು ಸಾಗಾಟ ಮಾಡುತ್ತಿರುವುದು ಕಂಡುಬರುತ್ತದೆ.
ನಂತರ ಕರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ನಾಗೇಶ್ ಎಂಬಾತನನ್ನು ಬಂಧಿಸಿ ವಾಹನ ಮತ್ತು ಕರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈ ಗೊಳ್ಳಲಾಗಿದೆ. ರಾಮಾಪುರ ಪೆÇಲೀಸ್ ಠಾಣೆ ಅಪರಾಧ ವಿಭಾಗ ಎ.ಎಸ್.ಐ. ಲೊಕೇಶ್, ಎ.ಎಸ್.ಐ. ಗುರುಸ್ವಾಮಿ, ಶಂಕರ್, ಮಹೇಂದ್ರ ಇತರರು ಇದ್ದರು.