ದಿಶಾ ಸಭೆಗೆ ಕೈಗಾರಿಕೋದ್ಯಮಿಗಳ ಗೈರು ಜಿಲ್ಲಾಧಿಕಾರಿಗಳ ಅದೇಶಕ್ಕಿಲ್ಲ ಕಿಮ್ಮತ್ತು
ಕೋಲಾರ,ಸೆ,೧೧-ಜಿಲ್ಲೆಯಲ್ಲಿನ ಕೈಗಾರಿಕೆಗಳ ಉದ್ಯಮಿಗಳು ನನ್ನ ಅದೇಶಕ್ಕೆ ಮಾನ್ಯತೆ ನೀಡುತ್ತಿಲ್ಲ. ಸಭೆಗಳಿಗೆ ಆಹ್ವಾನಿಸಿದರೂ ಸಬೂಬು ಹೇಳಿ ನಿರ್ಲಕ್ಷಿಸುವ ಮೂಲಕ ಗೈರು ಹಾಜರಾತಿಯಾಗುತ್ತಿದ್ದಾರೆ.
ಬೆಂಗಳೂರು-ದೆಹಲಿ ಮುಂತಾದ ಕಡೆ ಬೆರಳು ಮಾಡಿ ಸಭೆಗೆ ಬಾರದ ನುಣುಚಿ ಕೊಳ್ಳುತ್ತಿದ್ದಾರೆ. ಇದರೀಮದ ಸಿ.ಎಸ್.ಆರ್ ಅನುದಾನವು ನಿರೀಕ್ಷಿತ ಮಟ್ಟದಲ್ಲಿ ಕ್ರೋಡೀಕರಣ ಆಗದೆ ಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿ ಕೊಳ್ಳಲು ಸಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಮ್ಮ ಅಸಹಾಕತೆಯನ್ನು ಜಿಲ್ಲಾ ಪಂಚಾಯತ್ ದಿಶಾ ಸಭೆಯಲ್ಲಿ ಅವಲತ್ತು ಕೊಂಡ ಪ್ರಕರಣ ಜನಪ್ರತಿನಿಧಿಗಳಿಗೆ ಮುಜುಗರ ಉಂಟು ಮಾಡುವಂತಿತ್ತು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಕೈಗಾರಿಕಾ ಉದ್ಯಮಿಗಳಿಗೆ ಜಾಗ ಕೊಟ್ಟಿರುವುದು ನಮ್ಮ ರೈತರು ಕೈಗಾರಿಕೆಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿ ಕೊಟ್ಟಿದೆ. ಅದರೆ ಜಿಲ್ಲಾಧಿಕಾರಿಗಳೇ ಸಭೆಗೆ ಕರೆದರೆ ಕೈಗಾರಿಕಾ ಪ್ರತಿನಿಧಿಗಳು ಬಾರದೆ ತಿರಸ್ಕರಿಸುತ್ತಿದ್ದಾರೆ ಎಂದರೆ ಹೇಗೆ ? ಎಂದು ಪ್ರಶ್ನಿಸಿ ಕೈಗಾರಿಕೆಗಳಿಗೆ ಅಗತ್ಯವಾದ ಎಲ್ಲಾ ಮೂಲಸೌಲಭ್ಯಗಳು ಕಲ್ಪಿಸಿ, ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸ ಬೇಕು, ಅವರಿಗೆ ರಕ್ಷಣೆ ಕೊಡಿಸ ಬೇಕು, ಅದರೆ ಜಿಲ್ಲಾ ಅಭಿವೃದ್ದಿಗೆ ಸಂಬಂಧ ಪಟ್ಟ ಸಭೆಗಳಿಗೆ ಬಾರದೆ ನಿರ್ಲಕ್ಷಿಸುವುದು ಎಷ್ಟು ಮಾತ್ರ ಸಮಂಜಸವಾಗಿದೆ ಎಂದು ಕಿಡಿ ಕಾರಿದರು,
ಲೋಕಸಭಾ ಸದಸ್ಯರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಹಿಯನ್ನು ಒಳಗೊಂಡ ಸಭೆಯ ನೋಟಿಸ್ ಜಾರಿ ಮಾಡಿ ಅದಕ್ಕೂ ಬಾರದಿದ್ದಲ್ಲಿ ಜಿಲ್ಲಾ ಅಭಿವೃದ್ದಿಗಳಿಗೆ ಅಸಹಕಾರ ತೋರುತ್ತಿದ್ದಾರೆಂದು ಪರಿಗಣಿಸಿ ಇವರ ವಿರುದ್ದ ರಾಜ್ಯ ಮತ್ತು ಕೇಂದ್ರ ಕೈಗಾರಿಕಾಭಿವೃದ್ದಿ ಸಚಿವರಿಗೆ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ತಿಳಿಸಿದರು,
ಇದಕ್ಕೆ ಧ್ವನಿಗೊಡಿಸಿದ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ ಜಿಲ್ಲಾಡಳಿತದಿಂದ ಕೈಗಾರಿಕೆಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಪಡೆದು ಸ್ಥಳಿಯ ಸಮಸ್ಯೆಗಳಿಗೆ ಸ್ಪಂದಿಸಲು ಸಿ.ಎಸ್.ಆರ್. ಅನುದಾನಗಳನ್ನು ಬಿಡುಗಡೆ ಮಾಡದಿರುವುದು ಎಷ್ಟು ಮಾತ್ರ ಸರಿ ಇದೆ ? ಎಂದು ಪ್ರಶ್ನಿಸಿದರು,
ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಅಧಿಕಾರಿಗಳು ಸಹಕಾರ ನೀಡಿದರೆ ಸರಿ ಇಲ್ಲವಾದರೆ ಮುಂದಿನ ಸಭೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು ಒಂದು ತೀರ್ಮಾನ ಮಾಡೋಣಾ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದರು.
ನಾವೆಲ್ಲಾ ಬೇರೆ ಬೇರೆ ಪಕ್ಷದವರಾಗಿರ ಬಹುದು ಎಂದು ಆಟ ಆಡಲು ಬರಬೇಡಿ, ಜಿಲ್ಲೆಯ ಅಭಿವೃದ್ದಿ ವಿಚಾರ ಬಂದಾಗ ನಾವೇಲ್ಲಾ ಒಂದೇ, ಜನಪರವಾದ ಕೆಲಸಗಳಿಗೆ ಯಾವೂದೇ ಪಕ್ಷದ ಪ್ರಶ್ನೆ ಬರಲ್ಲ, ನಮ್ಮದೆಲ್ಲಾ ಅಭಿವೃದ್ದಿ ಪಕ್ಷ ಒಂದೇ ಎಂಬುದನ್ನು ಕೈಗಾರಿಕಾ ಉದ್ಯಮಿಗಳ ಅರಿವುಂಟು ಮಾಡ ಬೇಕು ಎಂದು ಖಡಕ್ ಅಗಿ ತಿಳಿಸಿದರು,