ವಾಣಿಜ್ಯ ಮಳಿಗೆಗಳನ್ನು ತೆರೆಸಲು ಮೂರು ಬಾರಿ ಸಭೆ ತಾಂತ್ರಿಕ ಕಾರಣಗಳಿಂದ ಅದು ಮುಂದುಡಿದ್ದೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಸೆ.11:- ಕಳೆದ 6 ತಿಂಗಳಿನಿಂದ ಬಾಗಿಲು ಮುಚ್ಚಿರುವ ಪುರಸಭೆಯ ವಾಣಿಜ್ಯ ಮಳಿಗೆಗಳನ್ನು ತೆರೆಸಲು ಮೂರು ಬಾರಿ ಸಭೆ ನಿಗದಿಯಾಗಿತ್ತು ಆದರೆ ತಾಂತ್ರಿಕ ಕಾರಣಗಳಿಂದ ಅದು ಮುಂದಕ್ಕೆ ಹೋಗಿದ್ದು ಶೀಘ್ರದಲ್ಲಿಯೇ ಮತ್ತೆ ಸಭೆ ನಡೆಸಿ ಈ ವಿಚಾರದಲ್ಲಿ ಗಂಭೀರ ಗಮನ ಹರಿಸುವುದಾಗಿ ಶಾಸಕ ಡಿ. ರವಿಶಂಕರ್ ತಿಳಿಸಿದರು.
ಅರ್ಕೆಶ್ವರ ಸ್ವಾಮಿ ದೇವಾಲ ಯದ ಸಂರಕ್ಷಣಾ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ಈ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ನೀಡಿರುವ ಸಲಹೆಯನ್ನು ಸ್ವೀಕರಿಸು ವುದಾಗಿ ಹೇಳಿದರು.
ಶೀಘ್ರದಲ್ಲಿಯೇ ಪುರಸಭೆ ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳ ಸಭೆ ನಡೆಸುವುದಾಗಿ ಮಾಹಿತಿ ನೀಡಿದ ಶಾಸಕರು ಈ ಸಭೆಗೆ ಹೆಚ್.ವಿಶ್ವನಾಥ್ ಸೇರಿದಂತೆ ಇತರರನ್ನು ಆಹ್ವಾನಿಸಿ ಅವರ ಮಾರ್ಗದರ್ಶನ ಪಡೆಯುವುದಾಗಿ ಪ್ರಕಟಿಸಿದ ಅವರು ಮಳಿಗೆಗಳ ಬಾಡಿಗೆದಾರರ ಹಿತ ಕಾಯಲು ಬದ್ದನಾಗಿರುವುದಾಗಿ ನುಡಿದರು.
ವಾಣಿಜ್ಯ ಮಳಿಗೆಗಳನ್ನು ಹರಾಜಿನಲ್ಲಿ ಪಡೆದಿರುವ ಕೆಲವು ಬಾಡಿಗೆದಾರರು ನ್ಯಾಯಾಲ ಯದ ಮೊರೆ ಹೋಗಿದ್ದು ಇದು ಸಹ ನಮಗೆ ತೊಂದರೆ ಯಾಗಿದ್ದು ಅಂತಿಮವಾಗಿ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ನ್ಯಾಯಾಲಯಕ್ಕೆ ಹೋಗಿರುವವರ ಜೊತೆ ಮಾತುಕತೆ ನಡೆಸುವುದಾಗಿ ಎಚ್. ವಿಶ್ವನಾಥ್ ಅವರು ಹೇಳಿದ್ದು ಇದನ್ನು ಸ್ವಾಗತಿಸುವುದಾಗಿ ತಿಳಿಸಿದ ಅವರು ಪುರಸಭೆ ಗರುಡಗಂಬದ ವೃತ್ತದಲ್ಲಿ ನಾಲ್ಕು ಮಳಿಗೆಗಳ ಮುಂಭಾಗ ಕುಸಿದು ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಆದೇಶ ನೀಡಿದ್ದೇನೆ ಎಂದರು.