ಆತ್ಮಹತ್ಯೆಗೆ ಪ್ರೇರಣೆ-ಆರೋಪಿಗಳ ಬಂಧನಕ್ಕೆ ಆಗ್ರಹ
ಕೋಲಾರ,ಸೆ,೧೧-ವರದಕ್ಷಿಣೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಕುಟುಂಬದವರನ್ನು ಹಾಗೂ ಸಹಚಾರರ ವಿರುದ್ದ ದೂರು ನೀಡಿ ೧೫ ದಿನ ಕಳೆದರೂ ಸಹ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆಯೂ ಮೀನಾ ಮೇಷ ಎಣಿಸುತ್ತಿದೆ ಎಂದು ಅರೋಪಿಸಿ ಮಹಿಳಾ ಸಂಘಟನೆಯ ವಿ.ಗೀತಾ ಆರೋಪಿಸಿದರು.
ಸ್ಥಳೀಯ ಗಾಂಧಿನಗರದಲ್ಲಿನ ಡಿ.ವೈ.ಎಸ್.ಪಿ ಕಚೇರಿಯ ಮುಂದೆ ಮಾನಸ ಸಾವಿನ ಅರೋಪಿಗಳ ಬಂಧನಕ್ಕೆ ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳು ಆಯೋಜಿಸಿದ್ದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡಿ ತುರಾಂಡಹಳ್ಳಿಯ ಉಲ್ಲಾಸ ಗೌಡ ಹಾಗೂ ಸಹಕಾರ ನಗರದ ಮಾನಸ ಎಂಬುವರು ಶಾಸ್ತ್ರೋಸತ್ರವಾಗಿ ವರದಕ್ಷಿಣೆಯೊಂದಿಗೆ ವರೋಪಚಾರಗಳೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು ಎಂದರು.
ಅದರೆ ಕೆಲ ತಿಂಗಳ ನಂತರ ವರದಕ್ಷಿಣೆಗಾಗಿ ಮಾನಸಳಿಗೆ ಉಲ್ಲಾಸಗೌಡ ಹಾಗೂ ಅವರ ಕುಟುಂಬದವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಈ ಸಂಬಂಧವಾಗಿ ಹಲವು ಗಣ್ಯರ ಸಮ್ಮುಖದಲ್ಲಿ ನಡೆದ ರಾಜಿ ಸಂಧಾನಗಳಲ್ಲಿ ಉಲ್ಲಾಸಗೌಡ ಕಡೆಯವರು ಪ್ರಭಾವಿತರಾಗಿದ್ದ ಹಿನ್ನಲೆಯಲ್ಲಿ ಮಾನಸಳಿಗೆ ರಾಜಿ ಸಂಧಾನದಿಂದ ನ್ಯಾಯ ಸಿಗಲ್ಲಿಲ್ಲ ಎಂದು ತಿಳಿಸಿದರು
ಅಕೆ ವ್ಯಾಸಂಗ ಮಾಡಿದ್ದ ಇಂಜನಿಯರಿಂಗ್ ಅಂಕಪಟ್ಟಿಗಳು ಮತ್ತು ಪದವಿಯ ಪ್ರಮಾಣ ಪತ್ರಗಳು ಹಾಗೂ ಅಕೆಯ ಚಿನ್ನಾದಭರಣಗಳು,ಸೀರೆ ಮತ್ತಿತರೆ ವಸ್ತ್ರಗಳನ್ನು ವಾಪಸ್ ನೀಡಿದರೆ ತಾನು ಯಾವೂದಾದರೂ ಕೆಲಸಕ್ಕೆ ಸೇರಿ ಕೊಂಡು ಜೀವನ ಮಾಡಿ ಕೊಳ್ಳುತ್ತೇನೆ ಎಂದು ಅಂಗಲಾಚಿದರೂ ಆತ್ತೆಯ ಮನೆಯವರು ನೀಡಲಿಲ್ಲ ಎಂದು ಹೇಳಿದರು.
ಕೊನೆಗೆ ವಿಚ್ಚೇಧನ ನೀಡಿದರೆ ನಾನು ಹೇಗೂ ಬದುಕಿ ಕೊಳ್ಳುತ್ತೇನೆ ಎಂದು ಹೇಳಿದರೂ ಅದು ಸಹ ನೀಡದೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಇದನ್ನು ಸಹಿಸಿ ಕೊಳ್ಳಲಾಗದೆ ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಸಹ ಬರೆದಿಟ್ಟು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಆರೋಪಿಸಿದರು.
ಸಿ.ಪಿ.ಐ.(ಎಂ) ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ದ.ಸಂ.ಸ ಮುಖಂಡ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ ಮಾತನಾಡಿ ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸುವವರೆಗೂ ನಾವು ಅನಿರ್ಧಿಷ್ಟವಧಿ ಪ್ರತಿಭಟನಾ ಧರಣಿಯನ್ನು ಮುಂದುವರೆಸುವುದಾಗಿ ತಿಳಿಸಿದರು.
ಸ್ಥಳಕ್ಕೆ ಅಗಮಿಸಿ ಡಿ.ವೈ.ಎಸ್.ಪಿ. ಹೆಚ್..ಎಂ.ನಾಗ್ತೆ ಅವರು ಮಾತನಾಡಿ ನಾಳೆ ಮಂಗಳವಾರದ ಸಂಜೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ಕಾಂತರಾಜ್, ಅಣ್ಣಯ್ಯ, ಅರುಣ್ ಕುಮಾರ್ ಪಾಟೀಲ್. ಆನಂದ್ ಹಾಗೂ ಸಿಬ್ಬಂದಿಗಳು ಹಾಜರಿದ್ದು ಪ್ರತಿಭಟನಕಾರರನ್ನು ಸಮಾಧಾನ ಪಡೆಸಿ ಪ್ರತಿಭಟನೆಯನ್ನು ತೆರುವುಗೊಳಿಸುವಲ್ಲಿ ಯಶಸ್ಸಿಯಾದರು ಪ್ರತಿಭಟನಾಕಾರರು ನಾಳೆ ರಾತ್ರಿಯೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಬುಧವಾರ ಬೆಳಿಗ್ಗೆ ಮತ್ತೆ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆ, ಮಹಿಳಾ ವಿಮೋಚನ ಸಂಘಟನೆಯ ಮುಖಂಡರಾದ ಮಮತಾರೆಡ್ಡಿ. ಶಾಂತಮ್ಮ,ರೈತ ಸಂಘದ ಮುಖಂಡ ಅಬ್ಬಣಿ ಶಿವಪ್ಪ ಮುಂತಾದವರು ಭಾಗವಹಿಸಿದ್ದರು.