ಹಿಂದೂ ಮಹಾ ಗಣಪತಿ ೧೧ನೇ ವರ್ಷಾಚರಣೆ :ರಕ್ತದಾನ ಶಿಬಿರ ಹಾಗೂ ಹನುಮಾನ ಚಾಲಿಸಾ ಪಠಣ
ಸಂಜೆವಾಣಿ ವಾರ್ತೆ
ಔರಾದ :ಸೆ.೧೧: ಪಟ್ಟಣದ ಮಾತಾ ಮಾಣಿಕೇಶ್ವರಿ ಬಡಾವಣೆಯ ಹಿಂದೂ ಮಹಾ ಗಣಪತಿ ಸಮಿತಿ ೧೧ನೇ ವರ್ಷಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಹನುಮಾನ ಚಾಲಿಸಾ ಪಠಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಂತೋಷ ದ್ಯಾಡೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಸತತ ಹನ್ನೊಂದು ವರ್ಷಗಳಿಂದ ನಮ್ಮ ಬಡಾವಣೆಯಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದು ಈ ವರ್ಷ ವಿಶೇಷವಾಗಿ ಎಲ್ಲ ಯುವಕರು ಸೇರಿ ರಕ್ತದಾನ ಮಾಡಲು ನಿರ್ಣಯಿಸಿದ್ದು ಇದೆ ಶುಕ್ರವಾರ ೧೩/೦೯/೨೦೨೪ ರಂದು ಬೆಳಿಗ್ಗೆ ೧೧ ಗಂಟೆಗೆ ರಕ್ತದಾನ ಶಿಬಿರ ಸಾಯಂಕಾಲ ೦೭ಗಂಟೆಗೆ ಸಾಮೂಹಿಕ ಪೂಜೆ ನಡೆಯಲಿದೆ ಹಾಗೂ ಶನಿವಾರ ೧೪/೦೯/೨೦೨೪ ರಂದು ಸಾಯಂಕಾಲ ೦೭ ಗಂಟೆಗೆ ಹನುಮಾನ ಚಾಲೀಸಾ ಪಠಣ, ಕಾರ್ಯಕ್ರಮ ಆಯೋಜಿಸಲಾಗಿದೆ. ರವಿವಾರ ಗಣೇಶ ವಿಸರ್ಜನೆ ಮಹಾ ಪ್ರಸಾದ ವ್ಯವಸ್ಥೆ ಇದೆ ಆದ್ದರಿಂದ ಸರ್ವರೂ ರಕ್ತದಾನ ಶಿಬಿರದಲ್ಲಿ ಹಾಗೂ ಹನುಮಾನ ಚಾಲೀಸಾ ಪಠಣದಲ್ಲಿ ಪಾಲ್ಗೊಂಡು ವಿಘ್ನೇಶ್ವರನ ಕೃಪಾಶಿರ್ವಾದ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.