ಅರ್ಹರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಮನೆ ಬಾಗಿಲಿಗೇ ಬರುತ್ತವೆ: ಭೃಂಗಿಮಠ
ಸAಜೆವಾಣಿ ವಾರ್ತೆ,
ವಿಜಯಪುರ,ಸೆ.೧೧: ಸಮಾಜ ಸೇವೆ ಮಾಡುವಾಗ ಯಾವುದೇ ಫಲಾಪೇಕ್ಷೆ ಇಲ್ಲದೇ ಪ್ರಾಮಾಣಿಕವಾಗಿ ಸೇವೆಗೈದರೆ ಅಂತಹವರ ಮನೆಯ ಬಾಗಿಲಿಗೆ ತಡವಾದರೂ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎಂದು ನ್ಯಾಯವಾದಿ, ಹೋರಾಟಗಾರ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.
ವಿಜಯಪುರದ ವೆಂಕಟೇಶ ನಗರದಲ್ಲಿ ಅಕ್ಕನ ಬಳಗದ ಅಭಿಮಾನಿಗಳಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ಬೀಕರಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಕಹಿ ಸಿಹಿ ಅನುಭವ ಸಹಜ, ಕೆಲವೊಮ್ಮೆ ನಮಗೆ ಬೈದವರು ನಾವು ಸತ್ಯವಾದಿ ಪ್ರಾಮಾಣಿಕರೆಂದು ಅವರಿಗೆ ಗೊತ್ತಾದಾಗ ಅವರೇ ನಮ್ಮ ಹೆಗಲಿಗೆ ನಿಂತು ಉತ್ತಮ ಸೇವೆಗೆ ಸಹಕರಿಸುತ್ತಾರೆ. ಆದರೆ ಸಮಾಜ ಸೇವೆಯಲ್ಲಿ ತಾಳ್ಮೆ ಬಹು ಅಗತ್ಯ ಎಂದರು
ದೇಶದ ವಿವಿಧ ಭಾಗದಲ್ಲಿ ಹಲವಾರು ಪ್ರಶಸ್ತಿಗಳು, ಸನ್ಮಾನಗಳು ನಮಗೆ ಬರುವುದಕ್ಕೆ ಸ್ನೇಹಿತರು ಸಾಮಾಜಿಕ ಸಾಂಸ್ಕೃತಿಕ ಸೇವೆಗೆ ನೀಡಿದ ಪ್ರೋತ್ಸಾಹವೇ ಕಾರಣ. ಅಂತರಾಷ್ಟ್ರೀಯ ಪ್ರಶಸ್ತಿ ದೊರಕಿರುವುದು ಮತ್ತಷ್ಟು ನಮಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಸಾಹಿತಿ ಈರಮ್ಮ ಬೋನಾಳ ಅವರು ಮಾತನಾಡಿ, ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಭೃಂಗಿಮಠರ ಸೇವೆ ಶ್ಲಾಘನೀಯವಾಗಿದೆ, ಕಾನೂನು, ಸಂಸ್ಕಾರ, ಕಾವ್ಯ, ರಾಗ. ಭಾವ ಮುಂತಾದ ಬಹುಮುಖ ಪ್ರತಿಭೆಯ ಹೆಜ್ಜೆಗಳು ಭೃಂಗಿಮಠ ಅವರದ್ದು ಆಗಿದೆ. ಸದಾ ಎಲ್ಲರೊಳಗೊಂದಾಗಿ ಸರ್ವರೋಳು ಸಮನ್ವಯ ಸಾಧಿಸಿದ ವ್ಯಕ್ತಿತ್ವ ಭೃಂಗಿಮಠರದ್ದು ಎಂದು ಹೇಳಿದರು.
ಹಿರಿಯ ಮುಂಖAಡ ಚನ್ನಬಸಯ್ಯ ಹಿರೇಮಠ ಅವರು ಮಾತನಾಡಿ, ಸಮಾಜದಲ್ಲಿ ನೊಂದ ಶೋಷಿತರ ಪರ ಧ್ವನಿ ಎತ್ತಿ ನ್ಯಾಯ ಕೊಡಿಸುವ ಮಲ್ಲಿಕಾರ್ಜುನ ಭೃಂಗಿಮಠರು ಅನ್ಯಾಯದ ಜೊತೆ ಎಂದೂ ಸಂಧಾನ ಮಾಡಿಕೊಂಡವರಲ್ಲ, ಇದ್ದದ್ದು ಇದ್ದಂತೆ ನಯ ವಿನಯತೆಯಲ್ಲೇ ಹೇಳಿ ಸಮಾಜದ ಓರೆ ಕೋರೆ ತಿದ್ದುವ ಪ್ರಭಾವಿ ವ್ಯಕ್ತಿತ್ವ ಭೃಂಗಿಮಠರದ್ದಾಗಿದೆ ಎಂದರು.
ಪೂಜಾ ಹಿರೇಮಠ ಅವರು ಮಾತನಾಡಿ, ಸತ್ಯ, ನ್ಯಾಯಕ್ಕೆ ಸದಾ ಜಯ ಇರುತ್ತದೆ. ಸಮಾಜದಲ್ಲಿ ಮಹಿಳೆಯರ ಪರ ಹೋರಾಡಿದ ಭೃಂಗಿಮಠರ ಹೋರಾಟ ನಿಜವಾಗಿಯೂ ಇತರರಿಗೆ ಆದರ್ಶವಾಗಿದೆ ಎಂದರು.
ಕುಮಾರಿ ಬೋನಾಳ ಸ್ವಾಗತಿಸಿದರು. ಕುಮಾರ ಸ್ವಾಮಿ ವಂದಿಸಿದರು.