ಕಣಕಾಲ ಗ್ರಾಮದ ಅಡ್ಡಪಲ್ಲಕ್ಕಿ ಮಹೋತ್ಸವ
ಬಸವನಬಾಗೇವಾಡಿ:ಸೆ.೧೧:ಅಣ್ಣ ಬಸವಣ್ಣನವರು ಜಾತಿಯ ವಿಷಬೀಜವನ್ನು ಕಿತ್ತೆಸೆಯಲು ಹೋರಾಟ ಮಾಡಿದರು.ಅವರ ತತ್ವಗಳನ್ನು ಬೋದನೆ ಹಾಗೂ ಪೋಟೋ ಪೂಜೆ ಮಾಡುವಂತಹ ಭಕ್ತಿಯ ಜೊತೆಗೆ ಅವರ ಅವರ ತತ್ವ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದಾಗ ಮಾತ್ರ ಬಸವಣ್ಣನವರ ನಿಜವಾದ ಭಕ್ತನಾಗಲು ಸಾಧ್ಯ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯಾ ಶಿವಾಚಾರ್ಯರು ಹೇಳಿದರು.
ತಾಲೂಕಿನ ಕಣಕಾಲ ಗ್ರಾಮದ ಶ್ರೀ ಮಡಿವಾಳೇಶ್ವರಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಬಸವ ಪುರಾಣ ಮುಕ್ತಾಯ,ಶ್ರೀಶೈಲ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಭೆ ಸಮಾರಂಭದ ದಿವ್ಯಸಾನಿದ್ಯತೆ ವಹಿಸಿ ಮಾತನಾಡಿದರು.
ಅಣ್ಣ ಬಸವಣ್ಣನವರು ೧೨ ನೇ ಶತಮಾತನದಲ್ಲಿ ಎಲ್ಲ ಶರಣರೊಂದಿಗೆ ವಚನ ಸಾಹಿತ್ಯ ಮೂಲಕ ಸಾಮಾಜಿಕ ಕ್ರಾಂತಿಗೈದು ಮೇಲು ಕೀಳು ಎಂಬ ಜಾತಿಯನ್ನು ಹೊಗಲಾಡಿಸಲು ಪ್ರಯತ್ನಿಸಿದರು.ಅವರಂತೆ ನಾವು ಕೂಡಾ ಜಾತಿಯತೆ ಎಂಬ ವಿಷ ಬೀಜವನ್ನು ಹೊಗಲಾಡಿಸಲು ಪ್ರಯತ್ನಿಸಿ ಎಲ್ಲರು ಒಂದೆ ಎಂಬ ಮನೋಭಾವನೆಯನ್ನು ಹೊಂದಿದಾಗ ಮಾತ್ರ ಬಸವಣ್ಣನವರ ನಿಜವಾದ ಆದರ್ಶವನ್ನು ಅಳವಡಿಕೆ ಮಾಡಿಕೊಂಡತೆ ವಿನಹ: ಬರಿ ಭಾಷಣ ಮಾಡಿ ಜಾತಿಯ ಎಂಬ ವಿಷಬೀಜ ಬಿತ್ತುವಂತಹ ಕಾರ್ಯವಾದರೆ ಅದು ಬಸವಣ್ಣನವರ ತತ್ವಕ್ಕೆ ವಿರುದ್ದವಾಗಿ ನಡೆದಂತಲ್ಲವೆ?ಎAದು ಪ್ರಶ್ನಿಸಿದರು.
ಗುರು-ವಿರಕ್ತ ಎಂಬ ಪರಂಪರೆ ಇವೆ ಅವೆರಡರ ಉದ್ದೇಶವು ಒಂದೆ ಸಮಾಜ ಉದ್ದಾರ ಮಾಡುವಂತಹ ಕೆಲಸವನ್ನೆ ಗುರು-ವಿರಕ್ತ ಪೀಠದ ಮಠಾಧೀಶರು ಮಾಡುತ್ತಿದ್ದಾರೆ.ಆದರೆ ಕೆಲವರು ಈ ವಿಷಯದಲ್ಲಿ ಗೊಂದಲ ಸೃಷ್ಠಿ ಮಾಡುತ್ತಿರುವುದಕ್ಕೆ ಸ್ಪಷ್ಠನೆ ನೀಡುತ್ತಿದ್ದೇವೆ ಎಂದರು.
ಬಸವಪುರಾಣ ಭೀಮಕವಿ ಅವರ ರಚಿತವಾದಂತಹದ್ದು ಇದರಲ್ಲಿ ತುಂಬಾ ಅರ್ಥ ಗರ್ಭಿತವಾದ ವಿಷಯ ಅಡಗಿದೆ ಇಂಥಹ ಪುರಾಣಗಳನ್ನು ಆಲಿಸಿದ ತಾವೆಲ್ಲರು ಬದುಕಿನಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ನಡೆದಾಗ ಮಾತ್ರ ನೀವು ಆಲಿಸಿದ ಬಸವಪುರಾಣ ಆಲಿಸಿದಕ್ಕೂ ಸ್ವಾರ್ಥಕವಾಗುತ್ತದೆ ಎಂದರು.
ಮಠಗಳಿಗೂ ರಾಜಾಶ್ರಯ ಬೇಕು ಹಾಗೆಯೇ ಶಾಸಕರುಗಳಿಗೂ ಮಠಗಳ ಆಶ್ರಯವು ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿದೆ.ಇವರಿಬ್ಬರು ಸಮನ್ವಯತೆ ಇದ್ದಾಗ ಸಮಾಜದ ಸುಧಾರಣೆಯಾಗಲು ಸಾರ್ಧಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ,ಇಂದು ಬಹುತೇಕ ಜನರು ಶ್ರೀಮಂತರಾಗಿದ್ದಾರೆ.ಆದರೆ ಅವರಿಗೆ ನೆಮ್ಮದಿ ಬದುಕಿಗಾಗಿ ಮಠಗಳ ಆಶ್ರಯ ಅವಶ್ಯಕವಾಗಿದೆ.ಭಾರತದ ಸಂಸ್ಕಾರವನ್ನು ಪಂಚಪೀಠಗಳ ಕಾಪಾಡಿಕೊಂಡು ಬಂದಿವೆ ಎಂದರು.
ಗುರುವಿನ ಶಕ್ತೊಯ ಬಗ್ಗೆ ಅರಿತುಕೊಂಡು ನಡೆದಾಗ ಗೊತ್ತಾಗುತ್ತದೆ ಅವರ ಬಳಿ ಎಂಥಹ ಶಕ್ತಿಯಿದೆ ಎನ್ನುವುದು.ಪ್ರತಿಯೊಬ್ಬರು ನೆಮ್ಮದಿಯ ಬದಕು ನಡೆಸಬೇಕಾದರೆ ಪುರಾಣ,ಪ್ರವಚನಗಳನ್ನು ಆಲಿಸಿಕೊಂಡು ಅದರಂತೆ ಬದಕು ನಡೆಸಿದಾಗ ನೆಮ್ಮದಿ ಬದಕು ದೊರಕಲು ಸಾಧ್ಯವಾಗುತ್ತದೆ ಎಂದರು.
ಬಸವನಬಾಗೇವಾಡಿಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಜಿ,ಕರಿಭಂಟನಾಳದ ಶ್ರೀ ಶಿವಕುಮಾರ ಸ್ವಾಮಿಜಿ,ದೇವರಹಿಪ್ಪರಗಿಯ ವೀರಗಂಗಾಧರ ಶಿವಾಚಾರ್ಯ ಸ್ವಾಮಿಜಿ,ಢವಳಗಿ,ಕಣಕಾಲದ ಶ್ರೀ ಘನಮಠೇಶ್ವರ ಸ್ವಾಮಿಜಿಗಳು ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷೆ ಶರಣಮ್ಮ ಕುಂಬಾರ,ಉಪಾಧ್ಯಕ್ಷ ಸಂಗಪ್ಪ ಸಜ್ಜನ,ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ,ಜಿ ಕೆ ದಿನ್ನಿ,ಬಸಲಿಂಗಪ್ಪ ಕುಂಬಾರ,ಶಿವಾನAದ ಹುಲ್ಲೂರ,ಕಾಶಿನಾಥ ಸಜ್ಜನ,ರಾಜಶೇಖರ ಹುಲ್ಲೂರ,ಮಂತಯ್ಯ ಮಠಪತಿ ಸೇರಿದಂತೆ ಮುಂತಾದವರು ಇದ್ದರು.
ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೨೭ ಮಠಗಳಿವೆ ಆ ಮಠಗಳು ಮಠಾಧೀಶರು ಯಾರಿಗೆ ಒಲವು ತೊರಿ ಆಶಿರ್ವಾದ ಮಾಡುತಾರೋ ಅವರು ಎಂಎಲ್‌ಎ ಆಗುತ್ತಾರೆ ಎಂಬುದಕ್ಕೆ ಈ ಬಾರಿಯ ಶಾಸಕ ರಾಜುಗೌಡ ಪಾಟೀಲರ ಗೆಲುವೆ ಸಾಕ್ಷಿಯಾಗಿದೆ.
ಶ್ರೀ ಘನಮಠೇಶ್ವರ ಸ್ವಾಮಿಜಿಗಳು,ಕಣಕಾಲ,ಢವಳಗಿ.