ಮುಂದಿನ ವರ್ಷದೊಳಗೆ ಗಾಂಧಿ ಭವನ ನಿರ್ಮಾಣ- ಬೈರತಿ ಸುರೇಶ್ ಭರವಸೆ
ಕೋಲಾರ,ಅ,೪-ಜಿಲ್ಲಾ ಕೇಂದ್ರದಲ್ಲಿ ಗಾಂದಿ ಭವನವನ್ನು ಮುಂದಿನ ವರ್ಷದೊಳಗೆ ನನ್ನ ವೆಚ್ಚದಲ್ಲಿಯೇ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಸರ್ಕಾರದ ಉಚಿತವಾದ ಜಾಗವನ್ನು ಗುರುತಿಸಿದರೆ ಕಟ್ಟಡ ನಿರ್ಮಿಸಿ ಕೊಡಲು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು.
ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಪ್ರಸಾರ ಮತ್ತು ಸಾರ್ವಜನಿPಚಿ ಸಂರ್ಪಕ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧಿಜೀ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಟದಲ್ಲಿ ಭಾರತವನ್ನು ಬಿಟ್ಟು ತೊಲಗಿ ಎಂದು ಘೋಷಣೆ ಮೂಲಕ ಹೋರಾಟ ಮಾಡಿ ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಜಾಸತ್ಮಾಕ ದೇಶವನ್ನಾಗಿ ರೂಪಿಸಿ ಕೊಟ್ಟಾಂತ ಮಹಾತ್ಮ ಗಾಂಧಿಜೀ ಲಾಲಬಹುದ್ದೋರ್ ಶಾಸ್ತ್ರಿ ಜವಹಾರ್‌ಲಾಲ್ ನೆಹರು, ಡಾ.ಬಿ.ಆರ್. ಅಂಬೇಡ್ಕರ್, ಮೌಲನಾ ಅಜಾದ್, ಮುಂತಾದವರುಗಳು ಇವರುಗಳ ತ್ಯಾಗ ಬಲಿದಾನದ ಪ್ರಮಾಣಿಕ ಪ್ರಯತ್ನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದರು.
ಮಹಾತ್ಮಗಾಂಧಿಜೀಯವರು ಇಲ್ಲದಿದ್ದರೆ ಸ್ವಾತಂತ್ರ್ಯದ ಬಗ್ಗೆ ಉಹಿಸಲು ಅಸಾಧ್ಯ. ಶಾಂತಿ ಅಹಿಂಸಾತ್ಮಕತೆ ಮೂಲಕ ಯಾವೂದೇ ರಕ್ತಪಾತವಿಲ್ಲದೆ ಸತ್ಯಾಗ್ರಹ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟ ತಂದು ಕೊಟ್ಟರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತ್ಯಾತೀತೆ, ಸಮಾನತೆ. ಏಕತೆ. ಐಕ್ಯತೆಗಳ ಮೂಲಕ ಸಂವಿಧಾನ ರಚಿಸಿ ಕೊಟ್ಟು ಪ್ರಜಾತಂತ್ರ ಮೌಲ್ಯವನ್ನು ಎತ್ತಿಹಿಡಿದರು, ಇದನ್ನು ದುರ್‍ಬಳಕೆ ಮಾಡಬಾರದು ಸಾರ್ವಜನೋಸುಖಿಃನೋ ಭವಃತೋ ಎಂಬಂತೆ ನಾವೆಲ್ಲಾ ಭಾರತೀಯರು ಎಂಬ ಭಾವನೆಯನ್ನು ಜೀವನದಲ್ಲಿ ಆಳವಡಿಸಿ ಕೊಳ್ಳುವಂತಾಗ ಬೇಕೆಂದು ಕರೆ ನೀಡಿದರು,
ಹಿರಿಯರ ಮಾರ್ಗದಲ್ಲಿ ಸಂವಿಧಾನವನ್ನು ಜೀವನ ಅಳವಡಿಸಿ ಕೊಂಡು ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯವಂತಾಗ ಬೇಕೆಂದ ಅವರು ಗುರುದೇವುಭವಃ, ಮಾತೃದೇವೂ ಭವಃ, ಪಿತೃದೇವೋ ಭವಃ ಎಂಬುವುದು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕು. ಬಡವರಿಗೆ ಶಿಕ್ಷಣ ನೀಡಿ ಐ.ಪಿ.ಎಸ್.ಐ.ಎ.ಎಸ್. ಡಾಕ್ಟರ್, ಇಂಜನಿಯರ್‌ಗಳಾಗಿ ಸೇವೆ ಸಲ್ಲಿಸುವಂತಾಗ ಬೇಕು ಇದರ ಜೊತೆಗೆ ರಾಜಕೀಯ ವ್ಯಕ್ತಿಗಳಾಗಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸುವಂತಾಗ ಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು,
ಗಾಂಧಿಜಯಂತಿ ಭಾರತದ ಮಾತ್ರವಲ್ಲ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಗಾಂಧಿಜೀಯವರ ಆದರ್ಶಗಳನ್ನು ನಮ್ಮ ಜೀವನಕ್ಕೆ ಸ್ಪೊರ್ತಿಯಾಗಿ ಅಳವಡಿಸಿ ಕೊಂಡು ಸಾರ್ಥಕ ಪಡೆಸಿ ಕೊಳ್ಳುವಂತಾಗ ಬೇಕು, ಸ್ವಾತಂತ್ರ್ಯಕ್ಕಾಗಿ ನಮ್ಮ ಜಿಲ್ಲೆಯವರಾದ ಕೆ.ಸಿ.ರೆಡ್ಡಿ, ಎಂ.ವಿ.ಕೃಷ್ಣಪ್ಪ. ಟಿ.ಚೆನ್ನಯ್ಯ, ಲತೀಫ್ ಸಾಬ್ ಸೇರಿದಂತೆ ಅನೇಕ ಮಹನೀಯರು ಹೋರಾಟ ಮಾಡಿದ ಫಲವಾಗಿ ನಾವಿಂದು ಶಾಂತಿ ನೆಮ್ಮದಿಯ ಜೀವನ ಸಾಧ್ಯವಾಗಿದೆ. ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಗಾಂಧಿಜಯಂತಿ ಅಂಗವಾಗಿ ವಾರ್ತಾ ಪ್ರಸಾರ ಇಲಾಖೆವತಿಯಿಂದ ಆಯೋಜಿಸಿದ್ದ ಪ್ರಬಂಧ, ಆಶುಭಾಷಣ ಸ್ವರ್ಧೆಗಳಲ್ಲಿ ವಿಜೇತರಾದ ಗೌರಮ್ಮ. ಸೃಷ್ಠಿ, ಅಮೂಲ್ಯ ವಿಜಯಲಕ್ಷ್ಮೀ, ಮುಂತಾದವರಿಗೆ ನೆನಪಿನ ಕಾಣಿಕೆಯೊಂದಿಗೆ ನಗದು ಬಹುಮಾನವನ್ನು ನೀಡಲಾಯಿತು, ವಾರ್ತ ಪ್ರಸಾರ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯ ಸಹಾಯಕ ನಿರ್ದೇಶಕರಾದ ಚೇತನ್ ಕುಮಾರ್ ಸ್ವಾಗತಿಸಿದರು, ಹರ್ಷದ್ ಪ್ರಾರ್ಥನೆ, ಸುವರ್ಣ ಸೆಂಟ್ರಲ್ ಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆ, ವಾರ್ತಾಧಿಕಾರಿ ಕೌಸಲ್ಯ ವಂದಿಸಿದರು,
ವೇದಿಕೆಯಲ್ಲಿ ಲೋಕಸಭಾ ಸದಸ್ಯ ಎಂ.ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಉಪಾಧ್ಯಕ್ಷೆ ಸಂಗೀತಾ, ಗ್ಯಾರೆಂಟಿ ಅನುಷ್ಠನಾ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೀಸಂದ್ರ ಗೋಪಾಲ್ ಸಂಪನ್ಮೂಲ ವ್ಯಕ್ತಿ ರವೀಂದ್ರ, ಜಿಲ್ಲಾಧಿಕಾರಿ ಅಕ್ರಂಪಾಷ, ಅಪರ ಜಿಲ್ಲಾಧಿಕಾರಿ ಮಂಗಳ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕಿ ವಿಜಯಲಕ್ಷ್ಮೀ, ಬೌದ್ದ ಗುರುಗಳು, ತಹಸೀಲ್ದಾರ್ ಉಪಸ್ಥಿತರಿದ್ದರು,