ಕೃಷಿ, ಶಿಕ್ಷಣ, ನೀರಿನ ಸಂರಕ್ಷಣೆ ಅಭಿಯಾನ
ಕೋಲಾರ,ಅ.೩- ಎಸ್.ಎಂ.ಸೆಹಗಲ್ ಪೌಂಡೇಶನ್ ಕಳೆದ ೩ ವರ್ಷಗಳಿಂದ ಕೋಲಾರ ಜಿಲ್ಲೆಯಾದ್ಯಂತ ಕೃಷಿ, ಶಿಕ್ಷಣ, ನೀರಿನ ಸಂರಕ್ಷಣೆ ಕುರಿತು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.
ಮುಳಬಾಗಿಲು ತಾಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ಉತ್ತಮ ಗ್ರಾಮದ ಉಪಕ್ರಮ ಎಂಬ ಯೋಜನೆಯಡಿಯಲ್ಲಿ ಇಂದು ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತೀ ರವರ ಜನ್ಮ ದಿನದ ಅಂಗವಾಗಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥೆಯಿಂದ ಎಸ್.ಎಂ ಸೆಹಗಲ್ ಪೌಂಡೇಶನ್ ಕಾರ್ಯಚಟುವಟಿಕೆ ಹಾಗೂ ಉತ್ತಮ ಗ್ರಾಮದ ಉಪಕ್ರಮದಡಿಯಲ್ಲಿ ಮುಂದಿನ ದಿನಗಳಲ್ಲಿ ಈಗಾಗಲೇ ಗ್ರಾಮದ ಅಭಿವೃದ್ಧಿಗೆ ರೂಪು ರೇಷೇ ರೂಪಿಸಿದ್ದು ಹಂತ ಹಂತವಾಗಿ ಜಾರಗೊಳಿಸಲಾಗುವುದು ಎಂದರು.
ಗಾಂಧೀ ಜಯಂತಿ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮದ ಮುಖಂಡರ ಹಾಗೂ ಮಹಿಳಾ ಸ್ವಸಹಾಯ ಸಂಘದವರು ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಚತೆ ಕುರಿತು ಅರಿವು ಮೂಡಿಸಲಾಯಿತು.
ಮಕ್ಕಳಿಗೆ ಗಾಂಧೀಜೀಯವರ ಬದುಕು, ಬೋದನೆ, ತತ್ವಾದರ್ಶಗಳು, ಭಾರತೀಯರ ಹೃದಯದಲ್ಲಿ ಎಂದಿಗೂ ಅಜರಾಮರ. ಪ್ರತಿ ವರ್ಷ ಅಕ್ಟೋಬರ್ ೨ ರಂದು ಅವರ ಜನ್ಮ ದಿನದ ಅಂಗವಾಗಿ ಇಡಿ ದೇಶಾದ್ಯಂತ ಗಾಂಧೀಜೀ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಶಶಿಕುಮಾರ್, ಮುಖ್ಯೋಪಾಧ್ಯಾಯ ಗಾಯತ್ರಿ, ಅಂಗನವಾಡಿ ಕಾರ್ಯಕರ್ತೆ, ಶಾಲಾ ಶಿಕ್ಷಕರು, ಗ್ರಾಮ ಭಾರತಿ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ, ಮಹಿಳಾ ಸ್ವಸಹಾಯ ಸಂಘದ ಸದಸ್ಯರಾದ ಭಾಗ್ಯಲಕ್ಷೀ, ನೇತ್ರವಾತಿ ಹಾಗೂ ಆನೇಕ ಗ್ರಾಮಸ್ಥರು ಮತ್ತು ಸೆಹಗಲ್ ಸಿಬ್ಬಂದಿಗಳಾದ ವಿಶ್ವನಾಥ್ ಹಾಗೂ ಹರೀಶ್ ಹಾಜರಿದ್ದರು.