ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ, ಶಾಸ್ತ್ರಿಜಯಂತಿ
ಕೋಲಾರ,ಅ,೪-ಮಹಾತ್ಮ ಗಾಂಧೀಜಿ ಶಾಂತಿ ಮಂತ್ರ ಪಾಲಿಸುವ ಮೂಲಕ ಗಾಂಧೀಜಿ ಆತ್ಮಕ್ಕೆ ಗೌರವ ಸಲ್ಲಿಸೋಣ, ಅವರು ತೋರಿದ ಹಾದಿಯಲ್ಲಿ ಸಾಗೋಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಗಾಂಧೀಜಿ ೧೫೫ ಜನ್ಮದಿನಾಚರಣೆ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಅಹಿಂಸಾತ್ಮಕ ಹೋರಾಟ ಹಾಗೂ ಸತ್ಯಾಗ್ರಹಗಳ ಮೂಲಕ ನಮ್ಮ ದೇಶದ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾನ್ ಚೇತನವನ್ನು ನಾವುಗಳು ಸದಾಕಾಲವೂ ನೆನೆಯುವಂತಾಗಬೇಕೆಂದರು.
ಇದೇ ಸಂಧರ್ಭದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ನೆನೆದ ಅವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರು ದಕ್ಷರಾಗಿದ್ದು, ಜೈ ಕಿಸಾನ್ ಜೈ ಜವಾನ್ ಘೋಷಣೆ ಮಾಡುವ ಮೂಲಕ ದೇಶ ಕಟ್ಟಿದ್ದನ್ನು ಸ್ಮರಿಸಿದರು.
ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಉದಯಶಂಕರ್, ಪ್ರಸಾದ್ ಬಾಬು, ನಗರಸಭೆ ಮಾಜಿ ಸದಸ್ಯ ಸೋಮಶೇಖರ್, ವೆಂಕಟಪತಿ, ಮೀನುಗಾರಿಕಾ ವಿಭಾಗದ ರಂಗನಾಥ್, ಕಾರ್ಮಿಕ ಘಟಕದ ಯಲ್ಲಪ್ಪ, ಎಸ್ಟಿಘಟಕದ ನಾಗರಾಜ್, ಗಂಗಮ್ಮನಪಾಳ್ಯ ರಾಮಯ್ಯ, ಓಬಿಸಿ ಮಂಜುನಾಥ್, ಮಂಜುನಾಥ್, ಸೇವಾದಳ ಜಿಲ್ಲಾಧ್ಯಕ್ಷ ಹರಿನಾಥ್, ಪರ್ವೀಸ್, ಮಂಜುನಾಥ್, ನರಸಾಪುರ ಬಾಬು, ಮಾರ್ಜೇನಹಳ್ಳಿ ಬಾಬು, ನಾಗೇಶ್, ಮಿಲ್ಟ್ರಿ ರಾಮು, ಅತಾವುಲ್ಲಾ, ಪ್ಯಾರಾಜಾನ್, ಬಾಬ್‌ಜಾನ್ ಇದ್ದರು.