ದಸಾರ ಕ್ರೀಡಾ ಕೂಟಕ್ಕೆ ಕೋಲಾರ ಬ್ಯಾಸ್ಕೆಟ್ ಬಾಲ್ ಚಿಕ್ಕಬಳ್ಳಾಪುರ ಪುಟ್ಬಾಲ್ ತಂಡ ಆಯ್ಕೆ
ಕೋಲಾರ,ಅ,೪-ಮೈಸೂರಿನ ದಸಾರ ಪ್ರಯುಕ್ತ ರಾಜ್ಯ ಕ್ರೀಡಾ ಸ್ವರ್ಧೆಗೆ ಕೋಲಾರದಿಂದ ಬ್ಯಾಸ್ಕೆಟ್ ಬಾಲ್ ಹಾಗೂ ಚಿಕ್ಕಬಳ್ಳಾಪುರ ಪುಟ್ಬಾಲ್ ತಂಡವು ಆಯ್ಕೆಯಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇರ್ಶಕಿ ಆರ್.ಗೀತಾ ತಿಳಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬ್ಯಾಸ್ಕೆಟ್ ಬಾಲ್ ಮತ್ತು ಪುಟ್ಬಾಲ್ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರು ಗ್ರಾಮಾಂತರ ಮಟ್ಟದ ವಿಭಾಗದ ದಸರಾ ಕ್ರೀಡಾ ಕೊಟ ೨೦೨೪-೨೫ನೇ ಸಾಲಿನಲ್ಲಿ ಕ್ರೀಡಾಕೊಟವನ್ನು ನಗರದ ಸರ್.ಎಂ.ವಿಶ್ವೇರಯ್ಯ ಜಿಲ್ಲಾ ಕ್ರೀಡಾಂಗಣ ಹಾಗೂ ಮಿನಿ ಕ್ರೀಡಾಂಗಣದಲ್ಲಿ ಸೆ,೨೮ ರಿಂದ ಸೆ ೩೦ರವರೆಗೆ ಮೂರು ದಿನಗಳ ಕಾಲ ಆಯೋಜಿಸಿ ಯಶಸ್ಸಿಯಾಗಿದೆ ಎಂದರು.
ಕೋಲಾರ ತಂಡವು ಬ್ಯಾಸ್ಕೆಟ್ ಬಾಲ್ ಮತ್ತು ಚಿಕ್ಕಬಳ್ಳಾಪುರ ಪುಟ್ಬಾಲ್ ತಂಡ ಜಯಬೇರಿ ಬಾರಿದ್ದು, ಮೈಸೂರಿನ ದಸರಾದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೊಟಕ್ಕೆ ಕೋಲಾರ ವಿಭಾಗದಿಂದ ಆಯ್ಕೆಯಾಗಿದೆ. ವಿಜೇತರಾದ ಪ್ರಥಮ ಸ್ಥಾನ ಪಡೆದ ತಂಡಗಳನ್ನು ದಸಾರ ಕ್ರೀಡಾ ಕೊಟಕ್ಕೆ ಬುಧವಾರ ಕಳುಹಿಸಲಾಗುತ್ತಿದೆ.
ಈ ಕ್ರೀಡಾ ಕೊಟದ ಸ್ವರ್ಧೆಗಳಲ್ಲಿ ಕೋಲಾರ ವಿಭಾಗದಿಂದ ಕೋಲಾರ ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳು ಸೇರಿದಂತೆ ೮ ಜಿಲ್ಲೆಗಳು ಭಾಗವಹಿಸಿದ್ದವು ಎಂದು ಹೇಳಿದರು,
ಮೈಸೂರಿನಲ್ಲಿ ನಡೆಯುವ ದಸಾರ ಕ್ರೀಡಾ ಕೊಟದಲ್ಲಿ ಸುಮಾರು ೮ ರಿಂದ ೧೦ ಸಾವಿರ ಮಂದಿ ಕ್ರೀಡಾ ಪಟುಗಳು ಭಾಗವಹಿಸಲಿದ್ದಾರೆ. .ಎಲ್ಲಾ ಕ್ರೀಡಾ ಪಟುಗಳಿಗೆ ಊಟ ಮತ್ತು ವಸತಿ ಸೌಲಭ್ಯವನ್ನು ಕ್ರೀಡಾ ಇಲಾಖಾವತಿಯಿಂದ ಆಯೋಜಿಸಲಾಗಿದೆ, ದಸಾರ ಕ್ರೀಡಾ ಕೊಟಕ್ಕೆ ಮುಖ್ಯ ಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು
ದಸಾರ ಕ್ರೀಡಾ ಕೊಟದ ಸ್ವರ್ಧೆಗೆ ಕ್ರೀಡಾ ಪಟುಗಳಲ್ಲಿ ಈ ಭಾರಿ ಹೆಚ್ಚಿನ ಉತ್ಸಾಹದ ಜೂತೆಗೆ ಪೈಪೋಟಿ ಸ್ವರ್ಧೆ ಏರ್ಪಟ್ಟಿದೆ. ದಸಾರ ಕ್ರೀಡಾ ಕೂಟದಲ್ಲಿ ಕೋಲಾರದ ಪ್ರತಿಭೆಗಳು ಜಿಲ್ಲೆಗೆ ಉತ್ತಮವಾದ ಪ್ರಶಸ್ತಿಗಳನ್ನು ತರುವರೆಂಬ ವಿಶ್ವಾಸವಿದೆ ಎಂದು ಆರ್.ಗೀತಾ ವಿವರಿಸಿದರು