ಗಾಂಧಿ, ಶಾಸ್ತ್ರೀಜಿ ಆದರ್ಶ ಪಾಲಿಸಿ-ಓ.ಮಲ್ಲಿಕಾರ್ಜುನ್
ಕೋಲಾರ,ಅ,೪-ವಿದ್ಯಾರ್ಥಿಗಳು ಜೀವನದಲ್ಲಿ ಮಹಾತ್ಮ ಗಾಂಧೀಜಿ ಅವರ ಅಹಿಂಸಾ,ಸ್ವಾವಲಂಬಿ ಬದುಕಿನ ಆದರ್ಶ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರ ಪ್ರಾಮಾಣಿಕತೆ,ದಕ್ಷತೆ ಮೈಗೂಡಿಸಿಕೊಂಡು ಸಮಾಜ ಹಾಗೂ ದೇಶದ ಆಸ್ತಿಯಾಗಬೇಕು ಎಂದು ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯಶಿಕ್ಷಕ ಒ.ಮಲ್ಲಿಕಾರ್ಜುನ ಕರೆ ನೀಡಿದರು.
ಶಾಲೆಯ ಆವರಣದಲ್ಲಿ ನಡೆದ ವಿಶ್ವ ಅಹಿಂಸಾ ದಿನಾಚರಣೆ ಪ್ರಯುಕ್ತ ಮಹಾತ್ಮ ಗಾಂಧಿ ಹಾಗೂ ಜೈ ಜವಾನ್ ಜೈ ಕಿಸಾನ್ ಎಂದು ಘೋಷಣೆ ಮಾಡಿದ ದೇಶದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿ ಸೇರಿದಂತೆ ಅನೇಕರು ತಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಟ ನಡೆಸಿದರು. ಅವರ ಸತ್ಯಾಗ್ರಹ, ಅಹಿಂಸಾ ತತ್ವಕ್ಕೆ ಬ್ರಿಟೀಷರು ಭಾರತ ಬಿಟ್ಟು ಹೋದರು ಎಂದು ತಿಳಿಸಿದರು.
ಶಾಸ್ತ್ರೀಜಿ ಅವರು ತಮ್ಮ ಪ್ರಾಮಾಣಿಕತೆಯಿಂದ ಹೆಸರಾದವರು, ಪಾಕಿಸ್ತಾನ್‌ಅನ್ನು ಯುದ್ದದಲ್ಲಿ ಸೋಲಿಸಿ ತಕ್ಕ ಪಾಠ ಕಲಿಸಿದ ಅವರಲ್ಲಿನ ಪ್ರಾಮಾಣಿಕತೆ, ದೇಶಪ್ರೇಮ, ಕರ್ತವ್ಯ ನಿಷ್ಟೆ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ಗಾಂಧೀಜಿ ಅವರ ಕನಸಾದ ಸ್ವಚ್ಛತೆ, ಅದರಂತೆ ಶಾಲಾ ಆವರಣದಲ್ಲಿ ಸ್ವಚ್ಚತೆ ಮಾಡಲಾಯಿತು ನಂತರ ಸ್ವಚ್ಚತಾ ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಪ್ರಿಯವಾದ ಸರ್ವ ಧರ್ಮ ಪ್ರಾರ್ಥನೆ. ವಿದ್ಯಾರ್ಥಿಗಳಿಂದ ಭಾಷಣ ನಂತರ ೨೦೨೨-೨೩ ನೆ ಸಾಲಿನಲ್ಲಿ ಹತ್ತನೇ ತರಗತಿ ಯಲ್ಲಿ ಪರೀಕ್ಷೆಯಲ್ಲಿ ಕೋಲಾರ ತಾಲೂಕಿನಲ್ಲಿ ೬೨೫/೬೦೯ಅಂಕ ಗಳಿಸಿದ ಕುಮಾರಿ ಬೃಂದಾಶ್ರೀರಿಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಉಚಿತವಾಗಿ ನೀಡಿದ ಲ್ಯಾಪ್ ಟ್ಯಾಪ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಮೂರ್ತಿ,ಗೌರವಾಧ್ಯಕ್ಷ ಅನಿಲ್ ಕುಮಾರ್ ಗ್ರಾಮಪಂಚಾಯ್ತಿ ಅಧ್ಯಕ್ಷ ರಮೇಶ್, ಸದಸ್ಯರಾದ ಜಂಶೀರ್ ಪಾಷಾ, ಅಮ್ಜದ್ ಪಾಷಾ, ನೂರುಲ್ಲಾ, ಎಸ್‌ಡಿಎಂಸಿ ಸದಸ್ಯರಾದ ಪ್ರಕಾಶ್, ಶ್ರೀರಾಮಪ್ಪ, ಮುಖ್ಯ ಶಿಕ್ಷಕ ಓ. ಮಲ್ಲಿಕಾರ್ಜುನ, ಶಿಕ್ಷಕರಾದ ಸುಬ್ರಹ್ಮಣ್ಯಚಾರಿ,ರಾಮಲಿಂಗಪ್ಪ,ಶ್ರೀನಿವಾಸ್, ಧನ್ಯ ಕುಮಾರ್, ರಾಮಂಜಪ್ಪ,ನಾಗರಾಜ್,ದೇವರಾಜ್,ಅಮರ್,ಜ್ಯೋತಿ, ಗೀತಾ, ಜ್ಯೋತಿ ಲಕ್ಷ್ಮೀ, ಸಂಗೀತ ಅಂಗಡಿ, ಸಯೀದ್ ಉನ್ನಿಸ,ಅಂಬಿಕಾ, ಮಾನಸ ಇದ್ದರು.