ಓಲಾ ದ್ವಿಚಕ್ರ ವಾಹನಗಳ ಶೋರೂಂಗೆ ಬೆಂಕಿ
ಕಲಬುರಗಿ:ಸೆ.10: ಓಲಾ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಶೋರೂಂಗೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ಹಾನಿಯಾದ ಕುರಿತು ನಗರದ ಹುಮ್ನಾಬಾದ್ ವರ್ತುಲ ರಸ್ತೆಯಲ್ಲಿರುವ ಪ್ರದೇಶದಲ್ಲಿ ಮಂಗಳವಾರ ವರದಿಯಾಗಿದೆ.
ಶೋರೂಂನ ಮಾಲಿಕ ತನ್ನ ಅಂಗಡಿ ತೆರೆಯುವ ಮುನ್ನವೇ ಬೆಂಕಿ ಹೊತ್ತಿಕೊಂಡಿದ್ದು, ಶಾರ್ಟ್ ಸಕ್ರ್ಯೂಟ್‍ನಿಂದ ಅನಾಹುತ ಸಂಭವಿಸಿದೆ ಎನ್ನಲಾಗಿದೆ.
ಬೆಂಕಿಯು ಇಡೀ ಶೋರೂಂಗೆ ವ್ಯಾಪಿಸಿದ್ದು, ಅನಾಹುತದಲ್ಲಿ ಆರು ಎಲೆಕ್ಟ್ರಿಕಲ್ ದ್ವಿಚಕ್ರವಾಹನಗಳು, ಲ್ಯಾಪ್‍ಟಾಪ್, ಎಸಿ ಸೇರಿದಂತೆ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕದಳದ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಶಮನಗೊಳಿಸುವ ಮೂಲಕ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದರು. ಈ ಕುರಿತು ನಗರದ ಚೌಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.