ಸೆ.15 ರಂದು ಮಾನವ ಸರಪಳಿ
ಕಲಬುರಗಿ:ಸೆ.10: ಇದೆ ಸೆಪ್ಟೆಂಬರ್ 15ರಂದು ಕರ್ನಾಟಕ ಸರ್ಕಾರದಿಂದ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಬೀದರ ಜಿಲ್ಲೆಯಿಂದ ಚಾಮರಾಜನಗರದವರೆಗೆ ಅಂದಾಜು ಒಂದು ಲಕ್ಷ ಜನ ಬೇಕಾಗುತ್ತಾರೆ. ವಿವಿಧ ಹಾಸ್ಟೇಲ್ ಹೈಸ್ಕೂಲ್ ರಾಜ್ಯದ್ಯಾದಂತ ಏಕಕಾಲಕ್ಕೆ ದಾಖಲೆ ಪ್ರಮಾಣದಲ್ಲಿ ಮಾನವ ಸರಪಳಿ ರಚಿಸಲಾಗುತ್ತಿದ್ದು, ಜಿಲ್ಲೆ ಮತ್ತು ತಾಲೂಕಿನ ಜನತೆ ಉತ್ಸಾಹದಿಂದ ಇದರಲ್ಲಿ ಭಾಗವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಮನವಿ ಮಾಡಿದಾರೆ.
ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಭೆ ಉದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅಂದಾಜು 116 ಕಿ.ಮಿ ಉದ್ದದ ಮಾನವಸರಪಳಿ ರಚಿಸಲಾಗುತ್ತಿದೆ ಒಂದು ಕಿ.ಮಿ ಮೀಟರ್‍ಗೆ ಒಂದು ಸಾವಿರ ಜನ 116 ಕಿ.ಮಿಗೆ ಒಂದು ಲಕ್ಷ ಜನರು ನಾವು ಸೇರಿಸಬೇಕು ಎರಡೆರಡು ಜನ ಸಿಬ್ಬಂದಿ ವರ್ಗದವರನ್ನು ನೇಮಿಸಲಾಗುತ್ತಿದೆ ಹಾಗೂ 100 ಕಿ.ಮಿ. ಗೆ ಒಬ್ಬ ಅಧಿಕಾರಿಗಳು ಇರಬೇಕು ಎಂದು ಹೇಳಿದರು.
ಅಂದು ಬೆಳಿಗ್ಗೆ 9 ಗಂಟೆಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವ ಸಾರಲಾಗುತ್ತದೆ ತದನಂತ 9:15 ಗಂಟೆಗೆ ಸಂವಿಧಾನ ಪೀಠಿಕೆ ವಾಚನ 9:30 ಗಂಟೆಗೆ ಕೊನೆಯದಾಗಿ ಜೈ ಹಿಂದ್-ಜೈ ಕರ್ನಾಟಕ ಘೋಷಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಹೀಗಾಗಿ ಜಿಲ್ಲೆಯ ಎಲ್ಲ ಅಧಿಕಾರಿ ನೌಕರ ಬಂಧುಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಮಹಿಳಾ ಸ್ವ ಸಂಘದ ಸದಸ್ಯರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಿದ್ದಾರೆ. ಜಿಲ್ಲೆಯ ಕಮಲಾಪೂರ ತಾಲೂಕಿನ ಕಿಣ್ಣಿಸಡಕ್‍ನಿಂದ ದೇವಲ್ ನಾಯಕ ತಾಂಡಾ ದವರೆಗೆ ಒಟ್ಟು 34 ಗ್ರಾಮಗಳು ಸೇರಿ ಹಾಗೂ ಸೆಕ್ಟರ್ ಆಫೀಸರಗಳು ಪೊಲೀಸರು ಸಂಬಂಧ ಪಟ್ಟ ಅಧಿಕಾರಿಗಳು ಉಪಸ್ಥಿತರಿರುವರು ಎಂದು ಹೇಳಿದರು.