15 ರಿಂದ 35ನೇ ವರ್ಷದ ಒಳಗೆ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಶರಣಾಗುತ್ತಿದ್ದಾರೆ: ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ನವಲೆ
ಕಲಬುರಗಿ:ಸೆ.10: 2023-24ನೇ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಮತ್ತು 15 ರಿಂದ 35ನೇ ವರ್ಷದ ಒಳಗೆ ಇರುವ ಯವಕ ಯುವತಿಯರೇ ಹೆಚ್ಚು ಆತ್ಮಹತ್ಯೆಯನ್ನು ಮಾಡಿ ಕೊಳ್ಳುತ್ತಿರುವುದು ಕಂಡು ಬಂದಿದ್ದು ಒಬ್ಬಬ ವಿದ್ಯಾರ್ಥಿಗಳು ಒಂದೊಂದು ಪ್ರತಿಭೆಯನ್ನು ಹೊಂದಿರುತ್ತಾರೆ ಅಂತಹ ವಿದ್ಯಾರ್ಥಿಗಳನ್ನು ಕಳೆದುಕೊಂಡ ದೇಶ ಸಮಾಜಕ್ಕೆ ಎಷ್ಟೊಂದು ಹಾನಿ ಆಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ತಿಳಿಸಿದರು.
ಮಂಗಳವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಹೈ.ಕ.ಶಿ.ಸಂಸ್ಥೆಯ ಮಾತೋಶ್ರೀ ತಾರಾದೇವಿ ರಾಂಪುರೆ ಔಷಧ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ” ಕುರಿತು ಅರಿವಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
20 ವರ್ಷಗಳ ಇಂದಿನ ಇತಿಹಾಸ ನೋಡಿದರೆ ಅತಿಹೆಚ್ಚು ರೀತಿಯಲ್ಲಿ ರೈತರು, ವಿದ್ಯಾರ್ಥಿಗಳು, ಮಾನಸಿಕ ಅಸ್ಥವಸ್ಥೆಯಿಂದ ಬಳಲುತ್ತಿರುವ ಮಾನಹಾನಿ, ಪ್ರೀತಿಪಾತ್ರದ ಸಾವು-ನೋವುಗಳು ಹಾಗೂ ಸಾಲ ವೈಯಕ್ತಿಕ ನಷ್ಟ ಗುಣಪಡಿಸಲಾಗದ ದೈಹಿಕ ಖಾಯಿಲೆಗಳು ಕೌಟುಂಬಿಕ ಸಮಸ್ಯೆಗಳಿಂದ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಮನುಷ್ಯನಿಗೆ ಇರದೇ ಕಾಡು ಪ್ರಾಣಿಗಳಿಗೆ ಸಮಸ್ಯೆ ಬರುತ್ತದೆಯೇ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ|| ರಾಜಕುಮಾರ ಎ ಕುಲಕರ್ಣಿ ಪ್ರತಿ ವರ್ಷ 10ನೇ ಸೆಪ್ಟೆಂಬರ್ ನಂದು ವಿಶ್ವ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಆಚರಿಸುತ್ತೇವೆ ಹಾಗೂ ಯಾವುದೇ ರೀತಿಯ ಮಾನಸಿಕ ಆರೋಗ್ಯ ಕಾಯಿಲೆ ಇದ್ದಲ್ಲಿ ಹತ್ತಿರದ ಸಕಾ9ರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಕೋಳ್ಳಬೇಕು, ಯಾವುದೇ ರೀತಿ ಮಾನಸಿಕ ಆರೋಗ್ಯ ಕಾಯಿಲೆ ಯಿಂದ ಬಳಲುತ್ತಿದರೆ ಉಚಿತ ಆಪ್ತ ಸಮಾಲೋಚನೆ ಗಾಗಿ 14416 ಟೇಲಿ ಮಾನಸ್ ಗೆ ಉಚಿತ ಸಹಾಯವಾಣಿ ಗೆ ಕರೆಮಾಡಲು ತಿಳಿಸಿದರು,