ಬಾಲಕಿಯ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ
ಚಿಂಚೋಳಿ,ಸೆ.10- ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿ ಕೋಲಿ ಸಮಾಜದ ಬಾಲಕಿಯನ್ನು ಕೊಲೆ ಮಾಡಿ ಹೇಯ ಕೃತ್ಯವೆಸಗಿದ ಕಿಡಗೇಡಿಗಳನ್ನು ಗಲ್ಲಿಗೇರಿಸಿ, ರಾಜ್ಯ ಸರ್ಕಾರವು ಮಹಿಳಾ ರಕ್ಷಣಾ ಯೋಜನೆಯನ್ನು ಜಾರಿಗೆ ತರಲು ಒತ್ತಾಯಿಸಿ ತಾಲ್ಲೂಕಿನ ಚಂದಾಪುರ ಪಟ್ಟಣದ ತಾಂಡೂರ ಕ್ರಾಸ್ ನಿಂದ
ತಹಸಿಲ್ ಆವರಣದವರೆಗೂ ಪ್ರತಿಭಟಿನಾ ಮೆರವಣಿಗೆ ನಡೆಸಲಾಯಿತು.
ತಾಲ್ಲೂಕು ಕೋಲಿ ಸಮಾಜ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಬಸವಕಲ್ಯಾಣ ತಾಲ್ಲೂಕಿನಲ್ಲಿ ನಡೆದ ಈ ಪ್ರತಿಭಟನೆ ಬಾಲಕಿಯ ಕೊಲೆ ಪ್ರಕರಣವನ್ನು ಖಂಡಿಸಿ ತಹಸೀಲ್ದಾರ್ ರ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಶರಣರ ನಾಡಿನಲ್ಲಿ ಇಂತಹ ಕೃತ್ಯ ನಡೆದಿರುವುದು ಇಡೀ ಮನುಕುಲಕ್ಕೆ ನಾಚಿಕೆಯಾಗುವಂತದ್ದು, ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು, ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ನೀಡಬೇಕು ಅಲ್ಲದೇ ಮೃತ ಬಾಲಕಿಯ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಗೋಪಾಲರಾವ ಕಟ್ಟಿಮನಿ, ಲಕ್ಷ್ಮಣ ಆವುಂಟಿ,ಹಣಮಂತ ಪೂಜಾರಿ, ಮಾರುತಿ ಬಿ ಗಂಜಗಿರಿ,ಶರಣು ಪಾಟೀಲ ಮೊತಕಪಳ್ಳಿ,ರೇವಣಸಿದ್ದಪ್ಪ ಅಣಕಲ,ಆರ್ ಗಣಪತರಾವ,ಕೆ.ಎಂ ಬಾರಿ ಕೃತ್ಯದ ಕುರಿತು ಖಂಡಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗುಂಡಪ್ಪ ಅವರಾದಿ,ಶರಣು ನಾಟಿಕಾರ, ಗೋಪಾಲ ಗಾರಂಪಳ್ಳಿ,ಸುರೇಶ ದೇಶಪಾಂಡೆ, ಆನಂದ ಹಿತ್ತಲ,ರಾಜು ತೋಡಿ,ಮೌನೇಶ ಮುಸ್ತರಿ ಸೇರಿದಂತೆ ಇನ್ನಿತರರು ಕಂಡು ಬಂದರು.